ಪುಟ:ವತ್ಸರಾಜನ ಕಥೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾದರೂ ನಾಚಿಕೆಯು ತೋರುವುದಿಲ್ಲವೇ ಪೇಳು, ಹಾಗಲ್ಲದಿದ್ದರೆ ಮನ್ಮಥನ ಬಾಧೆಗಳೂ ಬಾಧೆಗೆ ಅಳುಕಿ ಆ ರಾಯನನ್ನು ಪೊಂದುವ ಕಾರ್ಯವನ್ನು ಅಭ್ಯಾಸ ವಂ ಗೆಯ್ಯುವೆಯೋ ಪೇಳು, ಅಥವಾ ಆ ಮನ್ಮಥನನ್ನೇ ಕೇಳಿನೋಡುವೆನು ?” ಎಂದು, ಎಲೈ ಮನ್ಮಥನೇ, ಜಯಿಸಲ್ಪಟ್ಟ ದೇವರಾಕ್ಷಸರುಗಳುಳ್ಳವನಾಗಿದ್ದರೂ ಈ ಸ್ತ್ರೀ ಜನವನ್ನು ಕೊಲ್ಲುತಿರುವ ನೀನು ಹೇಗೆ ನಾಚಿಕೆಯಂ ಪೊಂದದೆ ಇರುವೆಯೋ ಪೇಳು. ಈ ನಿನ್ನ ಬಾಧೆಯ ನಿಮಿತ್ತದಿಂದ ಎನ್ನ ಮರಣದ ಕಾರ್ಯವೇ ಕೈಗೂಡಿ ತೋರುವುದು. ಆದರೂ ಎಷ್ಟರೊಳಗಾಗಿ ಯಾರು ಬಂದು ಎನ್ನ ನೋಡುವುದಿಲ್ಲ ವೋ ಅಷ್ಟರಲ್ಲೇ ಈ ಹಲಗೆಯಲ್ಲಿ ಎನ್ನಿ೦ದ ಬರೆಯಲ್ಪಟ್ಟ ಆ ಮಹಾರಾಜನ ಭಾವಚಿತ್ರವನ್ನು ಕಣ್ಣುಗಳು ದಣಿಯುವಂತೆ ಚೆನ್ನಾಗಿ ನೋಡಿ ಆಬಳಿಕ ನಾನು ಯೋಚಿಸಿರುವ ಕಾರ್ಯವನ್ನು ನಡೆಯಿಸುವೆನು. ” ಎಂದು ಆ ಚಿತ್ರ ಪಠಮಂ ಹಸ್ತ ದಲ್ಲಿ ಸಿಡಿದು ಚೆನ್ನಾಗಿ ಬರೆಯುತ್ತ ಕುಳಿತಿರಲು ; - ಅಷ್ಟರಲ್ಲೇ ಸುಸಂಗತೆಯು ಶಾರಿ ಕಾಸ೦ಜರವಂ ಪಿಡಿದು ಬಂದು ಸುಂದರ ಮಾಗಿ ಮಂದಮಾರುತನ ಓಲಗಶಾಲೆಯ೦ತೆ ಒಪ್ಪುತ್ತಿರುವ ಕದಳೀಗೃಹಮಂ ಪೊಕ್ಕು ಮುಂದುಗಡೆಯಲ್ಲಿರುವ ನಾಗರಿಕೆಯಂ ಕಂಡು ಆಶ್ಚರನ ಪಡೆದು, (( ಇದೇನೀನಾಗರಿಕೆಯು ಅಧಿಕವಾದ ವಿರಹಕ್ಕೆ ಒಳಗಾಗಿ ಮನದಲ್ಲಿ ಯಾವನನ್ನೂ ಧ್ಯಾನಿಸುತ್ತ ಬರೆಯುತ್ತಿರುವಳು. ಆದುದರಿಂದ ನಾನು ಸಮೀಪವಂ ಸೇರಿದರೂ ಎನ್ನ ಕಾಣದೆ ಇರುವಳು. ಆದರೆ ನಾನು ಒಳಗಾಗಿ ಅವಳಿಗೆ ಮರೆಯಾಗಿ ನಿಂದು ಅವಳು ಬರೆಯುವವನು ಯಾವ ಪುರುಷನಾಗುವನು ನೋಡುವೆನು ?” ಎಂದು ನಿಂದಿರಲು ; ಸಾಗರಿಕೆಯು, ಆದರೆ, ನಾನು ಸುಂದರಕರನಾದ ಆ ವತ್ವ ರಾಜನನ್ನು ಬರೆದೆನು. ಅವನ ಅಂಗಸೌಂದರವನ್ನು ಚೆನ್ನಾಗಿ ನೋಡುವೆನೆಂದರೆ ನದಿಯಂತೆ ಹೊರಡುತ್ತಿರುವ ಕಣ್ಣೀರುಗಳು ನೋಡಲೀಯದೆ ಎನ್ನ ದೃಷ್ಟಿಗಳನ್ನು ಮುಚ್ಚು ತಲಿರುವುವ, ಇನ್ನೇನು ಮಾಡಲಿ ! ” ಎಂದು ನುಡಿಯುತ್ತ ಧಾರಾಕಾರವಾಗಿ ಸುರಿಯುತ್ತಿರುವ ಕಂಬನಿಗಳನ್ನು ತನ್ನ ಸೀರೆಯ ಮುಂಚೆರಗಿನಿಂದ ಒತ್ತುತ್ತಿರಲು ; ಸುಸಂಗತೆಯು ಚಿತ್ರ ಪಠಮಂ ನೋಡಿ, ( ಇದೇನು ! ಈ ಸಾಗರಿಕೆಯು ನಮ್ಮ ರಾಯನ ಭಾವಚಿತ್ರಮಂ ಬರೆದಳು, ಅವನನ್ನು ಈ ವಸಂತೋತ್ಸವದಲ್ಲಿ ಕಂಡಿರಬೇಕು. ಆದುದರಿಂದಲೇ ಈ ಚಿತ್ರದಲ್ಲಿ ಬರೆಯುವುದಕ್ಕೆ ಯೋಗ್ಯ ನಾ ದನು ” ಎಂದು ತನ್ನ ಮನದಲ್ಲಿ ಯೋಚಿಸಿ, ಆ ಸಾಗರಿಕೆಯ ಮುಂಭಾಗವ೦ ಸೇರಿ (• ಎಲೆ ಸಾಗರಿಕೆಯ, ಲೇಸಾದುದು, ಲೇಸಾದುದು, ರಾಜಹಂಸೆಯು ತಾವರೆಗ ೪೦ದ ಪೂರಿತವಾಗಿರುವ ಕೊಳನಂ ಬಿಟ್ಟು ಮತ್ತೆ ಇನ್ಯಾವ ಸ್ಥಳದಲ್ಲಿ ಕ್ರೀಡಿಸು ಇದು ಪೇಳು ” ಎಂದು ನುಡಿಯಲಾಗ ಸಾಗರಿಕೆಯು ಭಯದಿಂದ ಯುಕ್ತಳಾಗಿ