ಪುಟ:ವತ್ಸರಾಜನ ಕಥೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಪತ್ನರಾಜನ ಕಥ, - ನೇತ್ರಗಳ ಮುಚ್ಚುವ ಪಿಶಾಚ ಸಂಘದಂತೆ ಕತ್ತಲೆಯು ಮೊತ್ತವಾಗಿ ಎತ್ತೆತ್ತಲೂ ಸುತ್ತಿ ಮುತ್ತಿರಲು ; ಸೂರನೆಂಬ ಕೃಷಿಯಂ ಗೆಯ್ಯುವ ಪುರುಷನು ಬಿತ್ತಿದ ತೇ ಜೋಬೀಜಗಳು ಮೊಳಕೆದೋರಿದುವೋ ಎಂಬಂತೆ, ಭೂಮಿಯ ಸೌಭಾಗ್ಯವಂ, ನೋಡಲೋಸುಗ ತಲೆಯನ್ನೆತ್ತಿದ ಫಣಾಮಣಿಗಳೋ ಎಂಬಂತೆ, ಅಲ್ಲಲ್ಲಿ ದೀಪಗಳು ತಲೆದೋರುತ್ತಿರಲು ; ಆ ಕಾಲದಲ್ಲಿ ......... ಚಕೋರಗಳ ಪುಣ್ಯರಾಶಿಯಂತೆ ಇ೦ದನ ಓಲಗಶಾಲೆಯ ರಜತ ಕಲಶದಂತೆ, ಭೂತ್ವದಿಗಂಗನೆಯ ಕೈಗನ್ನಡಿಯಂತೆ, ಮಾರನ ವಿಜಯಧ್ವಜದ ದರ್ಪಣದಂತೆ, ಸೂರಕಿರಣದಿಂ ಪುಟ್ಟಿದ ಸಂತಾಪವಂ ಪೋಗಲಾಡಿಸಲು ಗರನಲಕ್ಷ್ಮಿಯು ಪಿಡಿದ ಜಂತದ ಬೀಸಣಿಗೆಯಂತೆ, ಜಾರಚೋರ ರಿಗೆ ಉಲ್ಕಾಮಂಡಲದಂತೆ, ಶಚಿಯು ಜಯಂತನ ತೊಟ್ಟಿಲಿಗೆ ಕಟ್ಟಿದ ಮುತ್ತಿನ ಸೆಂಡಿನಂತೆ, ಜನರ ನಯನಾನಂದಲತೆಯ ಕಂದವೋ ಎಂಬಂತೆ, ಸಮುದ್ರ ಮಥನ ಕಾಲದಲ್ಲಿ ಪೊರಮಟ್ಟ ಅಮೃತಕಲಶವೋ ಎಂಬಂತೆ, ಗಗನವೆಂಬ ಸರೋವರದಲ್ಲಿ ಸಂಚರಿಸಲೋಸುಗ ಪೋಗುವ ರಾಜಹಂಸಿಯೋ ಎ೦ಬ೦ತೆ, ಇಂದನ ನಂದನವನ ದಲ್ಲಿ ಅರಳಿ ತೋರುವ ಸುಂದರವಾದ ಮಂದಾರಪುಷ್ಟವೋ ಎಂಬಂತೆ, ಚಂದನು ಚ೦ದದಿಂದ ಉದಯಗಿರಿ ಶಿಖರವೆಂಬ ಚಂದ್ರಶಾಲೆಯನ್ನು ಏರಿ, ದಿಕ್ಕಾಂತೆಯರ ಅಂಗಗಳಲ್ಲಿ ನಿಜಕರವನ್ನು ಊರಿ, ಚಕೋರಗಳಿಗೆ ಆನಂದವಂ ತೋರಿ, ಮನ್ಮಥ ಕೀರ್ತಿಯಂ ಹೆಚ್ಚಿಸಿ, ವಿರಹಿಜನರ೦ ಬೆಚ್ಚಿಸಿ, ಮಾನಿನಿಯರ ಮಾನಗ್ರಂಥಿಯಂ ಬಿಚ್ಚಿಸಿ, ಕಾಮಿನಿಯರ ಮನಗಳಲ್ಲವಿವೇಕವಂ ಮುಚ್ಚಿಸಿ, ಚಂದ್ರಕಾಂತತಿಲೆಗಳಲ್ಲಿ ನಿರ್ಮಲಜಲವಂ ತೋರಿಸಿ, ಜನರ ಹೃದಯದಲ್ಲಿ ಕಾಮನ ಕಾಲನೂರಿಸಿ, ಕನ್ನೈದಿಲೆ ಗಳನ್ನು ಅರಳಿಸಿ, ನಿಯುಕ್ತರಾದ ಜನರನ್ನು ನರಳಿಸಿ, ಯತಿಗಳಂ ಮರಳಿಸಿ, ವೃದ್ದಿಯಂ ಪೊಂದುತ್ತಿರಲು ; ಕ್ಷೀರಸಮುದ್ರವು ಮೇರೆದಪ್ಪಿ ಜಗನಂ ವ್ಯಾಪಿಸಿತೋ ಎಂಬಂತೆ, ನಾಟ್ಯವೇಗದಿಂ ಹರನ ತಿರಸ್ಸಿನಿಂ ಬಾರಿ ಲೋಕವಂ ವ್ಯಾಪಿಸಿದ ಗಂಗಾಜಲವೋ ಎಂಬಂತೆ, ಮೂರುಲೋಕದಲ್ಲ ಧೀರನಾದ ಮಾರನ ಕೀರ್ತಿರಾಶಿಯೋ ಎಂಬಂತೆ, ದಿಕ್ಕಾಂತೆಯರ ಒಟ್ಟು ಗೂಡಿದ ಮಂದಹಾಸವೋ ಎಂಬಂತೆ, ಮಾರನೆಂಬ ಚೋರ ನು ಜನಮನವೆಂಬ ದವ್ಯವನ್ನು ಅಪಹರಿಸಲೋಸುಗವಾಗಿ ಚೆಲ್ಲಿದ ಬೆಳುವೆಯ ಬೂದಿಯೋ ಎಂಬಂತೆ, ಭೂಮಿಯೆಂಬ ಕಾ೦ತೆಯು ಸೂಯ್ಯನೆಂಬ ವಿಟಪುರುಷನ ಸಂಗದಿಂದ ಬಿಳೇರಿದಳೋ ಎಂಬಂತೆ, ಸಾಂದ್ರವಾಗಿ ಚಂದ್ರಿಕೆಯು ಅಂತರಿಕ್ಷ ಭೂಮಿಗಳಂ ವ್ಯಾಪಿಸುತ್ತಿರಲು ; ರೋಹಿಣಿಯು ಜನರ ದೃಷ್ಟಿ ತಾಕದಂತೆ ಇಟ್ಟ ಕಪ್ಪಿನ ಬೊಮ್ಮೋ ಎಂಬಂತೆ, ಗುರುಪತ್ನಿಯ ಸಂಗದಿಂದುಂಟಾದ ಪಾತಕವೋ ಎಂಬಂತೆ, ಪೂತ್ವ ದಿಗಂಗನೆಯ ಸಂಗದಿಂದುಂಟಾದ ಕಸ್ತೂರಿಯ ತಿಲಕದ ಚಿಹ್ನ ವೋ ಎಂಬಂತೆ, ಕ್ರೂರವಾಗಿ ನೋಡುವ ಚಾರಸ್ತ್ರೀಯರುಗಳ ಕರಿಯಗುಡ್ಡೆಯ ಕಾಂತಿ ಯೋ ಎಂಬಂತೆ, ಅಗ್ನಿಯು ಪಾವನವಂ ಗೆಯುವಲ್ಲಿ ಉರಿ ತಗಲಿ ಅಂಗಕವು ಕರಿ