ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೩೩ ದೇವತೆಗಳು ಪಶುಪಾಲಕರಹಾಗೆ ದಂಡವನ್ನು ಕೈಗೆ ತಕೊಂಡು ಪುರುಷರನ್ನು ರಕ್ಷಿಸುವದಿಲ್ಲ. ಹಾಗೆ ರಕ್ಷಿಸುವರೆಂದರೆ ಯಾರನ್ನು ರಕ್ಷಿಸ ಇಚ್ಛಿಸುವರೋ ಅವರನ್ನು ಬುದ್ಧಿಯಿಂದ ಕೂಡಿಸುವರು. ಯಾವ ಯಾವ ವಿಧವಾಗಿ ಪುರುಷನು ಶುಭಕಾರ್ಯಕರಣದ ಲೈ ಮನಸ್ಸನ್ನು ಮಾಡುವನೋ ಅಯಾವಿಧವಾಗಿ ಆ ಪುರುಷನ ಸಮ ಇಷ್ಟಾರ್ಥಗಳೂ ಸಿದ್ಧಿಸುವದು ಸಂದೇಹವಿಲ್ಲ. ಮಾಯಗಳುಂಟಾಗಿ ಮಾಯಗಳಿಂದಲೇ ಜೀವನ ಮಾಡುತ್ತಿರು ವಂಥ ಪುರುಷನನ್ನು ವೇದಗಳು ಪಾಪಗಳಿಂದ ಉದ್ಧಾರವಾಡವು. ಹುಟ್ಟಿದಂಥಾ ರೆಕ್ಕೆಗಳುಳ್ಳ ಪಕ್ಷಿಗಳು ಗೂಡಿನ ಹಾಗೆ ಈ ಚು ರುಷನನ್ನು ವೇದಗಳು ಅಂತ್ಯಕಾಲದಲ್ಲಿ ತ್ಯಾಗಮಾಡುವವು. ಮದ್ಯಪಾನವೂ ಕಲಹವೂ ಬಹುಜನ ವಿರೋಧವೂ ಗತಿಸು ಗಳಿಗೆ ಭೇದವುಂಟು ಮಾಡುವದೂ ಜ್ಞಾತಿಭೇದವೂ ರಾಜ್ಯ ದೇಹವು ಸ್ತ್ರೀಪುರುಷರಿಗೆ ವಿವಾದ ಉಂಟು ಮಾಡುವದೂ ಈ ಮಾರ್ಗಗಳು ದುಷ್ಟಗಳಾದ ಕಾರಣ ತ್ಯಾಗಮಾಡತಕ್ಕವುಗಳೆಂದು ಹಿರಿಯರು ಹೇ ಳುವರು. ಸಮುದ್ರದಲ್ಲಿ ಹಡಗಿನಿಂದ ಮೇ೦ಛರಗೂಡ ಸಮುದ್ರಮಧ್ಯದ * ಮಲವ ತೊಚ್ಛರ್ದಿನೆ ಮಾಡುವದರಿಂದ ಅಧರ್ಮ ಭಯವಿಲ್ಲ ದವನನ್ನೂ ಸಾಮುದ್ರಿಕಾ ಲಕ್ಷ್ಮಣ ತಿಳದವನನ್ನೂ ಪೂರ್ವದಲ್ಲಿ ಚೋರ ನಾಗಿ ಅನಂತರದಲ್ಲಿ ವ್ಯಾಪಾರ ಮಾಡುವವನನೂ ಮನುಷ್ಯರ ಅA ಗಳಿಂದ ಮಾಡಲ್ಪಟ್ಟ ಲೆಗಳಿಂದ ಶಕುನಗಳನ್ನು ಹೇಳಿ ಎರಡನೆ ಯವರನ್ನು ವಂಚನೆ ಮಾಡುವವನನ್ನೂ ವೈದ್ಯನನ್ನೂ ಶತ್ರುವನ್ನೂ ಮಿತ್ರನನ್ನೂ ನಟನನ್ನೂ ಇವರನ್ನೂ ಸಾಕ್ಷಿಯಾಗುವದಕ್ಕ ನುಡಿಯ ಕಡದು.