ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಬುದ್ದಿಶಾಲಿಯನ್ನು ಕುರಿತು ಅಪಕಾರ ಮಾಡಿ ತಾನು ದೂರ ದೇಶದಲ್ಲಿದ್ದೇನೆಂದು ಮಂದನಾಗಿರಬಾರದು. ಯಾಕಂದರೆ ಬುದ್ಧಿಶಾ ಲಿಯ ಭುಜಗಳು ದೀರ್ಘಾರ್ಹಗಳಾದವಗಳಾದ ಕಾರಣ ಆ ಭುಜಗ ೪ಂದ ಹೊಡೆಯಲ್ಪಟ್ಟಂಥವನಾಗಿ ಸಂಚಾರಮಾಡಲ್ಪಡುತ್ತಾನೆ. ತನ್ನಲ್ಲಿ ವಿಶ್ವಾಸವಿಲ್ಲದವನಲ್ಲಿ ತಾನು ವಿಶ್ವಾಸ ಮಾಡಬಾರ ದು, ತನ್ನಲ್ಲಿ ವಿಶ್ವಾಸ ಉಂಟಾದವನಲ್ಲಿ ತಾನು ಅತಿವಿಶ್ವಾಸಮಾಡ ಬಾರದು. ಅದುಯಾಕಂದರೆ ವಿಶ್ವಾಸಾಧಿಕ್ಯದಿಂದ ಹುಟ್ಟವಂಥ ಭ ಯವು ಮೂಲವನ್ನು ಕತ್ತರಿಸುವದು. ವಿಷಯಗಳಲ್ಲಿ ಇಚ್ಛೆಯಿಲ್ಲದೆ ಭಾರ್ಯ ಸಂರಕ್ಷಣೆಮಾಡು, ಭ್ರತ್ ಪರ್ಯಂತರವೂ ಯಥಾಯೋಗ್ಯವಾಗಿ ದ್ರವ್ಯವನ್ನು ಕೊಟ್ಟು, ಸಂರಕ್ಷಣೆಮಾಡು, ಒಳ್ಳೆ ಮಾತುಗಳನ್ನು ಹೇಳುತ್ತ ಸ್ಟಚ್ಛವಾದ ಮನಸ್ಸುಳ್ಳವನಾಗಿ ಸ್ತ್ರೀಯರ ವಿಷಯವಾಗಿ ಮಧುರೋಕ್ತಿಗೆ ಳನ್ನು ಹೇಳಿ ಸಂರಕ್ಷಣೆ ಮಾಡುತ್ತಿರುವ ಪುರುಷನು ಪರವಶನಾಗು ವದಿಲ್ಲ. ಇಷ್ಟು ಗುಣಗಳು ಧರ್ಮರಾಯನಲ್ಲಿ ಉಂಟಾಗಿರುವದ ರಿಂದ ಲಕ್ಷ್ಮಿಗೆ ಸಮಾನಳಾದ ಬ್ರೌಪದಿಯನ್ನು ರಕ್ಷಿಸುವದು ನಿನ ಗೆ ಅವಶ್ಯಕವಾದದ್ದಾದ ಕಾರಣ ರಕ್ಷಿಸದೆ ಹೋಗುವದು ನಿನಗೆ ಭಯ ಸಂಪಾದಕವಾಗುವದು. ತನ್ನ ಮನಿಗೆ ಪ್ರಕಾಶರಾದ ಭಾಗ್ಯಶಾಲಿಗಳಾದ ಸ್ತ್ರೀಯರು ಲ ಕೈಯಂಥವರಾದ ಕಾರಣ ವಿಶೇಷವಾಗಿ ಸನ್ಮಾನಮಾಡಿ ರಕ್ಷಿಸತಕ್ಕದು. ಅಂತಃಪುರವನ್ನು ತಂದೆಯ ಸ್ವಾಧೀನಮಾಡಿ ಪಾಕ ಶಾಲೆಯನ್ನು ತಾಯಿಯ ಸ್ವಾಧೀನಮಾಡಿ ತನಗೆ ಸಮಾನನಾದವನನ್ನು ಗೋ ಸಂರಕ್ಷಣೆಯಲ್ಲಿರಿಸಿ ಕೃಷಿಯನ್ನು ತಾನೇ ವಿಚಾರಿಸತಕ್ಕದ್ದು.