ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ವಿದುರನೀತಿ, ಇಯೊಕ್ತಿಗಳನ್ನು ಹೇಳುವದು ಅದಕ್ಕಿಂತ ಉತ್ತಮವಾದದ್ದು. ಸತ್ಯಯುಕ್ತವಾಗಿ ಧರ್ಮ ಸಂಪಾದಕವಾದ ಪ್ರೀತಿಯ ಮಾತನ್ನು ಹೇ ಳುವದು ಮೊದಲು ಹೇಳಿದ ಮಾತಿನಕಿಂತ ಶ್ರೇಷ್ಟವಾದದ್ದು ಈ ನಾಲ್ಲೂ ಒಂದಕ್ಕಿಂತ ಒಂದು ಶ್ರೇಷ್ಟವಾದ ಮಾರ್ಗಗಳು, ಪುರುಷನು ಎಂಥಾ ಗುಣವುಳ್ಳ ಪುರುಷರ ಸಂಗಡ ಸಹ ವಾಸ ಮಾಡುವನೊ, ಎಂಥವನನ್ನು ಸೇವಿಸುವನೊ, ಎಂಥವನನ್ನು ತಾನಾಗ ಬೇಕೆಂದು ಇಚ್ಛಿಸುವನೋ, ಅಂಥವನು ತಾನು ಆಗುವ ನು. ಆದಕಾರಣ ಸತ್ಸಂಗವೇ ಬೇಕಾದದ್ದು, ಯಾವಯಾವ ವಸ್ತುವಿನಿಂದ ಹಿಂದಕ್ಕೆ ತಿರಗುವನೋ ಆಯಾ ವಸ್ತುಗಳನ್ನು ಬಿಡಲ್ಪಡುವನು, ಸಕಲ ವಿಷಯದಲ್ಲೂ ದೂರಸ್ತ್ರನಾ ದ್ದರಿಂದ ಸ್ವಲ್ಪವಾದ ದುಃಖವನ್ನಾದರೂ ಹೊಂದುವನು, ಎರಡನೆಯವರಿಂದ ತಾನು ಬಯಸಲ್ಪಡದೆ ಒಂದು ವೇಳೆ ತಾನು ಬಯಸಲ್ಲಟ್ಟರೂ ಎರಡನೆಯವರನ್ನು ತಾನು ಜಯಿಸಲಿಚ್ಚಿ ಸದೆ ವೈರವನ್ನು ಮಾಡದೆ ಎರಡನೆಯ ವರು ವೈರಮಾಡಿದರೂ ಅವರ ನ್ನು ಹೊಡಿಯದೆ ನಿಂದಾ ಪ್ರಶಂಸೆಗಳಲ್ಲಿ, ಸಮಸ್ಟಭಾವವುಳ್ಳವನು ವ್ಯಸನ ಸಂತೋಷಗಳೆರಡೂ ಉಳ್ಳವನಾಗುವದಿಲ್ಲ. ಯಾವ ಪುರುಷನು ಸತ್ಯ ವಾಕ್ಯವು ಆದ್ರ್ರವಪು.ಕಾದಶೇಂದಿ, ಯ ನಿಗ್ರಹವು ಉಂಟಾಗಿ ಸಮಸ್ತ ಜನರಿಗೂ ನಾನವನ್ನು ಆಪೇಕ್ಷ್ಮಿ ಪದೆ ಒಳ್ಳೇದನ್ನು ಆಪೇಕ್ಷಿಸುವನೆ ಅವನು ಉತ್ತಮನು ಕಪಟಯಕ್ಷವಾದ ಸಮಾಧಾನವನ್ನು ಎರಡನೆಯವಗೆ ಹೇಳೆ ವೆ ತಾನು ಕೊಡುತ್ತೇನೆಂದು ಹೇಳಿದ ಮೇಲೆ ಕೊಡುತ್ತಾ ಎರಡ ನೆಯವರ ಮರ್ಮಗಳನ್ನು ತಿಳಿದು ಉದ್ಘಾಟನೆ ಮಾಡದಂಥಾ ಸು ರುಷನು ಮಧ್ಯಮನು,