ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೯೧ ೧೫೯. ಹನುಮಾನ ಏಳು ಚಿರಂಜೀವಿಗಳಲ್ಲಿ ಒಬ್ಬ ಸುಮೇರು ದೇಶದ ರಾಜನಾದ ಕೇಸರಿ ಎಂಬಾತನ ಅಂಜನಿಯೆಂಬ ಪತ್ನಿಯಲ್ಲಿ ವಾಯುವಿನಿಂದ ಜನಿಸಿದ ಪುತ್ರ ಈತನ ಜನ್ಮದ ಬಗ್ಗೆ ಇದ್ದ ಕಥೆಗಳು ಭಿನ್ನಭಿನ್ನ ಗ್ರಂಥಗಳಲ್ಲಿ ಬೇರೆಬೇರೆಯಾಗಿವೆ. ಉದಯವಾಗುತ್ತಿದ್ದ ಸೂರ್ಯನನ್ನು ಒಂದು ಪಕ್ವವಾದ ಫಲವೆಂದು ಭಾವಿಸಿ ಅದನ್ನು ತಿನ್ನಲೆಂದು ಈತನು ಅದರತ್ತ ನೆಗೆದಾರ ರಾಹುವಿನ ಹೇಳಿಕೆಯಿಂದ ಇಂದ್ರನು ಈತನ ಮೇಲೆ ವಜ್ರಪ್ರಹಾರವನ್ನು ಮಾಡಿದನು. ಆಗ ಈತನ ಗದ್ದ ಅಂದರೆ ಹನು ಭಂಗವಾಯಿತು. ಅಂದಿನಿಂದ ಹನುಮಾನನೆಂಬ ಹೆಸರು ಬಂದಿತು. ಈ ವಜ್ರದ ಏಟಿನಿಂದ ಹನುಮಾನನು ಮೂರ್ಛ ಹೋಗಿದ್ದನು. ಆಗ ವಾಯುವು ತನ್ನ ಸಂಚಾರವನ್ನೆಲ್ಲ ನಿಲ್ಲಿಸಿಬಿಟ್ಟನು. ಉಸಿರು ಕಟ್ಟಿದಂತಾಗಿ ಜನರೆಲ್ಲರೂ ಸಂಕಟದಲ್ಲಿ ಸಿಲುಕಿದರು. ಬ್ರಹ್ಮದೇವನ ವಿನಂತಿಯನುಸಾರ ವಾಯುವು ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡನು. ಆಗ ಬ್ರಹ್ಮದೇವನು ಹನುಮಾನನಿಗೆ ತನ್ನ ಬ್ರಹ್ಮದಂಡದಿಂದ ವಧೆಯಾಗಲಾರದೆಂಬ ವರವನ್ನು ಕೊಟ್ಟನು. ಇತರ ದೇವತೆಗಳು ಕೂಡ ಹನುಮಾನನಿಗೆ ವರಗಳನ್ನು ಕೊಡುವಂತೆ ಮಾಡಿದನು. ಇಂದ್ರನು ತನ್ನ ವಜ್ರದಿಂದ ಮರಣವು ಬರಲಾರದೆಂಬ ವರವನ್ನು ಕೊಟ್ಟನು. ಸೂರ್ಯನು ತನ್ನ ತೇಜಸ್ಸಿನ ನೂರನೆಯ ಒಂದು ಭಾಗವನ್ನೂ, ಶಾಸ್ತ್ರಾಧ್ಯಯನ ಕಾಲಕ್ಕೆ ಶಾಸ್ತ್ರಜ್ಞಾನವನ್ನೂ ಕೊಟ್ಟನು. ವರುಣನು ತನ್ನ ವರುಣಪಾಶದಿಂದ ಅಥವಾ ನೀರಿನಿಂದ ಸಾವು ಬರಲಾರದೆಂಬ ವರವನ್ನು ಕೊಟ್ಟನು. ಅದೇರೀತಿ ಯಮನು ತನ್ನ ಯಮದಂಡದಿಂದ ಮೃತ್ಯುವಾಗಲಾರದೆಂದೂ, ಸಕಲ ಆರೋಗ್ಯ ಸಂಗ್ರಾಮದಲ್ಲಿ ದಣಿವು ಆಗದಿರುವ ವರವನ್ನು ಕರುಣಿಸಿದನು. ಆಗ ಶಂಕರನನ್ನು ಹನುಮಾನನಿಗೆ ದೀರ್ಘ ಆಯುಸ್ಸನ್ನು ಮತ್ತು ತನ್ನಿಂದ ವಧೆಯಾಗಲಾರದೆಂಬ ವರವನ್ನು ನೀಡಿದಾಗ, ಕುಬೇರನು ತನ್ನ ಗದೆಯಿಂದ ಹನುಮಾನನಿಗೆ ಎಂದೂ ವಧೆಯ ಭಯವಿಲ್ಲವೆಂಬ ವರವನ್ನು ಇತ್ತನು. ವಿಶ್ವಕರ್ಮನಿಂದ ದಿವ್ಯ ಶಸ್ತ್ರಗಳನ್ನು ಚಿರಂಜೀವಿಯಾಗುವ ಮತ್ತು ಇನ್ನು ಅನೇಕ ವರಗಳನ್ನು ಹನುಮಾನನು ಪಡೆದನು. ಇಷ್ಟೇ ಅಲ್ಲದೆ, ಬ್ರಹ್ಮದೇವನಿಂದ ಭಯೋತ್ಪಾದಕತೆ, ಮಿತ್ರರ ಭಯವನ್ನು ಇಲ್ಲದಂತೆ ಮಾಡುವದು, ಇಷ್ಟ ಬಂದಲ್ಲಿಗೆ ಹೋಗುವ ಕ್ಷಮತೆ, ತನಗೆ ಇಷ್ಟವಿದ್ದ, ಬೇಕುಬೇಕಾದ ರೂಪಗಳನ್ನು ಹೊಂದುವ ಸಾಮರ್ಥ್ಯ ಬ್ರಹ್ಮಾಸ್ತ್ರದಿಂದ ಬಂಧಿತನಾದಾಗ ಅದರಿಂದ ಬಿಡಿಸಿಕೊಳ್ಳುವ ಶಕ್ತಿ ಇವೇ ಮೊದಲಾದ ವರಗಳನ್ನು ಪಡೆದನು. ಈ ಬಗೆಯಾಗಿ ಬ್ರಹ್ಮದೇವನು ಹನುಮಾನನಿಗೆ ಲಾಭ ಮಾಡಿಕೊಟ್ಟನು. ಈ ವರಗಳನ್ನು ಪಡೆದ