ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೫೭ ದ್ದರಿಂದ, ಇಂಥಾ ಆತ ತಾಯಿಯನ್ನೂ ನಿರಂತರವು ತೊಂದರೆಬೀಳು ವಂಥ ಮನಸ್ಸುಳ್ಳಂಥವನನ್ನೂ, ನಿರಂತರವು ಅನೃತ ಹೇಳುವಂಥ ವನನ್ನೂ, ಧೃಡಭಕ್ತಿಯಿಲ್ಲದವನನ್ನೂ, ಅನುರಾಗಶೂನ್ಯನನ್ನೂ, ಅತ್ಯಹಂಕಾರಿಯನ್ನೂ ಈ ಆರು ಜನ ನರಾಧಮರನ್ನು ಶೇರಿಸಬಾರದು. ಸಹಾಯ ಸಂಪತ್ತುಗಳಿಂದ ದ್ರವ್ಯಗಳು ಕಟ್ಟಲ್ಪಡುವಂಥವು; ದ್ರವ್ಯಗಳಿಂದ ಸಹಾಯಗಳು ಕಟ್ಟಲ್ಪಡುವಂಥವು. ಈ ಎರಡರಲ್ಲಿ ಒಂದೂ ಇಲ್ಲದೆ ಹೋದರೆ ಮತ್ತೊಂದು ಸಿದ್ಧಿಸದು. ಪುರುಷನಾದವನು ಸುತರನ್ನು ಉಂಟುಮಾಡಿಕೊಂಡು ಆ ಸುಪುತ್ರನ್ನು ದೇವಋಷಿನಿತ್ಯರುಣಗಳದೆಶೆಯಿಂದ ಅವಿಮುಕ್ತರನ್ನು ಮಾಡಿ ಆ ಪುತ್ರರಿಗೆ ಕೆಲವು ಜೀವನೋಪಾಯವನ್ನುಂಟುಮಾಡಿ ತ ನಗೆ ಉಂಟಾದ ಪುತ್ರಿಯರನ್ನು ಸತ್ಪಾತ್ರದಲ್ಲಿ ದಾನಮಾಡಿ ಅನಂ ತರದಲ್ಲಿ ವಾನಪ್ರಸ್ಥಾಶ್ರಮವನ್ನು ಮಾಡಿಕೊಂಡು ಮಾಸವ್ರತವುಳ್ಳ ನಾಗಿ ಪರಮಾತ್ಮನನ್ನು ತಿಳಿಯತಕ್ಕದ್ದು. ಯಾವ ಕೆಲಸ ಸಮಸ್ತಭೂತಗಳಿಗೂ ತನಗೂ ಹಿತಕರವಾಗಿ ಸುಖಸಂಸಾದಿತನಾಗುವರೋ ಆ ಕೆಲಸವನ್ನು ಯಜಮಾನನು ಮಾ ಡಬೇಕು. ಆ ಕೆಲಸವಾಗುವದು ಧರ್ಮಾರ್ಥ ಸಿದ್ಧಿಗೋಸ್ಕರ ಕಾ ರಣವಾಗುತ್ತದೆ, ಪುತ್ರ ಸಂಗ್ರಹ ಬುದ್ದಿ ಶತ್ರುಪರಾಜಯ ಪ್ರಭಾವವು ಜಾಗ್ರತೆ ಯ ಕಾರ್ಯಕರಣದಲ್ಲಿ ಉದ್ಯುಕ್ತನಾಗುವದು ಕೃಷಿಯು ಯಾವನಿಗೆ ಉಂಟಾಗುವದೋ ಅವನಿಗೆ ಜೀವನವಿಲ್ಲದೆಂಬುವ ಭಯ ಹ್ಯಾಗ ದೀತು? ಪಾಂಡವರೊಡನೆ ವಿರೋಧದಲ್ಲಿ ಉಂಟಾಗುವ ದೋಷಗಳ ನ್ನು ನೀನೇ ನೋಡು. ಈ ಪಾಂಡವರ ಸಂಗಡ ನಿನಗೆ ಉಂಟಾ ಗುವ ವೈರದಲ್ಲಿ ಇಂದ್ರಾದಿ ದೇವತೆಗಳೆಲ್ಲ ವ್ಯಥೆಯುಕ್ತರಾಗಿದ್ದಾರೆ.