ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋತೀಯ ನಾಟಕ wwwwwwwwwwwwwwwwwwwwww mormone D T || ಮುನಿಸಂಮಯ ರೆದಿರ್ದೊಡಂಮಹಿಮೆಯಿಂತಾನೀಸುವೊಳನಾ | ಯಿನಿಯರಳನ್ನಮುಂದಸುರರೊಯ್ಯಲ್ಕಾಪ್ಪರೆಂತಾಕೆಯಂ | ಅನುರಾಗಂ ಪಿರಿದೆನ್ನೊಳಾಕಗದರಿಂ ನಾಕಾಲಯಂ ಪೊಕ್ಕಳ || ಅನವದ್ಯಾಂಗಿದೃಕೈಯಾದಳಕಟಾದೈವೇಚ್ಛೆಯೆಂಚಿತ್ರ || (ದಿಕ್ಕುಗಳನ್ನು ನೋಡಿ) ಅಯ್ಯೋ ! ನನ್ನಂಥ ಪುಣ್ಯಹೀನರಿಗೆ ದುಃಖದ ಮೇಲೆ ದುಃಖಬರತಕ್ಕದ್ದು ಸ್ವಭಾವ-.. ಕಂ | ಬಂದುದು ವಿರಹವ್ಯಥೆ ಯಾ | ಸುಂದರಿಯಂ ಕಾಣದೆನಗೆ ಮೇಣದಂಡನೆ || ತಂದುದು ವಿರುಗುವ ತಂಬಿಸಿ | ಲಿಂದಂ ವಳಗಿಂದವಾದ ಮೆಸೆವೀದಿನಮುಂ ||೩|| ಅಹ ! ನನ್ನ ಸಂತಾಪವನ್ನು ನಾನೇ ವ್ಯರ್ಥವಾಗಿ ಉಪೇಕ್ಷಿಸಿಕೊಂಡಿರು ವೆನು. " ರಾಜಾ ಕಾಲ ಕಾರಣc ” ಎಂದು ಮಹಾತ್ಮರಾದ ಮುನಿ ಗಳು ಹೇಳುತ್ತಿರುವ ರಸ್ತೆ ? ಈಗ ಈ ವರ್ಸಾಕಾಲವನ್ನು ನಾನು ಯಾತಕ್ಕೆ ನಿವಾರಣೆ ಮಾಡಕೂಡದು ? (ನೋಡಿ) ಒಂದುವೇಳೆ ಇದನ್ನು ಯಾತಕ್ಕ ನಿವಾರಿಸಲಿ ; ಈ ವರ್ಷಾಕಾಲದಲ್ಲಿ ಉಂಟಾಗತಕ್ಕ ಚಿಹ್ನೆಗ ೪೦ದಲೇ ನನಗೆ ರಾಜೋಪಚಾರವಾಗುತ್ತಿರುವುದು. ಇದೇ ಈಗ,| ಸೆಳವಿಂಚೆಪ್ಪೆ ಸುವರ್ಣಚಿತ್ರನೆನೆ ಮೇಘಶ್ರೇಣಿ ಚಂದ್ರುತಸಂ | ಬೆಳರ್ತಿವೇತಸಗುಟ್ಟಮಕ್ಕು ಮೆನಗುದ್ಯಚ್ಛಾಮರಂಪಾಂಡರಂ | ಕಳಯಲ್ ಬೇಸಗೆನುಣ್ಣ ರಂಬಡೆದು ಸೊಕ್ಕಿರ್ಪ್ಪಿನವಿಲ್ಲ ಳಗ || ಳ್ಳುಳಗಳ' ವಾರಿದವೈಶ್ಯರಿತ್ತಪರುದಾರಾಸಾರಹಾರಂಗಳಂ | ಈಗ ಸುಮ್ಮನೆ ರಾಜೋಪಚಾರಗಳನ್ನು ಶ್ಲಾಘಿಸಿಕೊಂಡದ್ದರಿಂದ ಪ್ರ ಯೋಜನವೇನು ? ಈ ವನದಲ್ಲಿ ನನ್ನ ಪ್ರಾಣಕಾಂತಿಯನ್ನು ಹುಡುಕು ವೆನು. (ಎಂದು ನಡೆದುನೋಡಿ) ಅಯ್ಯೋ ! ಪ್ರಿಯೆಯನ್ನು ಹುಡುಕುವುದಕ್ಕೆ