ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕಂ. ೫೭. ಚತುರ್ಥಂಕಂ. (ಸಹಜನ್ಯಾ ಚಿತ್ರಲೇಖೆಯರು ವಿಮಾನಾರೂಢರಾಗಿ ಬರುವರು). ಸಹ-(ಚಿತ್ರಲೇಖೆಯನ್ನು ನೋಡಿ) ಎಲೆ ಚಿತ್ರಲೇಖೆ ನಿನ್ನ ಮುಖವು ಬಾಡಿದ ತಾವರೀಹೂವಿನಂತ ಮಲಿನವಾಗಿರುವುದು ; ಇದನ್ನು ನೋಡಿದರೆ ನಿನ್ನ ಮನಸ್ಸಿನಲ್ಲೇನೋ ದುಃಖವಿರುವಂತೆ ತೋರುವುದು ; ಅದೇನು ನನ್ನ ಸಂಗಡ ಹೇಳಕೂಡದೆ ? ಚಿತ್ರ-ಎಲೆ ಕೆಳದಿ ಯಾವಾಗಲೂ ಊರ್ವಶಿಯಸಂಗಡ ಸೂರೂ ಪಾಸನೆಗೆ ಬರುತ್ತಿದ್ದು, ಈಬಾರಿ ನಿನ್ನ ಸಂಗಡ ಬಂದಿರುವ ನನಗೆ ಊರ್ವ ಶಿಯ ಜ್ಞಾಪಕ ಬಂದು, ತುಂಬಾ ಕಳವಳ ವುಂಟಾಗಿರುವುದು. ಸಹ-ನಿಮ್ಮ ಅನ್ನೋನ್ಯವಾದ ಪ್ರಾತಿಶಯವನ್ನು ನಾನು ಚೆನ್ನಾ ಗಿ ಬಲ್ಲೆ; ಆಮೇಲೆ ? ಚಿತ್ರ.-ಈಗ ನನ್ನ ಸಖಿಯ ವಿಶೇಷವೃತ್ತಾಂತವೇನೆಂದು ಧ್ಯಾನ ಪ್ರಿಯಿಂದ ನೋಡಲು, ಆಕಯು ಬಹಳ ಕಪ್ಪಕ್ಕೆ ಸಿಕ್ಕಿರುವಳಂದು ತಿಳಿದು ಬಂತು. ಸಹ.-(ಕಳವಳಪಟ್ಟು) ಅದೇನು ? ಹೇಳುಹೇಳು. ಚಿತ್ರ-ನನ್ನ ಪ್ರಿಯಸಖಿಯಾದ ಊರ್ವಶಿಯು ಕ್ರಿಡಾಸಕನಾಗಿ ಮಂತ್ರಿಗಳಲ್ಲಿ ರಾಜ್ಯಭಾರವನ್ನು ನೇಮಿಸಿದ ಮಹಾರಾಜನಾದ ಪುರರವ ನನ್ನು ಸಂಗಡ ಕರೆದುಕೊಂಡು ಹೋಗಿ, ಗಂಧಮಾದನಪರ್ವತದ ಮನೆ ಹರವಾದ ಪ್ರದೇಶಗಳಲ್ಲಿ ವಿಹರಿಸುತ್ತಿದ್ದಳು. ಸಹ-ಅಂಥ ಪ್ರದೇಶಗಳಲ್ಲಿ ಅನುಭವಿಸತಕ್ಕದ್ದೇ ಸಂಭೋಗವೆನಿ ಸುವುದು ; ಆಮೇಲೆ ? ಚಿತ್ರ.-ಹೀಗಿರುವಲ್ಲಿ ಆ ಮಹಾರಾಜನು ಒಂದು ದಿವಸ ಗಂಗಾತೀರ ದಲ್ಲಿ ಮರಳುಗುಡ್ಡಗಳಮೇಲೆ ಆಟವಾಡುತ್ತಿದ್ದ ಉದಯವತಿಯಂದ ವಿದ್ಯಾ ಟ 4 '

  • 'ಆರು'

ಆದರೆ M