ಪುಟ:ವತ್ಸರಾಜನ ಕಥೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo - ಕರ್ನಾಟಕ ಕಾವ್ಯಕಲಾನಿಧಿ, - ಕಷ್ಟವೆಂಬುವುದು ನಿಶ್ಚಯವೇ ಸರಿ, ಆ ಸೇವಕರಾದವರಿಗೆ ತಮ್ಮ ಶರೀ ರಕ್ಕೂ ತಮಗೆ ಸ್ವಾತಂತ್ರ್ಯ ವಿಲ್ಲವೆಂಬುವ ನೀತಿಯು ನಿಶ್ಚಯವೇ ಸರಿ, ಇಂದಿನ ದಿನದಲ್ಲಾದರೂ ಸುಂದರಾಂಗನಾದ ವತ್ಸ ರಾಜನ ಸಂದರ್ಶನವನ್ನು ಪೊಂದುವೆನೆಂಬ ಆನಂದವೆಲ್ಲವೂ ಮೂಢನ ಮುಂದೆ ಕವಿತ್ವವಂ ಪೇಳಿದಂತಾದುದು, ಇನ್ನು ಮಾಡ ತಕ್ಕುದೇನು! " ಎಂದು ಮನದಲ್ಲಿ ಬಹಳವಾದ ವ್ಯಥೆಯಂ ಪೊಂದು, « ದೇವಿ ಯರ ಅಪ್ಪಣೆಯಾದಂತೆ ನಡೆದುಕೊಳ್ಳುವೆನು ” ಎಂದು ತನ್ನ ಹಸ್ತ್ರದಲ್ಲಿದ್ದ ಮಂ ಗಳದ್ರವ್ಯದ ತಟ್ಟೆಯನ್ನು ಕಾಂಚನಮಾಲೆಯ ಹಸ್ತಕೆ ಕೊಟ್ಟು, ಶಿರವಂ ಬಾಗಿ, ಬರುತ್ತ, ಇದು ರಾಯನು ಎನ್ನನ್ನು ಕಾಣುವನೆಂಬ ಸಂದೇಹವನ್ನು ಪೊಂದಿ ದೇವಿ ಯು ಶಾರಿಕೆಯಂ ನೆಪವಂಗೈದು ಮಾಡಿದ ಭೇದೋಪಾಯವಾಗಿ ತೋರುವುದು, ಈ ರೀತಿಯಾಗಿ ದೇವಿಯ ಮನದಲ್ಲಿ ಸಂದೇಹವೇ ಬಲವಾಗಿದ್ದಲ್ಲಿ ಎನಗೆ ರಾಯನ ಡನೆ ಸಮಾಗಮವೂ ಮನೋರಥಸಂಪೂರ್ತಿಯ ಸಹ ಹೇಗೆ ನಡೆಯುವುದೊ ! ಈಗ ಸುಸಂಗತೆಯ ಹಸ್ತಕ್ಕೆ ಶಾರಿಕೆಯನ್ನಿತ್ತು ಬಂದಿರುವೆನು, ಅವಳು ಫಲಂಗಳನ್ನಿತ್ತು ಶಾರಿಕೆಯಂ ಸಲಹುತ್ತಿರುವಳು. ಆದರೆ ಮನ್ಮಥೋತ್ಸವವನ್ನು ನಮ್ಮ ಅರಮನೆಯಲ್ಲಿ ಮಾಡುವಂತೆ ಇಲ್ಲಿಯ ವಿರಚಿಸುವರೋ ಮತ್ತೊಂದು ಸರಿ ಯಾಗಿ ಗೆಯ್ಯುತ್ತಿರುವರೋ ? ಇದನ್ನು ಸ್ವಲ್ಪ ದೂಗವಾಗಿ ಮರಗಳ ಮರೆಯಂ ಸೇರಿ ನೋಡುತ್ತಿರುವೆನು. ” ಎ೦ದು ಯೋಚಿಸುತ್ತ ಬಂದು, ಜಾಜಿಗಳ ಪೊದ ರನ್ನು ಮರೆಗೊಂಡು ನಿಂದು, “ ನಾನೂ ಇಲ್ಲಿ ಬಲ್ಲಿದನಾದ ಮನ್ಮಥನಂ ಪೂಜಿಸು ವೆನು ?” ಎಂದು ಪುಷ್ಪಗಳಂ ಕೊಯ್ಯುತ್ತಿದ್ದಳು. ಎಂಬಲ್ಲಿಗೆ. ಶಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾದ್ಧವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಣರಾಜ ಸೂಕ್ತಿಮುಕ್ಷಾವಳಿಯೆಂಬ ಗ್ರಂಥದೊಳೆ ರನ ಕಥೆಯಲ್ಲಿ ಎಂಟನೆಯ ಗುಚ್ಛಂ ಸಂಪೂರ್ಣಪ್ಪ,