ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Chacked 1969 ಪಿ ಶ್ರೀ ಕೆ. ಕರ್ಣಾಟಭಾಷೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಶ್ರೀಮನ್ಮಹಾರಾಜ ಚಾಮರಾಜೇಂದ್ರ ಒಡೆಯರವರ ಅಭಿಪಾಯಾನುಸಾರವಾಗಿ ವಿದ್ಯಾಭಿಮಾ ನಿಗಳಾದ ದರ್ಬಾರ್ ಬಕ್ಷಿ ರಾಯಬಹದೂರ್ ಮಹಾರಾಜಿ" ಎ. ನರ ನಿಂಹಯ್ಯಂಗಾರ್ ರವರಿಂದಲೂ, ಮತ್ತು ರಾಜಬಂಧುಗಳಾದ ಮಹಾರಾಜ ಬಕ್ಷಿ ಹೆಚ್. ಲಿಂಗರಾಜೇ ಅರಸಿನವರಿಂದ ಪ್ರೋತ್ಸಾಹಿಸಲ್ಪಟ್ಟು, ಕಾಳಿ ವಾಸ ಮಹಾಕವಿಯಿಂದ ವಿರಚಿತವಾದ ಸಂಸ್ಕೃತ ವಿಕ್ರಮೋಕ್ಷರ್ತದ ನಾಟಕವನ್ನು ೭ ಘಂಟೆಯ ಕಾಲದಲ್ಲಿ ಆಡುವುದಕ್ಕೆ ಅನುಕೂಲವಾಗಿಯ ನಾಟಕಸಂವಿಧಾನ ಕೆಡದಂತೆ ಕೆಲವು ವರ್ಣನಾದಿ ಭಾಗಗಳನ್ನು ಬಿಟ್ಟು ಗಾನಯೋಗ್ಯವಾದ ಪದಗಳಿಂದ ಕೂಡಿ ಪಂಡಿತ ಪಾಮರ ರಂಜಕವಾಗಿರು ವಂತೆ ಕರ್ಣಾಟಕ ಭಾಷೆಯಲ್ಲಿ ಮೊದಲು ಸಂಕ್ಷೇಪವಾಗಿ ರಚಿಸಿದ್ದೆನು. ಈಗೆ ಸಂಸ್ಕೃತನಾಟಕದಲ್ಲಿರುವ ಒಂದಂಶವನ್ನೂ ಬಿಡದೆ ಓದುವವರಿಗೆ ನಾಟಕದವರಿಗೂ ಅನುಕೂಲವಾಗಿರುವಂತೆ ರಚಿಸಿರುತ್ತೇನೆ. ಇದನ್ನು ಆಸ್ಥಾನಪಂಡಿತರಾದ ವೇದಮೂರ್ತಿ ಚಾಮರಾಜನಗರದ ರಾಮಶಾಸ್ತ್ರಿ ಗಳ ಮೈಸೂರು ಗೌರಮೆಂಟ' ಕನ್ನ ಡಸ್ಕೂಲ್ ಹೆಡ್ಮಾಸ್ಟರ್‌ ಮಹಾ ರಾಜ ಬಿ. ಮಲ್ಲಪ್ಪನವರೂ ಆಮೂಲಾಗ್ರವಾಗಿ ಶೋಧಿಸಿ ನೋಡಿ ಸಮ್ಮತಿಸಿರುವುದಕ್ಕಾಗಿ ಕೃತಜ್ಞನಾಗಿರುವೆನು, ಇನ್ನೇನಾದರೂ ಪ್ರವಾದ ವಿದ್ದಲ್ಲಿ ಗುಣಪಕ್ಷಪಾತಿಗಳಾದ ವಿದ್ವಾಂಸರು ತಿಳಿಸಿದರೆ ಅದನ್ನು ಕೃತಜ್ಞ ತೆಯಿಂದ ಗ್ರಹಿಸಿ ಪರಿಷ್ಕರಿಸುತ್ತೇನೆ.” E' ಓದುವವರು ಕೆಳಗಡೆ ಗೀಟುಹಾಕಿರುವ ಸಣ್ಣ ಕ್ಷೆರದಲ್ಲಿ ಮುದ್ರಿತವಾಗಿರುವ ಪದಗಳನ್ನು ಬಿಟ್ಟು, ಓದಿಕೊಳ್ಳತಕ್ಕದ್ದು. ನಾಟಕ ವವರು (*) ಮೊದಲಾದ ಗುರುತುಗಳುಳ್ಳ ಪದ್ಯಗಳನ್ನೂ ವಾಕ್ಯಗಳನ್ನೂ ಬಿಟ್ಟು ಅವುಗಳಿಗೆ ಪ್ರತಿಯಾಗಿ ಕೆಳಗಡೆ ಸಣ್ಣ ಕರದ ಅದೇ ಗುರುತಿನ ಪದಗಳನ್ನು ಉಪಯೋಗಿಸಿಕೊಳ್ಳತಕ್ಕದ್ದು. mo SSF ರ್ಸ ೧vF೧ ನೇ.. ಸೋಸಲೆ ಅಯಶಾಸ್ತ್ರ,