ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೦೭ ೧. ದಶರಥ < ಕೈಕೇಯಿ ಬಾಲಕಾಂಡ/೧ ಅತುಲಪರಾಕ್ರಮಿಯೂ, ಬಹುಗುಣಸಂಪನ್ನನೂ, ಪ್ರಜಾದಕ್ಷನೂ, ಜೈಷ್ಣ ಪ್ರಿಯ ಪುತ್ರನೂ ಆದ ರಾಮನಿಗೆ, ಪ್ರಜೆಗಳ ಇಚ್ಛಾನುಸಾರವಾಗಿ ಯುವ ರಾಜ್ಯಾಭಿಷೇಕವನ್ನು ಮಾಡಬೇಕೆಂದು ದಶರಥರಾಜನು ಹವಣಿಸಿದನು; ಅದಕ್ಕಾಗಿ ಆವಶ್ಯಕವಿದ್ದ ಸಾಹಿತ್ಯ ಸಾಮಗ್ರಿಯನ್ನು ಕಲೆಹಾಕಿಸಿದನು. ಅದನ್ನು ಕಂಡು- ಪೂರ್ವಂ ದತ್ತವರಾ ದೇವೀ ವರಮೇನಮಯಾಚತ || ವಿವಾಸನಂ ಚ ರಾವಸ್ಯ ಭರತಸ್ಯಾಭಿಷೇಚನಮ್ ||೨೨|| ಪೂರ್ವದಲ್ಲಿ ಯಾರಿಗೆ ವರಗಳನ್ನು ಕೊಡುವೆನೆಂದು (ದಶರಥರಾಜನು) ಆಶ್ವಾಸನೆಯನ್ನು ಕೊಟ್ಟಿದ್ದನೋ, ಆ (ಕೈಕೇಯಿ ಎಂಬ ಆತನ) ಹೆಂಡತಿಯು, ರಾಮನಿಗೆ (ಹದಿನಾಲ್ಕು ವರ್ಷ) ವನವಾಸ, ಮತ್ತು ಭರತನಿಗೆ (ಯುವರಾಜ್ಯ) ಅಭಿಷೇಕ (ಮಾಡಬೇಕು) ಎಂಬ ವರವನ್ನು ಬೇಡಿದಳು. - ಅಯೋಧ್ಯಾಕಾಂಡ/೯ ದಶರಥರಾಜನು ಕೈಕೇಯಿಗೆ ವರ ಕೊಡಬೇಕಾಗಿದ್ದ ಸಂಗತಿಯು ಮಂಥರೆಗೆ ಮೊದಲು ಗೊತ್ತಿರಲಿಲ್ಲ; ಕೈಕೇಯಿಯು ತಾನಾಗಿ ಅವಳಿಗೆ ಯಾವಾಗಲೋ ಹೇಳಿದ್ದಳು. ಈಗ ಮಂಥರೆಯು ಕೈಕೇಯಿಗೆ ಆ ವರಗಳ ಜ್ಞಾಪಕವನ್ನು ಮಾಡಿಕೊಡುತ್ತಾಳೆ. - ದಂಡಕಾರಣ್ಯದಲ್ಲಿಯ 'ವೈಜಯಂತಿ ಎಂಬ ಪಟ್ಟಣದಲ್ಲಿ 'ತಿಮಿಧ್ವಜ'ನೆಂಬ (ಶಂಬರ) ದೈತ್ಯನು ರಾಜ್ಯವಾಳುತ್ತಿದ್ದನು. ಆತನು ಮಾಯಾವಿದ್ಯೆಯಲ್ಲಿ ಪಳಗಿದವನಿದ್ದನು. ಆತನು ದೇವಗಣರನ್ನು ಕೂಡಿದ ಇಂದ್ರನೊಡನೆ ಕಾಳಗವನ್ನು ಪ್ರಾರಂಭಿಸಿದನು. ಯುದ್ಧದಲ್ಲಿ ಗಾಯಗೊಂಡವರನ್ನು ಆತನು ಎಳೆದೊಯ್ದು ಹಿಂಸಿಸಿ ಪ್ರಾಣತೆಗೆಯುತ್ತಿದ್ದನು. ದಶರಥರಾಜನು ಬಲು ಶೌರ್ಯಸಾಹಸದಿಂದ ಆ ರಾಕ್ಷಸರನ್ನು ಎದುರಿಸಿದನು; ಆದರೆ ಅವರು ಈತನ ಅಂಗಾಂಗಗಳನ್ನು ಗಾಯಗೊಳಿಸಿ ಊನತೆಯನ್ನುಂಟುಮಾಡಿದರು. ಅಂಥ ಸಮಯದಲ್ಲಿ