ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ ನಿನಗೆ ಪಾಂಡವರ ಸಂಗಡ ಉಂಟಾದ ವೈರದಿಂದ ಭಯದ ಸಲಗಡ ಶೇರಿದ ಇರುವಿಕೆಯಾಗಿಯೂ, ಯಶೋನಾಶವಾಗಿಯೂ, ಶತ್ರುಗಳಿಗೆ ಹರ್ಷವಾಗಿಯೂ, ಇರುವದು, ಎಲೈ ಇಂದ ಸಮಾನವಾದವನೇ, ಭೀಹ್ಮಾಚಾರ್ಯರು ದೊ ಣಾಚಾರ್ಯರು ಅರಸಾದ ಧರ್ಮರಾಯ ಇವರ ಕೋಪವು ಪ್ರವರ್ಧ ಮಾನವಾದದ್ದಾಗಿ ತಿರ್ಯಗ್ರತವಾದ ಧೂಮಕೇತುವಿನ ಹಾಗೆ ಈ ಲೋಕವನ್ನು ನಾಶಮಾಡಹೊಗುವದು. ಆದಕಾರಣ ನಿನ್ನ ನೂರು ಜನ ಮಕ್ಕಳೂ ಕರ್ಣನೂ, ಐದು ಜನ ಪಾಂಡವರೂ, ಸಂಪೂರ್ಣ ಭೂಮಂಡಲವನ್ನು ಪರಿಪಾಲನ ಮಾಡಲಿ. ದುರ್ಯೋಧನಾದಿಗಳು ವನದಂಥವರು, ಪಾಂಡವರು ವ್ಯಾಘದಂಥವ ರು. ವ್ಯಾಘ್ರದಿಂದ ಕೂಡಿದವನವನ್ನು ಭೇದಿಸಿವ್ಯಾಘ್ರಗಳಿಗೆ ಆಸ್ಪದವಿ ಲ್ಲದ ಹಾಗೆ ಮಾಡಿ ವ್ಯಾಘ್ರಗಳು ನಾಶವಾಗುವ ಹಾಗೆ ಮಾಡದೇ ಇರುವ ಹಾಗೆ ಕುರುಪಾಂಡವರು ಪರಸ್ಪರ ಸಹಾಯಭೂತರಾಗಿರಲಿ, ಪಾವಿಷ್ಟರಾದ ಶತ್ರುಗಳು ಹ್ಯಾಗೆ ಎರಡನೇಯವರ ದುರ್ಗು ಣಗಳನ್ನು ತಿಳಿಯಲಿಚ್ಛಿಸುತ್ತಾರೋ ಆ ಪ್ರಕಾರ ಸುಗುಣಗಳನ್ನು ತಿಳಿಯುವದಕ್ಕೆ ಇಚ್ಛೆಯುಳ್ಳವನಾಗುವದಿಲ್ಲ. ಕೇವಲ ಅರ್ಥ ಸಿದ್ಧಿಯನ್ನು ವೃದ್ಧಿ ಹೊಂದಬೇಕೆಂಬ ಪುರುಷ ನು ಆದಿಯಿಂದ ಧರ್ಮವನ್ನು ಮಾಡಬೇಕು. ಹಾಗಂದರೆ ಸ್ಟರ್ಗವ ನ್ನು ಅಮೃತವು ಅನುಸರಿಸಿರುವಹಾಗೆ ಅರ್ಥವು ಧರ್ಮವನ್ನು ಅನುಸರಿಸಿರುವದು. ಯಾವನ ಮನಸ್ಸು ಪಾಸತೀಶದಿಂದ ರಹಿತವಾದದ್ದಾಗಿ ಶುಭ ಕಾರ್ಯಗಳಲ್ಲಿ ನಿರ್ದಿಷ್ಟವಾದದೋ ಆ ಪುರುಷನಿಂದ ಕರ್ಮಕಾಂಡ ಬ್ರಷ್ಟ ಕಾಂಡ, ಮೊದಲಾದ ಸಮಸ್ತವೂ ತಿಳಿಯಲ್ಪಟ್ಟಿದೆ.