ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋವ್ವ ಶೀಯ ನಾಟಕಂ, rrrr ನಿಪ.-ಮಹಾರಾಣಿಯ ಇಗೋ ನೋಡು ಆ ಭುಜಪತ್ರವನ್ನು ಹುಡು ಕುತ್ತಿರುವ ಸಂಭ್ರಮವೇ ಇದು, ರಾಣಿ-ಒಳ್ಳೇದು ನೋಡೋಣ ಸುಮ್ಮನಿರು, ವಿದೂ-(ಹರ್ಷದಿಂದ ಮುಂದಕ್ಕೆ ಬಂದು ಹಾಗೇ ಹೆಚ್ಚಾಗಿ ಹಿಂದಕ್ಕೆ ಬಂದು) ಮಹಾರಾಜನ ಬಾಡಿದ ತಾವರೆಕುಸುರಿನಂತೆ ಸ್ಕೂಲ್ಪ ನೀಲವರ್ಣ ವಾದ ಈ ನವಿಲುಗರಿಯನ್ನು ಕಂಡು ಇದೇ ಭುಜಪತ್ರವೆಂದು ತಿಳಿದು ಮೋಸಹೋದೆ. ರಾಜ-ಸರ್ವಪ್ರಕಾರದಿಂದ ನಂದಭಾಗ್ಯನಾದ ನಾನು ಕೆಟ್ಟು ಹೋದೆ. ರಾಣಿ.-ಜಾಗ್ರತೆಯಾಗಿ ಬಂದು) ಸಾಕು ಸಾಕು ಇಷ್ಟು ಕಾತರವೇ ತಕ್ಕ ಆರಪುತ್ರನೆ ಇದೋ ಆ ಭುಜಪತ್ರವು ; ಒಪ್ಪಿಸಿಕೊಳ್ಳಬೇಕು. ವಿದೂ-(ಸಂಭಾಏತನಾಗಿ) ಇದೇನು ಮಹಾರಾಣಿ ! ರಾಜ- (ಬೆರಗಾಗಿನೋಡಿ) ದೇವಿಯೆ ನಿನಗೆ ಸುಖಾಗಮನವೆ ? ವಿದೂ-(ಮರೆಯಾಗಿ) ಈಗಲೀಗ ಬಹಳ ಕಷ್ಟಕ್ಕೆ ಬಂತು. ರಾಜ- (ಮರೆಯಲ್ಲಿ) ವಿತ್ತನೆ ಈಗೇನುಮಾಡ ಬೇಕು ? ವಿದೂ.-(ಮರೆಯಲ್ಲಿ) ಒಡವೆಸಹಿತ ಸಿಕ್ಕಿದ ಕಳ್ಳನಿಗೆ ಪ್ರತಿಯಾದ ಮಾತೇನುಂಟು ? ರಾಜ೦-(ಪ್ರಕಾಶ) ದೇವಿ ನಾನು ಇದನ್ನು ಹುಡುಕುತ್ತಿರಲಿಲ್ಲ, ಮತ್ತೊಂದು ರಾಜಕೀಯವಾದ ಪತ್ರಿಕೆಯನ್ನು ಹುಡುಕುತ್ತಿದ್ದೆ, ರಾಣಿ-ಸರಿಸರಿ ! ನಿನ್ನ ಸೌಭಾಗ್ಯವನ್ನು ನೀನು ಮರಸಿಕೊಳ್ಳು ವುದು ಯುಕ. ವಿದೂ-ಅಮ್ರ ಮಹಾರಾಜನಿಗೆ ಜಾರ್ಗತೆಯಾಗಿ ಪಿತೂಪಶಮನ ವಾಗುವಂತೆ ಭೋಜನವನ್ನು ಮಾಡಿಸುವುದಕ್ಕೆ ಯತ್ನಿಸು. S