ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩y ಕರ್ಣಾಟಕ ವಿಕರಶೀಯ ನಾಟಕ. YYYYYYY mamamman ತೃತೀಯ ಅಂಕವು. ಒ 7) (ಅನಂತರದಲ್ಲಿ ಗಾಲವ ಪೈಲವರೆಂಬ ಭರತಮುನಿ ಶಿಷ್ಯರು ಪ್ರವೇಶಿಸುವರು.) ಗಾಲವಂ -ಎಲೈ ಸೈಲವನೆ ಸಮುಪಾಧ್ಯಾಯರು ಇಂದ್ರಭವನಕ್ಕೆ ಹೋಗುವಾಗ ನಿನ್ನನ್ನು ಸಂಗಡ ಕರೆದುಕೊಂಡು ಹೋದರು. ನನ್ನನ್ನು ಅಗ್ನಿಶಾಲೆಯ ರಕ್ಷಣಾರ್ಥವಾಗಿ ಇಲ್ಲೇ ಇರಿಸಿದ್ದರು. ಆದ್ದರಿಂದ ಇಂದ್ರ ಲೋಕದ ಸಮಾಚಾರವೇನು ? ಹೇಳು. ಪೈಲವಂ- ಹಾಗಾದರೆ ಕೇಳು, ನಮ್ಮಪಾಧ್ಯಾಯರು ದೇವಸಭೆಯಲ್ಲಿ ಸರಸ್ವತಿಯಿಂದ ವಿರಚಿತವಾದ ಆಕ್ಷಿಸ್ಮಯಂವರವೆಂಬ ನಾಟಕವನ್ನಾಡಿ ಸಿದರು. ಅಕಾಲದಲ್ಲೊಂದು ಅಕ್ಷ ರ ನಡೆಯಿತು. ಗಾ-ಅದೇನು ! ಹೇಳು ಹೇಳು. ಪೈ-ಆ ನಾಟಕದಲ್ಲಿ ಮೇನಕೆ ವರುಣ ಪುತ್ರಿಯ ವೇಷವನ್ನು ಧರಿ ಸಿದ್ದಳು. ಊರಶಿಯು ಲಕ್ಷ್ಮಿನೇಷವನ್ನು ಧರಿಸಿದ್ದಳು. ವರುಣಪುತ್ರಿ ವೇಷವನ್ನು ಧರಿಸಿದ್ದ ಮೇನಕೆಯು ಸ್ವಯಂವರಕಾಲದಲ್ಲಿ ಲಕ್ಷ್ಮಿ ವೇಷ ವನ್ನು ಧರಿಸಿದ್ದ ಊರತಿಯನ್ನು ಕುರಿತು “ಎಲೆ ಸಖಿ ಇಲ್ಲಿ ದೇವೇಂದ್ರ ಮೊದಲಾದ ಲೋಕಪಾಲಕರ ಪುರೂಪೋತ್ತಮನಾದ ನಾರಾಯಣನ ಸಹ ಬಂದಿರುವರಷ್ಟೆ? ಇವರೊಳಗೆ ನಿನಗೆ ಯಾರಲ್ಲಿ ಅನುರಾಗ ” ಎಂದು ಕೇಳಿದ್ದಕ್ಕೆ ಊರತಿಯು ಪುರುಷೋತ್ತಮನಲ್ಲಿ ಎಂದು ಹೇಳುವುದನ್ನು ಬಿಟ್ಟು ಪುರೂರವನಲ್ಲಿ ಎಂದು ಹೇಳಿಬಿಟ್ಟಳು. ಗಾ-ಬುದ್ದಿಯ ಇಂದ್ರಿಯಗಳ ಕೂಡ ದೈವಾಯುಗಳಾಗಿರು ವುವು. ಆಗ ನನ್ನು ಪಾಧ್ಯಾಯರಾದ ಭರತಮಹರ್ಷಿಗಳು ಆಕೆಯಮೇಲೆ ಕೋಪಿಸಿಕೊಳ್ಳಲಿಲ್ಲವೊ ? ಪೈ. ಅದಕ್ಕೆ ನನ್ನು ಪಾಧ್ಯಾಯರು ಶಾಪವನ್ನು ಕೊಟ್ಟರು. ಗಾ-ಅದು ಹೇಗೆ ? -S