ಪುಟ:ವತ್ಸರಾಜನ ಕಥೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸಲಾಜನ ಕಥ, --- ಇ? ಳಾಗಿದ್ದಲ್ಲಿ ನಿನಗೆ ಮನ್ನಣೆಯು ಉಂಟಾಗುವುದೆ ಪೇಳು. ಎಲೆ ಮಂದಗಮನೆಯ, ದಿನಕೊಂದು ಹಜ್ಜೆಯನ್ನಿಡದೆ ಶೀಘ್ರದಿಂ ಪೋಗಿ, ಸಿರಿಯಂತೆ ಮೆರೆಯುವ ದೇವಿ ಯರು ಬರುವ ದಾರಿಯಲ್ಲಿ ಪಾದಗಳು ಒದಂತೆ ತೊಟ್ಟು ತೆಗೆದ ಜಾಜಿಯ ಪುಷ್ಪ ಗಳಂ ಸುರಿದು ನಯವಾದ ಸೂರಪಟದ ನಡೆಮುಡಿಯಂ ಹಾಸದೆ, ಮಾಸದ ಮೈ। ಬಣ್ಣವನಾಂತು ನಿಂತಿರುವ ನಿನ್ನ ಕಂಡು ದೇವಿಯು ಮೀಸಲಳಿಯದೆ ಬಿಡಳು. ಎಲೆ ಕಲವಾಣಿಯೇ, ನೀನು ಬಲುಹೊತ್ತಿನಿಂದ ಮಲೆಯು, ಪಲಬಗೆಯ ಪಕ್ಷಿಗಳಂ ನೋಡುತ್ತ, ಚೆಲುವಾದ ಸಂಗೀತವಂ ತೊರೆದು, ಮಂದಮತಿಯಂತೆ ಹಿಂದು ಮುಂದ ನರಿಯದೆ ದೇವಿಯ ಸೇವೆಯಂ ಮರೆತು, ನಿಂದಿರುವುದು ನ್ಯಾಯವೆ ವೇಳು ?” ಎಂದು ಸಖಿಯರಿಗೆ ಬುದ್ದಿಯಂ ವೇಳುತ್ತಿದ್ದಳು. ಎಂಬಲ್ಲಿಗೆ ಶ್ರೀ ಕೃಷ್ಣರಾಜ ಕಂಠೀರವರಿ, ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಣರಾಜ ಸೂ ಕಿವು ಕಾವ'ವೆಂಬ ಗ್ರಂಥದೊಳೆ ಪಂಚವ, ಗಚ್ಛಂ ಸಂಪೂರ್ಣ೦. ಸ ಪಪ್ಪ ಗುಚ್ಛಂ. C| ಅನಂತರದಲ್ಲಿ ನಾಗರಿಕೆಯು ಮರಳಿ ಅಲ್ಲಲ್ಲಿರುವ ನಾರಿಯರ ಕುರಿತು - ಎಲೆ ಚಂಚಲಾಕ್ಷಿಯೇ, ಕದ್ದಾಳೆಯ ಮರದ ಕತ್ತಲೆಯು ಹೊದ್ದ ದಂತೆ ಮುದ್ದಾದ ರತ್ನ ದೀಪವಂ ಬಿಟ್ಟು ಕಾದಿರುವುದಂ ಬಿಟ್ಟು ಸೊಗಸಾಗಿರುವ ಬಗಸೆಗಣ್ಣುಗಳ ಕಾಂತಿ ಯಂ ಪಸರಿಸಿ ಪಕ್ಷಿಗಳ ಪಾರಿಸುತ್ತ ನಿಂತಿರುವುದು ನೀತಿಯ ಪೇಳು. ಎಲೆ ಮದ ವತಿಯೇ, ದೇವಿಯ ಪಾದಸೇವೆಯಂ ತೊರೆದು, ಬೆದೆಯರಿಯದೆ, ಸೆರಗಂ ಮರೆದು, ಮೇರೆಯ ಮಿಾರಿ, ಮದನಂಗೆದೆಗೊಟ್ಟವಳ೦ತೆ ತಾರುಮಾರಾಗಿ ಓರೆದುರುಬನ್ನಿಟ್ಟು ಬಾರಿಬಾರಿಗೂ ಈ ಪಕ್ಷಿಶಾಲೆಯ ದಾರಿಯಲ್ಲಿ ಸಂಚಾರವಂ ಗೆಯುವುದಕ್ಕೆ ಕಾರಣ ವೇನಿರುವುದು ಪೇಳು. ಎಲೆ ಬಟ್ಟ ಮೊಲೆಯ ಬಾಲೆಯೇ, ಕಟ್ಟದ ಕಾಸೆಯಿಂ ಜಿಗಿದ ಎದೆಗಟ್ಟಿ ನ್ಯೂ ಬಿಚ್ಚದೆ ನಿಟ್ಟುಸಿರಂ ಬಿಡುತ್ತ ಸಜ್ಜು ಗೊಂದ ಗೆಜ್ಜೆಯ ಕಾಲುಗಳ ನಿಟ್ಟು ನಾಟ್ಯದ ಹಂಬಲವ ಬಿಟ್ಟು ವೆಚ್ಚ ಬಿದ್ದವಳಂತೆ ಸಿಟ್ಟುಗೊಂಡು ಮಟ್ಟು ಮಾ ರಿದ ಒಳಲಿಕೆಯಂ ತೊರೆಯದೆ ಮುದ್ದಾದ ಮುಖದ ಬೆಮರುಗಳಂ ಒರೆಸದೆ ಬಿರು ಸಾಗಿ ಹುಬ್ಬುಗಳ೦ ಗಂಟಿಕ್ಕಿ ನಾಟ್ಯಶಾಲೆಯಿಂದ ನಾಚಿಕೆಯಿಲ್ಲದೆ ಬಂದು ನವಿಲು ಗಳ ನಾಟ್ಯವೆ ನೋಡುತ್ತ ನಿಂದಿರುವುದು ಚಂದವೆ ಪೇಳು. ಎಲೆ ಕುಂದರದನೆಯೇ,