ಪುಟ:ವತ್ಸರಾಜನ ಕಥೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೬ - ಕರ್ಣಾಟಕ ಕಾವ್ಯಕಲಾನಿಧಿ - ನವಿಲುಮರಿಗಳ ಆಸೆಯನ್ನು ಸಂಪೂರ್ಣವಂ ಗೆಯ್ಯುವ ಜಲಧಾರಾಯಂತ್ರದ ಸೊಗಸನ್ನೂ, ಸಹ ನೋಡುತ್ತ, ಅಲ್ಲಲ್ಲಿರುವ ಮೃಗಪಕ್ಷಿಗಳ ವಿಚಾರಣೆಯಂ ತೆಗೆದು ಕೊಳ್ಳುತ್ತಿರುವಲ್ಲಿ ; ಇತ್ತಲು, ವಾಸವದತ್ತಾ ದೇವಿಯು ಆ ಸಾಗರಿಕೆಯಲ್ಲಿ ಅತ್ಯಂತ ವಿಶ್ವಾಸವಂ ತಾಳಿ, ಅಪೂತ್ವವಾಗಿ ಬಂದ ಫಲಗಳನ್ನೂ ತನಗೆ ಯೋಗ್ಯವಾದ ಮೃಷ್ಟಾನ್ನದ ಎಡೆಯನ್ನೂ, ಗಂಧ ತಾಂಬೂಲ ಮುಂತಾದ ವಸ್ತುಗಳನ್ನೂ ಸಹ ಕಳುಹಿಸುತ್ತ ಬರಲು ; ಕಾಂಚನಮಾಲೆಯು ಸಾಗರಿಕೆಗೆ ಉಂಟಾಗುವ ಮತ್ಯಾದೆಯಂ ನೋಡಿ ಮನದಲ್ಲಿ ಅಸೂಯೆಯಂ ಪೊಂದಿ- ನಾನು ಬಾಲ್ಯದಿಂದಲೂ ದೇವಿಯ ಕಟಾಕ್ಷಕ್ಕೆ ಪಾತ್ರಳಾಗಿದ್ದರೂ ಈ ಸಾಗರಿಕೆಗೆ ಉಂಟಾಗುವ ಮರಾದೆಯನ್ನು ಒಂದು ದಿನವಾ ದರೂ ಪಡೆಯಲಿಲ್ಲ. ' ದೊರೆಗಳಾದವರು ನೂತನಪ್ರಿಯರೆಂಬುವುದು ' ನ್ಯಾಯವೇ ಸರಿ, ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲು ; ಒಂದು ದಿನ ವಾಸವದತ್ತಾ ದೇ ವಿಯು-ಪತ್ನಿಶಾಲೆಯಲ್ಲಿ ನೂತನವಾಗಿ ಬಂದ ನಾಗರಿಕೆಯು ಶುಕ ಪಿಕ ಮೊದಲಾದ ಪಕ್ಷಿಗಳನ್ನು ಹೇಗೆ ಸಂರಕ್ಷಿಸುತ್ತಿರುವಳೋ ನೋಡಬೇಕೆಂದು ಯೋಚಿಸಿ, ಊಳಿ ಗದ ಹೆಣ್ಣು ಗಳನ್ನು ಸಂಗಡ ಬಾರದಂತೆ ಪೇಳಿ, ಕಾಂಚನಮಾಲೆಯ ಕೈಲಾಗವಂ ತೆಗೆದುಕೊಂಡು ಬರುತ್ತಾ, ಕಾಂಚನಮಾಲೆಯಂ ಕುರಿತು ಎಲೆ, ಕಾಂಚನಮಾ ಲೆಯೆ, ಈಗ ಬಂದಿರುವ ನಾಗರಿಕೆಯು ವರ್ತಕನ ಮಗಳಾಗಿರುವಳೋ, ರಾಜಪ್ಪ ತಿಯಾಗಿರುವಳೋ ? ನಿನ್ನ ಬುದ್ದಿಗೆ ಹೇಗೆ ತೋರುವುದು ? ” ಎನಲು ; ಕಾಂನ ಮಾಲೆಯು ಮೊದಲೇ ಅವಳಲ್ಲಿ ಅಸೂಯೆಯನ್ನು ತಾಳಿರುವಳಾದುದರಿಂದ ದೇವಿಯಂ ಕುರಿತು- ಎಲೌ ಪೂಜ್ಯಳಾದ ದೇವಿಯ, ಕೇಳು, ನಿಮ್ಮ ಪಿತ್ತಕೆ ಆಯಾಸವು ತೋರಿದರೂ ತೋರಲಿ, ಒಂದು ವಿಜ್ಞಾಪನಾ ವಾಕ್ಯವನ್ನು ವಿಜ್ಞಾಪಿಸುವೆನು. ಈ ಸಾಗರಿ ಕೆಯೆಂಬವಳು ಯಾರ ಮಗಳಾದರೂ ಆಗಲಿ, ಅವಳು ರೂಪವತಿ ಯೆಂದು ಅಂತಃಪುರವನ್ನು ಸೇರಿಸಿಕೊಂಡುದು ನೆತ್ತಿಯಲ್ಲಿ ರತ್ನ ವಿರುವುದೆಂದು ಸರ್ಪ ವನ್ನು ತಂದು ಮಗ್ಗುಲಲ್ಲಿ ಸೇರಿಸಿಕೊಂಡಂತಾದುದು, ನಮ್ಮ ರಾಜೇಂದ್ರನು ಕಾಮನಿಗೂ ಕಲಾಶಾಸ್ತ್ರವಂ ಕಲಿಸುವ ಶೃಂಗಾರಶೇಖರನೆಂಬುವುದು ನಿಮ್ಮ ಚಿತ್ರಕೆ ವೇದ್ಯವಾಗಿಯೇ ಇದೆ. ಕಣ್ಣಿಗೆ ಬಣ್ಣವಾಗಿರುವುದೆಂದು ತೊಟ್ಟಿಯ ಪಣ್ಣನ್ನು ಮೆಲ್ಲಲು ಕಹಿಯಾಗಿ ತೋರದೆ ಇರಲಾರದು. ಯಾವ ವಸ್ತುವಿನಿಂದ ತನಗೆ ಮೋ ಸವು ತೋರುತ್ತಾ ಇದೆ ಎಂದು ಮನಸ್ಸಿಗೆ ತಿಳಿದಾಗಲೆ, ಆ ವಸ್ತುವನ್ನು ಮೊದಲು ದೂರವಾಗಿ ತ್ಯಜಿಸಿಬಿಡಬೇಕು. ಅದಲ್ಲದಿದ್ದರೆ ಹುಚ್ಚುನಾಯಿಯ ವಿಷವು ಮುಂಗಾ ರು ಗುಡುಗಿನ ಧ್ವನಿಯನ್ನು ಕೇಳಿದಾಕ್ಷಣದಲ್ಲಿಯೆ ಕೆರಳಿಕೊಂಡು ಪ್ರಾಣಸಂಕಟವ ನ್ನುಂಟುಮಾಡುವಂತೆ ಕಾಲಾನಂತರದಲ್ಲಿ ವಿಪತ್ತಿಗೆ ಕಾರಣವಾಗದೆ ಪೋಗದು. ಇವಳು ನಮ್ಮ ರಾಜೇಂದ್ರನಿಗೆ ಕಣ್ಣಿಗೆ ಗೋಚರವಾದ ಬಳಿಕ ಇವಳ ಮೇಲೆ ನಿಮ್ಮ ಆ