ಪುಟ:ವತ್ಸರಾಜನ ಕಥೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VL - ಕರ್ಣಾಟಕ ಕಾವ್ಯಕಲಾನಿಧಿ, - ಅಷ್ಟರಲ್ಲೇ ಅಂತಃಪುರದ ಬಾಗಿಲಲ್ಲಿ ಕಟ್ಟಿದ್ದ ಸಿಂಗಳೀಕವು ಸರಪಣಿಯಂ ಕಿತ್ತುಕೊಂಡು ಅಲ್ಲಿದ್ದವರ ಮೇಲೆ ಬಿದ್ದು ಗಾಸಿಯನ್ನು ೦ಟುಮಾಡಲು, ಆ ಜನಗಳ ಕೋಲಾಹಲ ಧ್ವನಿಯು ಕೇಳಿಬರಲು ; ಸುಸಂಗತೆಯು ಇಷ್ಟು ಶಬ್ದಕೆ ಕಾರಣವೇ ನೆಂದು ತಾನಿದ್ದ ಸ್ಥಳವಂ ಬಿಟ್ಟು ಕದಳೀಗೃಹದ ಬಹಿರ್ಭಾಗವಂ ಸೇರಿ ನೋಡುತ್ತಿ ರಲು ; ಸಿಂಗಳೀಕನು ಇನ್ನೊ೦ದು ಬಾಲದ ಶಂಕೆಯನ್ನುಂಟುಮಾಡುತ್ತಿರುವ ಕಿತ್ತಿ ರುವ ಸುವರ್ಣದ ಸರಪಣಿಯನ್ನು ಎಳೆದುಕೊಂಡು ಬರುತ್ತ, ಕಾಲಲ್ಲಿ ಕಟ್ಟಿದ ಗಗ್ಗ ರಗಳು ಧ್ವನಿಗೆಯ್ಯುವಂತೆ ಕುಣಿಯುತ್ತ, ಹುಬ್ಬುಗಳನ್ನು ಎಬ್ಬಿಸಿ ಹಲ್ಲುಗಳಂ ಕಿರಿದು ಎಲ್ಲಾ ಜನವಂ ಬೆದರಿಸುತ್ತ, ಮುಚ್ಚಿದ್ದ ಬಾಗಿಲುಗಳ೦ ಹೆಚ್ಚಾಗಿ ಬಿರಿಯುವಂತೆ ಹಸ್ತ ಗಳಿ೦ ನೂಕುತ್ತ, ಮನಬಂದಂತೆ ಕುಣಿಯುತ್ತ, ಕುದುರೆಯ ಲಾಯವಂ ದಾಟಿ, ಅಂತಃಪುರದ ಬಾಗಿಲ ಕಾವಲುಗಾರರಾದ ಕುಬ್ಬವಾಮನರಾದ ಜನಗಳಂ ತನ್ನ ಉಗುರುಗಳಿ೦ದ ಗಾಯವಂ ಗೆಯ್ದು ಬೆದರಿಸಿ, ಪ್ರಶಾಲೆಯಂ ಪೊಕ್ಕು, ಪ್ರಶ್ನೆಗಳಿಗೆ. ಹಾಕಿದ್ದ ಫಲಗಳ೦ ಭಕ್ಷಿಸಲೋಸುಗ ಗೂಡುಗಳ ಬಾಗಿಲಂ ತೆಗೆಯಲು ಪೋಗಿ" ದಿಟ್ಟೆ ಯರಾದ ಊಳಿಗದ ವೆಣ್ಣುಗಳ ಪೆಟ್ಟಿನಿಂದ ಕಂಗೆಟ್ಟು ಆ ಸ್ಥಳವಂ ಬಿಟ್ಟು, ಮಟ್ಟು ಮೀರಿದ ವೇಗದಿಂ ಬಿಟ್ಟು ಬರುತ್ತಿರಲು ; ಸುಸಂಗತೆಯು ಆ ಸಿಂಗಳೀಕನಂ ಕಂಡು