ಪುಟ:ವತ್ಸರಾಜನ ಕಥೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, * wf ಯಾದುದು, ನೀನೂ ಇದರ ವಾಕ್ಯವಂ ಕೇಳಿ ವ್ಯರ್ಥವಾಗಿ ಭಯವನ್ನು ಹೊಂದುವೆ ನೆಂದು ನುಡಿದೆ ? ?” ಎಂದು ನುಡಿಯಲಾರಾಯನು-- (ಎಲೈ ಮೂರ್ಖನೇ, ನಿನ್ನ ದೋಷವನ್ನು ಎನ್ನಲ್ಲಿ ತೋರಿಸುತ್ತಿರುವೆ? ” ಎನೆಲು ; ಅವನು,- ಎಲೈ ಸ್ವಾಮಿಯೇ ನೀನು ಎನ್ನ ತಡೆಯಂ ಮಾಡಬೇಡ. ನಾನು ಯಾತರ ಭಯವನ್ನು ಹೊಂದಿದೆನೋ ಅದರ ರೀತಿಯನ್ನು ತಿಳಿವೆನು ” ಎಂದು ಒಂದು ಕೋಲನ್ನು: ಕರದಲ್ಲಿ ಪಿಡಿದು, < ಎಲೆ ತೊತ್ತಿನ ಮೊಗುವಾದ ಶಾರಿಕೆಯ, ನಿನ್ನ ವಾಕ್ಯವನ್ನು ಕೇಳಿ ಭಯವನ್ನು ಹೊಂದಿ ದವನು, ನಾನೋ ಅಲ್ಲದಿರ್ದರೆ ಈ ರಾಜೇಂದ್ರನೋ ? ನೀನು ಎಂತು ತಿಳಿದಿರುವೆ ? ಆಪರಿಯಂ ಚೆನ್ನಾಗಿ ವಿವರಿಸುವನಾಗು, ಇಲ್ಲದಿದ್ದರೆ ದುರ್ಜನನ ಮನದಂತೆ ವಕ್ರವಾಗಿರುವ ಈ ಕೋಲಿನಿಂದ ಕಳಿತ ಹಣ್ಣನ್ನು ಕೆಡಹುವಂತೆ ಈ ಮರದಿಂದ ನಿನ್ನ ನ್ಯೂ ಹೊಡೆದು ನೆಲಕೆ ಬೀಳಿಸುವೆನು ” ಎಂದು ಪೋಗುತ್ತಿರಲು ; ರಾಯನು ಆ ವಿದೂಷಕನು ಪಿಡಿದು,- ( ಎಲೈ ಮೂರ್ಖನೇ, ಏನೋ ಒಂದು ಮನೋಹ ರವಾಗಿ ವಾಕ್ಯವನ್ನು ನುಡಿಯುತ್ತಲಿರುವುದು, ಅದನ್ನು ಕೇಳಿ ಸಂತೋಷವಂ ಪೊಂದದೆ ವ್ಯರ್ಥವಾಗಿ ಬಾಧಿಸುವುದು ನ್ಯಾಯವಲ್ಲ ” ಎನಲು ; ವಿದೂಷಕನುCC ನಿನ್ನ ಅಚ್ಛೆಯಿಂದ ಸುಮ್ಮನಿರುವೆನು, ಆದರೂ ಈ ಶಾರಿಕೆಯು ಏನೋ ಒಂದು ವಾಕ್ಯವಂ ಪೇಳುತ್ತಿರುವುದು, ಅದನ್ನು ಚೆನ್ನಾಗಿ ಕೇಳುವೆವು ?” ಎಂದು ಇಬ್ಬರೂ ಆ ಪಗಡೆಯ ಮರದ ಸವಿಾಪವ ಸೇರಿ ನಿಂದಿರಲು ; ಮರದ ತುದಿಯಲ್ಲಿ ಮೇಧಾವಿನಿಯೆಂಬ ಶಾರಿಕೆಯು ತನ್ನೊಳು ತಾನು • ಎಲ್ವೆ ಕಲ್ಯಾಣಿಯೇ, ಎನ್ನ ನ್ಯೂ ಏತಕೆ ಇಲ್ಲಿ ಬರೆದಿರುವೆ ? ನೀನು ಎಂಥ ಮನ್ನ ಥನಂ ಬರೆದೆಯೋ ಆಪ್ರಕಾರವಾಗ ರತಿಯನ್ನೂ ನಾನು ಬರೆದಿರುವೆನು, ಬರಿದೆ ಎನ್ನೊಳು ಏತಕ್ಕೆ ಕೋಪವಂ ತಾಳುತ್ತಿರುವೆ ? ” ಎಂದು ನುಡಿಯಲಾವಾಕ್ಯವಂ ಕೇಳಿದ ವಿದೂಷಕನು,- ಎಲೈ ರಾಜೇಂದ್ರನೇ, ಈ ಶಾರಿಕೆಯು ಒಂದಕೊಂ ದು ಸಂಬಂಧವಿಲ್ಲದ ಮಾತುಗಳನ್ನು ಆಡುತ್ತಿರುವುದು ? ಇದನ್ನು ಕೇಳಿದುದರಿಂದ ನಮಗೆ ಏನು ಪ್ರಯೋಜನವಿರುವುದು, ನಡೆ.” ಎನಲು; ರಾಯನು,- ಎಲೈ ಮಿ ಇನೇ ಹಾಗಲ್ಲ. ಅದರ ತಾತ್ಸಲ್ಯವನ್ನು ಹೇಳುವೆನು ಕೇಳು. ಯಾವವಳೊ ಒಬ್ಬ ಸ್ತ್ರೀಯು ಯಾವವನೋ ಒಬ್ಬ ಪುರುಷನಲ್ಲಿ ವಿರಹಾತುರೆಯಾಗಿ ಅವನನ್ನು ಚಿತ್ರಪಟದಲ್ಲಿ ಬರೆದಿರಲು, ಆಪ್ತಳಾದ ಸಖಿಯು ಕೇಳುವಲ್ಲಿ ಮನ್ಮಥನನ್ನು ನೆವ ಗೆಯ್ದು ತನ್ನ ಅಭಿಪ್ರಾಯವನ್ನು ತಪ್ಪಿಸಿ ನುಡಿಯಲು, ತಿಳಿಯುವುದಕ್ಕೆ ಅಸಾಧ್ಯ ವಾಡ ಅವಳ ತಾತ್ಪರ್ಯವನ್ನು ಆ ಸವಿಯು ಚಾಣತನದಿಂದ ತಿಳಿದು ಚಿತ್ರಪಟದಲ್ಲಿ ಅವಳನ್ನೇ ಬರೆದು ರತಿಯಂ ನೆವಗೆಯು ತನ್ನ ತಾತ್ಪರ್ಯವನ್ನು ತಪ್ಪಿಸಿ ನುಡಿದಳೆಂಬ ರೀತಿಯನ್ನು ಈ ಸೆಣ್ಣಿ ಳಿಯು ನುಡಿಯುತ್ತಿರುವುದೆಂದು ಊಹಿಸುತ್ತಿರುವೆನು ” ಎನ್ನ ಲು ; ವಿದೂಷಕನು ಶಾರಿಕೆಯನ್ನೂ ರಾಯನನ್ನೂ ಸಹ ನೋಡಿ ಬೆರಳ ಕೊನೆ 1