ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೨೯ “ಹೇ ಭಗವನ್, ತಾವು ಪ್ರಸನ್ನರಾಗಿ ಆತನಿಗೆ ವರ ಕೊಟ್ಟ ಸಮಯದಿಂದ ನಿಮ್ಮ ವಚನವನ್ನು ಗೌರವಿಸಲೋಸುಗ ನಾವೆಲ್ಲರೂ ಎಲ್ಲವನ್ನೂ ಸಹನೆ ಮಾಡುತ್ತಿದ್ದೇವೆ.” ಆ ದುರ್ಮತಿಯು ತ್ರೈಲೋಕ್ಯವನ್ನು ಪೀಡಿಸುತ್ತಿದ್ದು ಸ್ವರ್ಗಾಧಿ ಪತಿಯಾದ ಇಂದ್ರನನ್ನು ಜಯಿಸುವ ಅಭಿಲಾಷೆಯನ್ನಿಟ್ಟುಕೊಂಡಿದ್ದಾನೆ.” ಋಷಿನ್ಯಕ್ಷಾನ್ನಗಂಧರ್ವಾಸ್ಟಾಹ್ಮಣಾನಸುರಾಂಸ್ತದಾ || ಅತಿಕ್ರಾಮತಿ ದುರ್ಧಷೋ್ರ ವರದಾನೇನ ಮೋಹಿತಃ |೯|| “ನಿಮ್ಮ ವರದಾನದಿಂದ ನಿರ್ಭಿತನಾದ ಈ ರಾಕ್ಷಸನನ್ನು ಯಾರೂ ಸೋಲಿಸುವಂತಿಲ್ಲ. ಹೀಗಾಗಿ ಈತನು ಋಷಿ, ಗಂಧವ್, ಯಜ್ಞ ಬ್ರಾಹ್ಮಣ ಮತ್ತು ಅಸುರರನ್ನು ಕಡೆಗಣಿಸುತ್ತಿದ್ದಾನೆ.” - ದೇವತೆಗಳ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ಕೊಂಚಕಾಲ ಆಲೋಚಿಸಿ ಈ ರೀತಿ ಅಂದನು: “ಆ ದುರಾತ್ಮನನ್ನು ವಧಿಸುವ ಒಂದು ಉಪಾಯವು ನನಗೆ ತೋಚಿದೆ. ತೇನ ಗಂಧರ್ವಯಕ್ಷಾಣಾಂ ದೇವತಾನಾಂ ಚ ರಕ್ಷಸಾಮ್ | ಅವಧೂs ಸ್ತ್ರೀತಿ ವಾಗುತ್ತಾ ತಥೇತ್ಯುಕ್ತ ಚ ತನ್ಮಯಾ ೧೩|| ನಾಕೀರ್ತಯದವಜ್ಞಾನಾತ್ತಕ್ಷೇ ಮಾನುಷಾಂಸ್ತದಾ || ತಸ್ಮಾತ್ ಮಾನುಷಾದ್ವಲ್ಲೊ ಮೃತ್ಯುರ್ನಾದ್ಯೋsಸ್ಯ ವಿದ್ಯತೇ ||೧೪||

  • 'ಗಂಧರ್ವ, ಯಕ್ಷ ದೇವತೆಗಳು ಮತ್ತು ರಾಕ್ಷಸರು ಇವರಿಂದ ನನಗೆ

ಸಾವು ಇರಬಾರದು' ಎಂದು ಆತನು ವರವನ್ನು ಬೇಡಿದಾಗ ನಾನು 'ತಥಾಸ್ತು ಎಂದನು. ರಾವಣನಿಗೆ ಮಾನವರ ಪರಿವೆ ಇರದ ಕಾರಣ ವರವನ್ನು ಬೇಡುವಾಗ ಆತನು ಮಾನವರ ಉಲ್ಲೇಖವನ್ನು ಮಾಡಲಿಲ್ಲ; ಆದ್ದರಿಂದ ಮಾನವನಿಂದ ಅವನ ವಧೆಯಾಗುವ ಸಾಧ್ಯತೆ ಇದೆ. ಅವನನ್ನು ವಧಿಸುವದು ಬೇರೆ ಯಾರಿಗೂ ಸಾಧ್ಯವಿಲ್ಲ.” ಬ್ರಹ್ಮದೇವನ ಮಾತುಗಳನ್ನು ಕೇಳಿ ದೇವತೆಯರೆಲ್ಲರೂ ಸಂತೋಷ ಗೊಂಡರು. ಅವರು ವಿಷ್ಣುವನ್ನು ಸ್ತುತಿಸಿ ಇಂತೆಂದರು: “ಲೋಕಹಿತಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೇವೆ. ನೀವು ಮಾನವಾವತಾರವನ್ನು ಧರಿಸಿ ಸಂಗ್ರಾಮದಲ್ಲಿ ರಾವಣನನ್ನು ವಧಿಸಬೇಕು? ಇನ್ನಿತರರಿಂದ ಅವನು ಸಾಯುವಂತಿಲ್ಲ; ಕೇವಲ ಮನುಷ್ಯರಿಂದ ಮಾತ್ರ ಆತನ ಮರಣವಿದೆಯೆಂದು ಬ್ರಹ್ಮದೇವನು ಹೇಳಿದ್ದಾನೆ.”