ಪುಟ:ವತ್ಸರಾಜನ ಕಥೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ - ಕರ್ನಾಟಕ ಕಾವ್ಯಕಲಾನಿಧಿ, - ಇವಳಾರೋ ಹೊಸಬಳಾಗಿರುವಳೆ೦ದು ಬಾರಿಬಾರಿಗೂ ಸಂಗೀತಶಾಲೆಯ ಬಾಗಿ ಲನ್ನು ನೋಡುತ್ತ ಬರಲು ; ಅಷ್ಟರಲ್ಲೇ ದೇವಿಯು ರಾಯನಂ ಕಂಡು ನಮಸ್ಕಾರವಂ ಗೈದು ಕೈಲಾಗವ ನಿತ್ತು ಪ್ರಶಾಲೆಗೆ ಕರೆದುಕೊಂಡು ಬರುತ್ತಿರಲು ; - ಕಾಂಚನಮಾಲೆಯು ಎಲ್ಲರನ್ನೂ ಸಂಗೀತಶಾಲೆಗೆ ಪೊಗಿಸಿ, ಬಾಗಿಲು ಮುಚ್ಚಿ ಬೀಗವನ್ನು ಹಾಕಿ ಬರಲು ; ಒಳಗಿರುವ ಸುಸಂಗತೆಯು-ಯಾವಾಗಲೂ ರಾಯನು ಬಂದಾಗ ನಡೆಯದೇ ಇದ್ದ ಮತ್ಯಾದೆಯು ಈಹೊತ್ತು ನಡೆಯುವುದಕ್ಕೆ ಈ ಸಾಗರಿಕೆಯು ಕಾರಣಳಾಗಿರುವಳೆಂದು ಯೋಚಿಸುತ್ತಿರಲು; ಸಾಗರಿಕೆಯುಇಲ್ಲಿ ರಾಯನು ಬಂದಾಗ ಈ ಊಳಿಗದ ಪೆಣ್ಣು ಗಳು ನಿಲ್ಲುವ ಮರಾದೆ ಇಲ್ಲವೋ, ಅಲ್ಲದಿದ್ದರೆ ರಾಯನು ಎನ್ನನ್ನು ಕಾಣುವನೆಂಬ ಸಂದೇಹದಿಂದ ದೇವಿಯು ಮಾಡಿದ ಬುದ್ದಿ ಚಮತ್ಕಾರವೋ ತಿಳಿಯಬೇಕೆಂದು ಆಲೋಚಿಸಿ, ಎಲೆ ಸುಸಂಗತೆಯೇ, ಇಲ್ಲಿ ರಾಯನು ಬಂದಾಗ ಊಳಿಗದ ಪೆಣ್ಣು ಗಳು ಎದುರಾಗಿ ನಿಲ್ಲುವ ಮರಾದೆಯು ಇಲ್ಲವೋ ಇನ್ನೇನಾದರೂ ಕಾರಣವಿರುವುದೋ ಪೇಳುವಳಾಗು ? ೨” ಎನಲು ; ಅವಳು-ಈ ಮರಾದೆ ಇಲ್ಲವೆಂದು ನುಡಿದರೆ ತನ್ನ ನಿಮಿತ್ತದಲ್ಲೇ ಈ ರೀತಿಯಾಯಿ ತಂದು ಮನದಲ್ಲಿ ನೊಂದುಕೊಳ್ಳು ವಳೆಂದು ಯೋಚಿಸಿ, “ ಎಲೆ ಕಾಂತೆಯೇ ನಮ್ಮ ಅರಮನೆಯ ರೀತಿಯು ಇದೇ ರೀತಿ ” ಎಂದು ನುಡಿಯಲು ; ರಾಯನು ಮೇಘಮಧ್ಯದಲ್ಲಿ ತೋರಿ ಬಯಲಾದ ಮಿಂಚಿನ ಬಳ್ಳಿಯಂತೆ ಕಾಮನ ಕೈ ಕತ್ತಿಯ ಒರೆಯಂ ಪೊಕ್ಕಂತೆ ಸಂಗೀತಶಾಲೆಯಂ ಪೊಕ್ಕ ಸಾಗರಿಕೆಯ ಹಿಂಬಾಗವಂ ಕಂಡ ಮಾತ್ರದಿಂದಲೇ ಕಳವಳವಂ ಪೊಂದಿ, ೧೦ ಎನಗೆ ಆಪ್ತನಾದ ವಿದೂಷಕನು ಒತ್ತಿನಲ್ಲಿ ಇಲ್ಲ. ಇವಳಾರೆಂದು ದೇವಿಯಂ ಕೇಳುವುದು ಮತ್ಯಾದೆ ಯಲ್ಲ, ಅಥವಾ ಕೇಳಿದರೂ ನಿಜವಾದ ವಾಕ್ಯವಂ ಪೇಳುವಳಲ್ಲ. ಇದಕೆ ಏನು ಪ್ರಯತ್ನ ವಂ ಗೆಯ್ಯಲಿ ? ?” ಎಂದು ಯೋಚಿಸುತ್ತಿರಲು ; ದೇವಿಯು ರಾಯನ ಚಂಚಲದೃಷ್ಟಿಯನ್ನೂ ಏನೋ ಒಂದು ಸರಿಯಾದ ಮುಖರಸವನ್ನೂ ಸಹ ನೋಡಿ, ನಮ್ಮ ಸ್ವಾಮಿಯು ಸಾಗರಿಕೆಯಂ ಕಂಡಂತೆ ತೋರುವುದೆಂದು ಯೋಚಿ ಸುತ್ತಿರಲು ; ಅಷ್ಟರಲ್ಲೇ ಕಲವಾಣಿಯೆಂಬ ಕಾಂತೆಯು ಓಡಿಬಂದು ದೇವಿಯಂ ಕುರಿತು(1 ಎಲೌ ದೇವಿಯೇ, ಮಣಿಹಜಾರದ ಮುಂದುಗಡೆಯಲ್ಲಿ ಕಟ್ಟಿದ್ದ ರತ್ನ ಪಂಜರವು ಕಿತ್ತು ಬೀಳಲಾಗಿ ಅಲ್ಲಿಂದ ಮೇಧಾವಿನಿಯೆಂಬ ಶಾರಿಕೆಯು ವಿಕಾರಸ್ವರದಿಂದ ನಿನ್ನ ( ಪೆಸರಂ ಪಿಡಿದು ಕೂಗುತ್ತಿರುವುದೆಂದು ಬಿನ್ಲೈಸಲು; ದೇವಿಯು ತ್ವರದಿಂದೊಡ ಗೂಡಿ-“ ಎಲೈ ಸ್ವಾಮಿಯೇ, ಪಂಜರವು ಏನು ನಿಮಿತ್ತದಿಂದ ಕಿತ್ತು ಬಿದ್ದು ದೋ? ಅದನ್ನು ವಿಚಾರಿಸುವುದಕ್ಕೆ ಸಂಗಡಲೇ ದಯಮಾಡಿಸಬೇಕು' ಎಂದು ರಾಯನ ಹಸ್ತ