ಪುಟ:ವತ್ಸರಾಜನ ಕಥೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓb - ಕರ್ಣಾಟಕ ಕಾವ್ಯಕಲಾನಿಧಿ, - ಗೊಂಡುದೋ ಎಂಬಂತೆ, ಚಂದ್ರನ ಅ೦ಗದಲ್ಲಿ ಸಂಗತವಾದ ಕಳಂಕವು ಕಂಗಳಿಗೆ ಮಂಗಳವನ್ನುಂಟುಮಾಡುತ್ತಿರಲು ; ಅಲ್ಲಲ್ಲಿ ನಲ್ಲೆಯರೂ ನಲ್ಲರೂ ಸಹ ಸಲ್ಲೀಲೆ ಯಿಂದೊಡಗೂಡಿ ಚ೦ದ ಶಾಲೆಗಳಲ್ಲಿ ನಾಂದ್ರವಾದ ಚಂದ್ರಿಕೆಯಲ್ಲಿ ವ್ಯಾಪಾರ ವನ್ನು ವಿರಚಿಸುತ್ತಿರುವ ಪರಿಯನ್ನು ಅವರ ಅಂಗಗಳಿಂದ ಪೊರಮಟ್ಟ ಗಂಧಪುಷ್ಪ ಪರಿಮಳವು ದಿಕ್ಕು ದಿಕ್ಕುಗಳಲ್ಲಿ ತೋರುತ್ತಿರಲು ; ಇತ್ತಲು ಮಕರಂದೋದ್ಯಾನದಲ್ಲಿರ್ದ ಸಾಗರಿಕೆಯು ಜ್ವರದಿಂದ ತಪಿಸುತ್ತಿ ರುವಳ ಮೇಲೆ ಕಾದೆಣ್ಣೆಯಂ ಚೆಲ್ಲಿದಂತೆ, ಪಿಶಾಚದಿಂದ ಪೀಡಿತಳಾದವಳಿಗೆ ಹುಚ್ಚು ಹಿಡಿದಂತೆ, ಹಾವು ಕಡಿದವಳಿಗೆ ವಿಷವಂ ಕುಡಿಸಿದಂತೆ, ಮೊದಲೇ ಮಾರನಿಂದ ಹೇರಳವಾದ ಬಾಧೆಯಂ ಪೊಂದಿರ್ಗು, ಬೆಳದಿಂಗಳಿಗೆ ಬೆಚ್ಚಿ, ಕಣ್ಣುಗಳ ಮುಚ್ಚಿ, ಕಂದಿ, ಕಳವಳವಂ ಪೊಂದಿ, ಮುಂದುಗಾಣದೆ, ಮಂದಳಾಗಿ, ಕರಗಿ ಸೊರಗಿ, ಮರು ಗಿ ಕೊರಗಿ, ಮರದ ಮರೆಗೊ೦ಡು, ಇದೊಂದು ಬಗೆಯಾಗಿ ಬೆಳ್ಳುದೋರಿ ಉರಿ ಯತ್ತಿರುವ ಬೆಳದಿಂಗಳೆ೦ಬ ಉರಿಯನ್ನು ಹೇಗೆ ಸೈರಿಸ ? ಎಲ್ಲಿ ಪೋಗಲಿ ? ಯಾ ರೊಡನೆ ವೇಳಲಿ? ಕಳ್ಳನಿಗೆ ಕತ್ತಲೆಯ ಸಹಾಯವಂ ಗೆಯ್ಯುವಂತೆ ಕ್ರೂರನಾದ ಮಾರನಿಗೆ ಈ ವಾಸಿಯಾದ ಚಂದ್ರನು ಕೈಲಾಗನಂ ಕೊಟ್ಟು ನಮ್ಮಂಥ ದಿಕ್ಕಿಲ್ಲದ ಬಾಲೆಯರಂ ಬಾಧಿಸುತ್ತಿರುವನು ಎಲೈ ದುಷ್ಟ ನಾಗ ರಾಹುವೇ, ಈ ದುಷ್ಟ ನಾದ ಚಂದ್ರನಂ ನುಂಗಿ ಬಿಟ್ಟ ಸರಿಯಿ೦ ನಿನ್ನ ಬುದ್ಧಿಯಂ ನಾನು ಎಂದು ವರ್ಣಿಸಲಿ ! ಎಲೆ ಸಮುದನೇ, ಕೊರಗಿಸಲೋಸುಗ ಮೊದಲು ಕರಿಯ ವಿಷವಂ ವೆತ್ತುದಲ್ಲದೆ ಈಗ ವಿರಹದಿಂ ಬಾಡಿರುವ ಬಾಲೆಯರಂ ಬಾಧಿಸಲೋಸುಗ ಈ ಬಲವಾದ ಬಿಳಿಯ ವಿಷವಂ ಪೆತ್ತುದರಿಂದಲೇ ನಿನ್ನನ್ನು ಅಗಸ್ಯಋಷಿಯು ಕುಡಿದು, ದೇವಾಸುರರು ಕಡೆದು, ರಾಮನು ಬಂಧನವಂ ಗೆಯ್ದು ಬಹುಭಂಗವನ್ನುಂಟುಮಾಡಿದುದಲ್ಲದೆ, * ದೈವವು ನಿನ್ನ ಹೊಟ್ಟೆ ಯಲ್ಲಿ ಉರಿಯನ್ನಿರಿಸುವುದು ನ್ಯಾಯವಾಗಿ ತೋರುವುದು. ಸರೈಜ್ಞನಾದ ಈಶ್ವರನು ನುಂಗಿದ ಕರಿಯ ವಿಷಕ್ಕಿಂತಲೂ ಈ ಬಿಳಿಯ ವಿವರೂಪಿಯಾ ದ ಚಂದ್ರನು ಮಹಾಪಾಪಿಯು. ಇವನನ್ನು ನುಂಗಿದಲ್ಲಿ ಗಂಟಲು ಸುಡುವುದೆಂದು ನೆತ್ತಿಯಂ ಹತ್ತಿಸಿ ಉರಿಯಂ ತಾಳಲಾರದೆ ಗಂಗೆಯಂ ಧರಿಸಿದನು. ಎಲೆ ಮಿತ್ರ ದೊಹಿಯಾದ ಚಂದ್ರನೇ! ಲೋಕದಲ್ಲಿ ನಿನ್ನ೦ಥ ಲಜ್ಞೆಯಿಲ್ಲದವರನ್ನು ಕಾಣೆನು. ಗುರುಪತ್ತಿ ಯೊಡನೆ ಸಂಗಸುಖವಂ ನಡೆದು ಪಂಚಮಹಾಪಾತಕಿಯಾದೆನೆಂಬ ಶಂಕೆ ಯಿಲ್ಲದೆ ಗಗನಾಂಗಣವಂ ಪೊಂದಿ ಪ್ರಜ್ವಲಿಸುತ್ತಿರುವೆ. ನೀನು ಪಾಪಿಯೂ ಕೂರ ನೂ ದೋಪಾಕರನೂ ಆದುದರಿಂದಲೇ ಅಗ್ನಿ ರಾಹುಗಳು ನಿನ್ನನ್ನು ನುಂಗಲಾರದೆ ಉಗುಳಿದರು. ಪಾಷಾಣಕ್ಕಿಂತಲೂ ನೀನು ಕಠಿಣನಾದುದರಿಂದ ಸಮುದ್ರವಂ ಪೀ ಡಿಸಿದ ಅಗಖುಷಿಯ ಹೊಟ್ಟೆಯಲ್ಲಿ ವಾತಾಪಿಯಂತೆ ಚೀರ್ಣವಾಗದೆ ಉಳಿದು ಬಂದು ಲೋಕಕಂಟತನಾಗಿ ತೋರುತ್ತಿರುವೆ. ಕಟುಕರನನಂತೆ ನಿರ್ದಯನಾಗಿ