ಪುಟ:ವತ್ಸರಾಜನ ಕಥೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩v - ಕರ್ಣಾಟಕ ಕಾವ್ಯಕಲಾನಿಧಿ, - ಲೆಯ ಮೊತ್ತಗಳಂ ಕತ್ತರಿಸುತ್ತ ತಲೆದೋರಿ ಬರುವ ಸೂರಕಿರಣಗಳ ಕಂಡು ಭಯ ಮಂ ಪೊಂದುತ್ತ, ಇನ್ನು ಮೇಲೆ ವೃಕ್ಷಲತೆಗಳಿಗೆ ಜಲವಂ ಪೊಯ್ಯಲೋಸುಗ ಬರು ವ ವನಪಾಲಕಿಯರಾದ ಬಾಲಕಿಯರು ಎನ್ನ೦ ಕಂಡಲ್ಲಿ ಏನೋ ನಿಮಿತ್ತವಾಗಿ ಎಂದಿಗೂ ಬಾರದೆ ಇರುವ ಈ ವಾರಿಜಾಕ್ಷಿಯು ಇಲ್ಲಿರುವುದಕ್ಕೆ ಕಾರಣವೇನೆಂದು ಸಂದೇಹವಂ ಪೊಂದಿ ವಾಸವದತ್ತಾ ದೇವಿಗೆ ವೇಳದೆ ಇರರು , ಇನ್ನು ಮೇಲೆ ಯಾವ ಸ್ಥಳಕ್ಕೆ ಪೋಗಲಿ ? ಎಂತು ನಾನು ಕಂತುರೂಪನಾದ ಎನ್ನ ಪ್ರಾಣಕಾಂತನಾದ ಆ ವತ್ಸ ರಾಜನನ್ನು ಕಾಣುವ ಉಪಾಯವಂ ಗೆಯ್ಯಲಿ ? ?” ಎಂದು ಯೋಚಿಸುತ್ತ ಬಂದು, ಶೃಂಗಗಳ ಸಂಗೀತದಿಂದ ಪೂರಿತವಾದ ಶಾಲೆಯೋ ಎಂಬಂತೆ, ಮಾರವೀ ರನ ಮಂಗಳ ಮಂಟಪವೋ ಎಂಬಂತೆ, ಮಂದಮಾರುತದ ಗುಡಿಯೋ ಎಂಬಂತೆ, ವಸಂತನ ನಾಸಭವನವೋ ಎಂಬಂತೆ, ಮನೋಹರವಾಗಿ ಕಮಲಸರೋವರದ ಒತ್ತಿನಲ್ಲಿ ಬಿತ್ತರವಾಗಿ ತೋರುತ್ತಿರುವ ಸುವರ್ಣಮಯವಾದ ಕದಳೀಗೃಹಮಂ ಕಂಡು, ಸಂತೋಷಮಂ ಪೊಂದಿ,- ಈ ಕದಳಿಗೃಹಮಂ ನಾನು ಪೊಕ್ಕೆನಾದರೆ ಯಾವ ಸ್ತ್ರೀಯರೂ ಕಾಣಲಾರರು. ” ಎಂದು ಆಲೋಚಿಸಿ ಬಂದು ಆ ಪ್ರವೇಶಮಂ ಪ್ರವೇಶಿಸಿ, ಅಲ್ಲಿರುವ ರಾಜೋಪಚಾರಗಳಿಗೆ ಯೋಗ್ಯಗಳಾದ ಪದಾರ್ಥಗಳಂ ಕಂಡು ಆಶ್ಚರಮುಂ ಪೊಂದಿ, ( ಈ ವತ್ಸ ರಾಜನ ಮಂದಿರದ ವಾಸವೇ ಎನಗೆ ಒಂದಾ ನೋಂದು ಆನಂದವಂ ಪುಟ್ಟಿಸುತ್ತಿರುವುದು, ಅವನ ಸಂಗವು ಇನ್ನೇನು ಹರ್ಷವನ್ನು ಪ್ರಟ್ಟಿಸುತ್ತಿರುವುದೋ ತಿಳಿಯೆನು. ' ಎಂದು ಯೋಚಿಸುತ್ತ ಅಲ್ಲಲ್ಲಿ ನಿಲ್ಲಿಸಿ ಇರುವ ನಿಲುಗನ್ನಡಿಯಲ್ಲಿ ವಿರಹಾಗ್ನಿ ಯ ಉರಿಂದ ಬಾಡಿರುವ ತನ್ನ ಸರಾ೦ಗವ ನೋಡಿ, ಕೆದರಿದ ಕೇಶಪಾಶಗಳ೦ ತಿದ್ದಿ, ರತ್ನ ಕಲಶಗಳಲ್ಲಿ ತುಂಬಿ ಮಡಗಿರುವ ಹಿಮಜಲ ದಿಂದ ಮಜ್ರ ನವಂ ಗೆಯ, ಕಸ್ತೂರಿಯ ತಿಲಕವಂ ತಿದ್ದಿ, ಒತ್ತಿನಲ್ಲಿರುವ ಚಿತ್ರವಂ ಬರೆಯುವ ಸಾಮಗ್ರಿಯಂ ಕಂಡು, ಅಧಿಕಸಂತೋಷದಿಂದ ಯುಕ್ತಳಾಗಿ, ( ನಾನು ಪ್ರತ್ಯಕ್ಷವಾಗಿ ಆ ಮಹಾರಾಜನಂ ನೋಡುವುದಕ್ಕೆನಗೆ ಪುಣ್ಯವಿಲ್ಲದೆ ಇದ್ದ ರೂ ಅವನ ಭಾವಚಿತ್ರವನ್ನು ಬರೆದು ನೇತ್ರಾನಂದವಂ ಅನುಭವಿಸುವೆನು ?” ಎಂದು ಚಿತ್ರವಂ ಬರೆಯುವುದಕ್ಕೆ ಯೋಗ್ಯವಾದ ಫಲಕಮಂ ಹಸ್ತದಲ್ಲಿ ಧರಿಸಿ, ಬಲು ಬಗೆಗಳಾದ ಬಣ್ಣಗಳಂ ಕಲಸಿ, ಅವನ ಭಾವಚಿತ್ರವನ್ನು ಬರೆಯುವುದಕ್ಕೆ ಉದ್ಯು ಕಳಾಗುತ್ತ ಇರಲು ; ಇತಲು, ಶಕುಂತಶಾಲೆಯಲ್ಲಿ ಸುಸಂಗತೆಯು, “ ಸಾಗರಿಕೆಯು ಏನೋ ನಿಮಿತ್ಯವಾಗಿ ಬೆಳಗಾದರೂ ಈ ಪ್ರಶಾಲೆಗೆ ಬರದೆ ಇರುವಳು ?” ಎಂದು ಹುಡು ಕುತ್ತ, ಮೇಧಾವಿನಿಯೆಂಬ ಶಾರಿಕೆಯ ಪಂಜರವಂ ಕೆಯೊಳ್ ಪಿಡಿದು ಬರುತ್ಯ, ಮುಂಗಡೆಯಲ್ಲಿ ಬರುವ ನಿಪುಣಿಕೆಯೆಂಬ ಕಾಂತೆಯಂ ಕಂಡು,-ಇವಳನ್ನು ಕೇಳಿ ದಲ್ಲಿ ಸಾಗರಿಕೆಯು ಇರುವ ಸ್ಥಳವನ್ನು ನೆಲೆಯಾಗಿ ಹೇಳುವಳೆಂದು ಬರುತ್ತಿರಲು ;