ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಕರ್ಣಾಟಕ ವಿಕ್ರಮೋಶೀಯ ನಾಟಕಂ, wwwwwwwwwY ದ್ವೀತೀಯಾಂಕಂ. (ಬಳಿಕ ವಿದೂಷಕನು ಪ್ರವೇಶಿಸುವನು). *ವಿದೂಷಕ-ಓಹ! ಈಗೇನವಾಡಲಿ ! ಬ್ರಾಹ್ಮಣಾರ್ಥಕ್ಕೆ ಒಪ್ಪಿ ಕೂಂಡು ಎಲೆಯಮುಂದೆ ಕೂತುಕೊಂಡ ಬ್ರಾಹ್ಮಣನು ಚಪಲಪಡದ ಹಾಗೆ ತನ್ನ ನಾಲಗೆಯನ್ನು ಹೇಗೆ ತಡೆದುಕೊಳ್ಳಲಾರನೋ ಹಾಗೆ ಜನ ಸಂಘದಲ್ಲಿ ರಾಜರಹಸ್ಯವನ್ನು ಹೊರಪಡಿಸದಹಾಗೆ ನನ್ನ ನಾಲಗೆಯನ್ನು ನಾನು ತಡೆದುಕೊಳ್ಳಲಾರೆ. ಆದ್ದರಿಂದ ನಮ್ಮ ಮಹಾರಾಜನು ಧಾಸನ ವನ್ನು ಬಿಟ್ಟು ಬರುವಸರಂತಕ್ಕ ನಿರ್ಜನವಾಗಿರುವ ವಿವಾನಪ್ರತಿಚ್ಛಂದ ಎಂಬ ಉಪ್ಪರಿಗೆಯಮೇಲಿರುವೆನು. (ಎ೦ದು ಹೋಗಿ ನಿಲ್ಲುವನು). ಚೇಟಿ-(ಪ್ರವೇಶಿಸಿ)ಮಹಾರಾಜನು ಸದ್ಯೋಪಾಸನೆಯನ್ನು ಮಾಡಿ ಕಂಡು ಬಂದಾರಭ್ಯ ವ್ಯಾಕುಲನಾಗಿರುವನು. ಅದಕ್ಕೆ ಕಾರಣವನ್ನು ಆತನ ಮಿತ್ರನಾದ ನಾಣವಕನಿಂದ ತಿಳಿದುಬರುವಂತೆ ಕಾಶೀರಾಜಪುತ್ರಿ ಯಾದ ಮಹಾದೇವಿಯು ನನಗಾಜ್ಞಾಪಿಸಿರುವಳು. ಈಗ ಆತನನ್ನು ಎಲ್ಲಿ ತಾನೇ ಕಾಣಲಿ ! ಹಗೆತಾನೇ ಅವನನ್ನು ವಂಚಿಸಿ ಆವಿಷಯ ವನ್ನು ತಿಳಿಯಲಿ ! ಓಹೋ ! ಗರಿಕೆಯಮೇಲೆ ಬಿದ್ದ ಮಂಜಿನಂತ ಆತನಲ್ಲಿ ರಾಜರಹಸ್ಯವು ಬಹುಕಾಲ ನಿಲ್ಲುವುದಿಲ್ಲ. ಒಳ್ಳೇದು ಆತನನ್ನು ಹುಡು ಕುವನು.

  • ರಾಗ-ಹಿಂದುಸ್ತಾನಿಕಪಿ-ಏಕತಾಳ.

(ತಂಗಂಪಾಟು). ಅರಸನ ಗುಟ್ಟನು | ನಮ್ಮ ಅರಸನ ಗುಟ್ಟನು | ಅರೊಳು ನಾ೦ಮೊದ | ಲೊ ರೆಯುವಮನದ | ಲ್ಲಿರಿಸಲು ಸೈರಿಸೆನು | ಮನದಲ್ಲಿರಿಸಲು ಸೈರಿಸನು |೧|| ಎಡೆಯೊ ಳು ಮುಂಗಡ | ಬಡಿಸಿದ ಭಕ್ಷವ | ತುಡುಕದೆ ಸಂಭ್ರಮ | ಪಡುತಿಹ ವಿಪ್ರನ | ಕುಡಿನಾಲಿಗೆಯಂತಿ | ಅದನಾಂ ನುಡಿಯದ ಸೈಂಸೆನು |೨ಕಡುಚಪಲದಬಾ ಯಿಡಬಹುದೆಂತದ | ಒಡಕಿನಪತಯೋ | ಇಡಗುವುದೇ ಅಲ| ತಡ ಯನು ಸಂಕ ಟವ | ನುಡಿಯದ ತಡೆಯನು ಸಂಕಟವ |೩||