ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದುರನೀತಿ, ಆದಕಾರಣ ಸುರುಷನು ಕೂರಗಳಾದ ವ್ರತಗಳನ್ನು ಮಾಡಿ ಇರುವವನಾಗಿ ಪಾಪಗಳನ್ನು ಮಾಡದೆ ಇರತಕ್ಕದ್ದು. ಆಗ ಮಾಡಲ್ಪಡುವ ಪಾಪವನ್ನು ಪ್ರಜ್ಞೆಯು ನಾಶಮಾಡುತ್ತದೆ. ಪ್ರಜ್ಞಾಶೂನ್ಯನಾದ ಪುರುಷನು ಪ್ರತಿದಿನದಲ್ಲೂ ಸಾಸವನ್ನೇ ಆರಂಭಿಸುತ್ತಾನೆ. ಆಗ ಮಾಡಲ್ಪಡುವ ಪುಣ್ಯವು ಪ್ರಶ್ನೆಯನ್ನು ಹೊಂದಿಸುತ್ತದೆ. ಪ್ರವರ್ಧಮಾನವಾದ ಪ್ರಜ್ಞೆಯುಳ್ಳ ಪುರುಷನು ನಿರಂತರದಲ್ಲೂ ಪುಣ್ಯವನ್ನು ಮಾಡುದಕೋಸ್ಕರ ಆರಂಭಿಸುತ್ತಾನೆ. ಸುಣ್ಣವನ್ನು ಮಾಡುತ್ತಾ ಪವಿತ್ರವಾದ ತೀರ್ಥವುಂಟಾದವನಾಗಿ ಪವಿತ್ರವಾದ ಸ್ಥಾನವನ್ನು ಹೊಂದುತ್ತಿದ್ದಾನೆ. ಆದ್ದರಿಂದ ಪುರುಷನು ಇಂದ್ರಿಯ ನಿಗ್ರಹವುಂಟಾದವನಾಗಿ ಪುಣ್ಯವನ್ನು ಸೇವಿಸಬೇಕು. ಯಾವನು ಅಸೂಯವುಳ್ಳವನೂ, ಮರ್ಮ ಛೇದಕನೋ, ೩ ದೂರವಕನೋ, ವಿರೋಧ ಮಾಡುವವನೂ, ಗೋವಾದ ಹಾಗೆ ಅಪಕಾರಮಾಡುವವನೋ, ಆ ಪುರುಷನು ಪಾಪವನ್ನು ಮಾಡುತ್ತಾ ಜಾಗ್ರತೆಯಾಗಿ ಮಹತ್ತರವಾದ ಕಷ್ಟವನ್ನು ಹೊಂದುವನು. ಅಸೂಯೆ ಇಲ್ಲದೆ ಪ್ರಜ್ಞಾಶಾಲಿಯಾಗಿ ಶುಭ ಕಾರ್ಯಗಳನೇ ನಿರಂತರದಲ್ಲೂ ಮಾಡುತ್ತಾ ಮಹತ್ತರವಾದ ಕಷ್ಟವನ್ನು ಹೊಂದದೆ ಸಕಲ ವಿಷಯದಲ್ಲೂ ಪ್ರಕಾಶಿಸುವನು. ಯಾವ ಪುರುಷನು ಪ್ರಾಜ್ಞರಿಂದ ಪ್ರಜ್ಞೆಯನ್ನು ಹೊಂದುವ ನೋ ಆ ಪುರುಷನು ಪಂಡಿತನು. ಪ್ರಾಧ್ಯನು ಧಮಾರ್ಥಗಳನ್ನು ಹೊಂದಿ ಸುಖವನ್ನು ಹೊಂದು ವದಕೊಸ್ಕರ ಸಮರ್ಥನಾಗುತ್ತಾ ಇದ್ದಾನೆ. ಯಾವ ಕಾರ್ಯದಿಂದ