ಭಯಭ್ರಾಂತಳಾಗಿ ಓಡಿಪೋಗಿ, ಇದೇನು ಕಲಕಲವೆಂದು ಸಂದೇಹವಂ ಹೊಂದುತ್ತಲಿದ್ದ ನಾಗರಿಕೆಯ ಸಮೀಪವಂ ಸೇರಿ, (' ಎಲೆ ಕಾಂತೆಯೇ, ಅ೦ತಃಪು ರದ ಬಾಗಿಲಲ್ಲಿ ಕಟ್ಟಿದ ಕರಿಯ ಕೊಡಗಂ ಸರಪಣಿಯಂ ಕಿತ್ತುಕೊಂಡು ಉಪವನ ಮಾರ್ಗವಾಗಿ ಇಲ್ಲಿಗೆ ಬರುವಂತೆ ತೋರುತ್ತಲಿರುವುದು, ನಾವಿರ ರು ಕತ್ತಲೆ ಯಾಗಿರುವ ಒತ್ತಿನ ಈ ಪೊಂಗೆಯಮರದ ಪೊದರ ಸೇರುವ, ನಡೆ ” ಎಂದು ಅವಳಂ ಕರೆದು ಎಳೆದುಕೊಂಡು ಹೋಗಿ, ಹೊಂಗೆಯಮರದ ಗುಂಪನ್ನು ಸೇರಿ ನಿಂತು ನೋ ಡುತ್ತಿರಲು ; ಸಾಗರಿಕೆಯು ಆ ಕೋಡಗನಂ ಕಂಡು ಭಯಾತುರಳಾಗಿ, “ ಎಲೆ ಸುಸಂಗತೆಯೇ, ಇನ್ನೇನು ಮಾಡಲಿ ! ಚಿತ್ರಪಟಮಂ ಮರೆತು ಬಂದೆನು, ಅದು ಯಾರ ಕೈಗಾದರೂ ಸಿಕ್ಕಿದಲ್ಲಿ ಬಹಳವಾದ ಪ್ರಮಾದಕ್ಕೆ ಕಾರಣವಾಗುವುದು' ಎಂದು ತಲ್ಲಣಿಸುತ್ತಿರಲು ; ಸುಸಂಗತೆಯು ಎಲೆ ಜ್ಞಾನಶೂನ್ಯಳೇ, ಚಿತ್ರಪಟದ ಮಾತಂ ತಿರಲಿ, ಇದೋ ನೋಡು, ದುಷ್ಟನಾದ ಆ ಕೋಡಗನು ಮೊಸರು ಅನ್ನದ ಆಸೆ ಯಿಂದ ಪಂಜರದ ಬಾಗಿಲು ತೆಗೆದು ಮೇಧಾವಿನಿಯೆಂಬ ಶಾರಿಕೆಯಂ ಹಾರಿಸಿ, ಅಲ್ಲಿದ್ದ ಮೊಸರುಅನ್ನದ ಬಟ್ಟಲಂ ತೆಗೆದುಕೊಂಡು ಪೋದುದು. ಆ ಶಾರಿಕೆಯು ನಮ್ಮ ಎದುರಾಗಿ ಹಾರಿಪೋಗುತ್ತಲಿರುವುದು” ಎಂದು ತೋರಿಸಲು ; ಸಾಗರಿಕೆಯು ಮನದಲ್ಲಿ ಬಹಳವಾದ ವ್ಯಾಕುಲವಂ ತಾಳಿ, ( ಎಲೆ ಸುಸಂಗತೆಯೇ, ಈ ಶಾರಿಕೆ ಯಲ್ಲಿ ವಾಸವದತ್ತಾ ದೇವಿಗೆ ಪ್ರಾಣಕ್ಕಿಂತಲೂ ಅತಿಶಯವಾದ ಪ್ರೇಮವಿರುವುದು. ಇದು ಪೋದ ಸಂಗತಿಯಂ ಕೇಳಿದವಳಾದರೆ, ಬಲವಾದ ಶಿಕ್ಷೆಗೆಯ್ಯದೆ ಬಿಡಳು.