ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೯೩


ಹೋದನು. ಹೇತಿಯ ಪತ್ನಿಯ ಹೆಸರು ಭಯಾ ಮತ್ತು ಮಗನ ಹೆಸರು
ವಿದ್ಯುತ್ಕೇಶ. ಈತನು ವೃತ್ರಾಸುರನ ಅನುಯಾಯಿ. ವಿಷ್ಣುವು ಆತನನ್ನು ಪರಾಭವ
ಗೊಳಿಸಿದನು

೧೬೧. ಹೇಮಾ

ಈಕೆಯು ಮಯನೆಂಬ ರಾಕ್ಷಸನ ಭಾರ್ಯೆ. ಭರತನನ್ನು ಸ್ವಾಗತಿಸಲು
ಕರೆಯಿಸಿದ ಅನೇಕ ಅಪ್ಸರೆಯರಲ್ಲಿ ಈಕೆಯೂ ಒಬ್ಬಳು. ದೇವತೆಗಳೇ ಈ
ಅಪ್ಸರೆಯನ್ನು ಕೊಟ್ಟಿದ್ದರೆಂಬ ಒಂದು ಉಲ್ಲೇಖವಿದೆ. ಆದರೆ ವಾಲ್ಮೀಕಿ
ರಾಮಾಯಣದಲ್ಲಿ ಮಯನು ಇವಳಲ್ಲಿ ಆಸಕ್ತನಾದ್ದರಿಂದ ಇಂದ್ರನು ಮಯನನ್ನು
ವಧಿಸಿದನು ಎಂದು ಬರೆದಿದೆ. ಮಯನು ಒಂದು ಸುವರ್ಣವನವನ್ನು ಹಾಗೂ
ಕಾಂಚನಗೃಹವನ್ನು ನಿರ್ಮಿಸಿ ಹೇಮಾಳ ಜೊತೆ ವಾಸಿಸುತ್ತಿದ್ದನು. ಮಯನ
ವಧೆಯಾದನಂತರ ಬ್ರಹ್ಮದೇವನು ಈ ಸುವರ್ಣವನವನ್ನು ಹಾಗೂ ಎಂದೂ
ತೀರದಷ್ಟು ಭೊಗವಸ್ತುಗಳನ್ನು ಮತ್ತು ಕಾಂಚನಮಯ ವಸತಿ ಸ್ಥಾನವನ್ನು
ಹೇಮಾಗೆ ಕೊಟ್ಟನು. ಇವಳು ಸ್ವರ್ಗಕ್ಕೆ ಹೋಗುವಾಗ ಇದೆಲ್ಲವನ್ನೂ ಸ್ವಯಂಪ್ರಭೆಗೆ
ಕೊಟ್ಟಳು. ಇವಳು ನೃತ್ಯ-ಗಾಯನವಿಶಾರದೆಯಾಗಿದ್ದಳು. ಹೇಮಾಗೆ ಮಯನಿಂದ
ಹುಟ್ಟಿದ ಕನ್ಯೆಯೇ ಮಂಡೋದರಿ, ಮಂಡೋದರಿ ರಾವಣನ ಪತ್ನಿ.