ಪುಟ:ವತ್ಸರಾಜನ ಕಥೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fo - ಕರ್ಣಾಟಕ ಕಾವ್ಯಕಲಾನಿಧಿ, - ಯಿಂದ ೧೬ಟುಕೆಯಂ ಹಾಕು, ಆಶ್ಚರ್ಯವಂ ಪೊಂದಿ,- ಎಲೈ ಸ್ವಾಮಿಯೇ; ನೀನು ಅಪ್ಪಣೆಯನಿತ್ತಂತೆಯೇ ಸರಿ” ಎಂದು ನುಡಿಯಲು ; ರಾಯನು, ಎಲ ವೋ ವಿದೂಷಕ, ವ್ಯರ್ಥವಾಗಿ ನೀನು ಗಲಭೆಯಂ ಗೆಯ್ದು ಆ ಶಾರಿಕೆಯು ಓಡುವ ರೀತಿಯನ್ನು ಮಾಡದಿರು' ಇನ್ನೆ ನೋ ಒಂದು ವಾಕ್ಯವಂ ಪೇಳುತ್ತಿರುವುದು ? ಎಂದು ಹೇಳಲು ; ಮೇಲುಗಡೆಯಲ್ಲಿ ಶಾರಿಕೆಯು- ಎಲೆ ಕಾಂತೆಯೇ, ನೀನು ಲಜ್ಜಿಯಂ ಪೊಂದಬೇಡ. ಈಬಗೆಯಾದ ಕನ್ನೆ ವೆಣ್ಣಿಗೆ ಈ ಪರಿಯಾದ ರಾಜಪುತ್ರನಲ್ಲಿ ಅಭಿ ಲಾಷೆಯು ಹುಟ್ಟಿರುವುದು ಯುಕ್ತವಾಗಿರುವುದು ?” ಎಂದು ನುಡಿಯಲು ; ವಿದೂಷ ಕನು-- ಎಲೈ ರಾಯನೇ, ನೀನು ಸರ್ವವನ್ನು ಬಲ್ಲೆನೆಂಬ ಗರ್ವವನ್ನು ತಾಳ ದಿರು, ನಾನು ಹೇಳುವ ವಾಕ್ಯವನ್ನು ಕೇಳುವನಾಗು, ಆ ಕನ್ನೆ ಯನ್ನು ಯಾವ ಸ್ಥಳ ದಲ್ಲಿ ಬರೆದಿರುವುದೋ ಅಲ್ಲಿಗೆ ವಿ ಕಂಡೆಯಾದರೆ ನಿನ್ನ ಜಾಣತನವೆಲ್ಲವೂ ಹಸನಾಗುವುದು ” ಎನ್ನಲು ; ರಾಯನು,- ಎಲೈ ವಿದೂಷಕನೇ, ಇನ್ನು ಏನೋ ಒಂದು ವಾಕ್ಯವನ್ನು ಹೇಳುವುದು, ಅದನ್ನು ಸಾವಧಾನವಾಗಿ ಕಿವಿಗೊಟ್ಟು ಕೇಳು ವನಾಗು, ಕುತೂಹಲವಂ ಪೊಂದುವದಕ್ಕೆ ಮುಂದೆ ಕಾಲವು ಉಂಟಾಗುವುದು ” ಎಂದು ನುಡಿಯುತ್ತಿರಲು ; ಆಕಾಶದಲ್ಲಿ ಶಾರಿಕೆಯು,-- ಈ ತಾವರೆಯ ದಂಟುಗಳನ್ನು ತೆಗೆಯುವ ಳಾಗು. ಇವುಗಳಿ೦ದ ಏನು ಪ್ರಯೋಜನವು ? ಒರಿದೆ ಎನ್ನ ನ್ನು ಆಯಾಸಗೊಳಿ ಸುತ್ತಿರುವೆ ? ?” ಎನ್ನಲು; ವಿದೂಷಕನು ಆಯಾ ರಾಯನೇ, ಈಗ ಶಾರಿಕೆಯು ಸೇ ವಾಕ್ಯವಂ ಕೇಳ್ಯಾ ? ?” ಎನಲು ; ರಾಯನು ಕೇಳಿದ ಮಾತ್ರವೇ ಅಲ್ಲ, ಆ ವಾಕ್ಯದ ತಾತ್ಪರ್ಯವನ್ನು ಸಹ ತಿಳಿದಿರುವೆನು ” ಎನಲು ; ವಿದೂಷಕನು (( ಇನ್ನು ಏನೋ ಒಂದು ವಾಕ್ಯವನ್ನು ಗೊಣಗುತ್ತಲಿರುವುದು. ಆದುದರಿಂದ ಅದೆಲ್ಲವನ್ನೂ ಕೇಳಿದ ಬಳಿಕ ಅದರ ಅಭಿಪ್ರಾಯವನ್ನು ವಿವರಿಸುವನಾಗು ” ಎನಲು ; ವಿದೂಷಕನು ಆ ಮರದ ಬುಡವಂ ಸೇರಿ ಈ ತೊತ್ತಿನ ಮೊಗು ನಾಲ್ಕು ವೇಗವಂ ಬಲ್ಲ ಬ್ರಾಹ್ಮಣ ನಂತೆ ಋಕ್ಕುಗಳ೦ ವೇಳುತ್ತಿರುವುದು ” ಎನಲು ; ರಾಯನು-- ಎಲೈ ಮಿತ್ರನೇ, ಈಗ ಆ ಶಾರಿಕೆಯು ಏನೋ ವಾಕ್ಯವಂ ಪೇಳಿರುವುದು, ನಾನು ಅಡ್ಡಪರಾಕಿ ನಿಂದ ಕೇಳಲಿಲ್ಲ. ಅದಂ ಪೇಳುವನಾಗು ” ಎಂದು ನುಡಿಯಲು ; ವಿದೂಷಕನು(1 ಎಲೈ ಸ್ವಾಮಿಯೇ, ಕೇಳು. ಎಷ್ಟು ಪ್ರಯತ್ನ ವಂ ಗೆಯ್ದ ರೂ ದೊರೆಯದೇ ಇ ರುವ ಪುರುಷನಲ್ಲಿ ನನಗೆ ಅನುರಾಗವುಂಟಾಗಿರುವುದು ಅಧಿಕವಾದ ಲಜ್ಜೆಯು ಯಾವುದಕ್ಕೂ ಸ್ಥಳವನ್ನಿಯದೆ ಇರುವುದು, ನಾನಾದರೋ ಒಬ್ಬರ ಊಳಿಗಕೆ ತಗಲಿಕೊಂಡು ಸ್ವತಂತ್ರಗಳಿಲ್ಲದೆ ಇರುವೆನು, ಮನದಲ್ಲಿ ವಿಶ್ವಾಸವು ಕ್ಷಣಕೊಂದು