ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಆ ಮೂವರನ್ನೂ ಬೀಳ್ಕೊಟ್ಟನು. ಯಮುನಾ ನದಿಯನ್ನು ದಾಟಿಹೋಗಲು
ಅಲ್ಲಿ ನೌಕೆಯಿರಲಿಲ್ಲ. ಆಗ ಒಣಗಿದ ಕಾಷ್ಠಗಳನ್ನು ಜೋಡಿಸಿ ಒಂದು ಪೆಟ್ಟಿಗೆಯಾ
ಕಾರವನ್ನು ರಚಿಸಿದರು. ಅದರಲ್ಲಿ ಮರದ ಎಲೆಗಳನ್ನು ಹರಡಿ ಕುಳಿತುಕೊಳ್ಳಲು
ಆಗುವಂತೆ ಮಾಡಿದರು. ಸೀತೆಯನ್ನು ಮೊದಲು ಅದರಲ್ಲಿ ಕುಳ್ಳಿರಿಸಿ, ರಾಮ-
ಲಕ್ಷ್ಮಣರು ನಂತರ ಅದರಲ್ಲಿ ಕುಳಿತರು. ತೇಲುವ ದೋಣಿಯಂತೆ ಆ ಪೆಟ್ಟಿಗೆಯು
ಯಮುನಾ ನದಿಯ ಪ್ರವಾಹದ ಮಧ್ಯವನ್ನು ತಲುಪಿದಾಗ ಸೀತೆಯು ಯಮುನಾ
ನದಿಗೆ ನಮಸ್ಕರಿಸಿ ಈ ರೀತಿ ನುಡಿದಳು-
ಸ್ವಸ್ತಿ ದೇವಿ ತರಾಮಿ ತ್ವಾಂ ಪಾರಯೇನ್ಮೇ ಪತಿರ್ವ್ರತಮ್ ‖೧೯‖
ಯಕ್ಷ್ಯೇ ತ್ವಾ< ಗೋಸಹಸ್ರೇಣ ಸುರಾಘಟಶತೇನ ಚ |
ಸ್ವಸ್ತಿ ಪ್ರತ್ಯಾಗತೇ ರಾಮೇ ಪುರೀಮಿಕ್ಷ್ವಾಕುಪಾಲಿತಾಮ್ ‖೨೦‖


“ಹೇ ದೇವಿಯೇ, ನಾನು ನಿನ್ನನ್ನು ದಾಟಿ ಹೋಗುತ್ತಿದ್ದೇನೆ. ನನ್ನ ಪತಿಯು
ಕೈಗೊಂಡ ವ್ರತವು ಪೂರ್ತಿಗೊಳ್ಳಲಿ! ಇಕ್ಷ್ವಾಕುವಂಶಜರಿಂದ ರಕ್ಷಿಸಲ್ಪಟ್ಟ
ಅಯೋಧ್ಯಾನಗರಕ್ಕೆ ರಾಮನು ಸುಖರೂಪವಾಗಿ ಮರಳಿದ ನಂತರ ನಾನು
ಒಂದು ಸಹಸ್ರ ಹಸುಗಳನ್ನು ಮತ್ತು ಒಂದುನೂರು ಕೊಡದಷ್ಟು ಮದ್ಯವನ್ನು
ನಿನಗೆ ಅರ್ಪಿಸಿ ನಿನ್ನನ್ನು ಪೂಜಿಸುವೆ.”

****