ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೬೫ ವಧಾರ್ಹನಾದ ಸ್ವಾಧೀನನಾದ ಶತ್ರುವು ಬಿಡತಕವನ, ಯಾಕಂದರೆ ಆ ಶತ್ರುವು ನಮ್ಮನಾಗಿ ಸೇವಿಸುತ್ತಿದ್ದು, ಬಲವುಳ್ಳ ಕಾಲದಲ್ಲಿ ಸಂಹಾರಮಾಡುವನು. ದೇವತೆಗಳೂ ಅರಸರೂ ಬಾಮ್ಮಣರೂ ವ್ಯದೃಬಾಲಾತುರರೂ ಇವರ ವಿಷಯವಾಗಿ ಕ್ರೋಧವಂನು ನಿರಂತರದಲ್ಲಿ ನಿಗ್ರಹಿಸತಕ್ಕದ್ದು. ಮಢಯೋಗ್ಯವಾದ ನಿರರ್ಥಕವಾದ ಕ್ರೋಧವಂನು ವರ್ಜಿಸಿ ದವನು ಶಾಶ್ವತವಾದ ಕೀರ್ತಿಯಂನು ಹೊಂದುವನು. ಸ್ತ್ರೀಯರು ಷಂಡನಂನು ಪತಿಯಾಗಿ ಇಚ್ಛಿಸದ ಹಾಗೆ ಯಾ ವನ ಅನುಗ್ರಹವೂ ಕ್ರೋಧವೂ ನಿಷ್ಪಲವಾದದ್ದೂ ಅವನನ್ನು ಅರ ಪನಾಗಿ ಇಚ್ಛೆಸರು, ಧನ ಸಂಪಾದನಾರ್ಥವಾಗಿ ಸೂಕ್ಷ್ಮ ಬುದ್ದಿ ಪ್ರಯೋಜನವಲ್ಲ ವೆಂದೂ, ಧನ ನಾಶಾರ್ಥವಾಗಿ ಬಡ ಬುದ್ದಿ ಪ್ರಯೋಜನವಲ್ಲವೆಂದೂ, ಪೂರ್ವಕೃತ ಸಂಸ್ಕಾರಾನುಸಾರವಾಗಿ ಸಂಪತ್ತೂ ದ್ರವ್ಯನಾಶವೂ, ಉಂಟಾಗುವದೆಂದು ಪಾದ್ಯನು ತಿಳಿಯುತ್ತಾನೇ' ಹೊರ್ತು ಎರಡ ನೆಯವನು ತಿಳಿಯಲಾರನು. ಯಾಕಂದರೆ ಸೂಕ್ಷ್ಮ ಬುದ್ಧಿಯಿರದವರು ದ್ರವ್ಯವಂತರಾಗುವ ದೂ ಸೂಕ್ಷ್ಮ ಬುದ್ಧಿಯುಳ್ಳವರು ಧನರಹಿತರಾಗುವದೂ ಉಂಟು. ಆದ ಕಾರಣ ವಿವೃದ್ಧರನ್ನು, ಶೀಲವೃದ್ಧರನ್ನು, ವಯೋವೃದ್ದರನ್ನೂ, ಬುದ್ದಿವೃದ್ಧರನ್ನೂ, ಧನವೃದ್ಧರನ್ನೂ, ಸತ್ಕುಲ ಪ್ರಸೂತ ವೃದ್ಧರಾದ ವರನ್ನೂ, ನಿರಂತರದಲ್ಲಿ ಮಢನಾದವನು ಅವಮಾನಮಾಡುತ್ತಾನೆ. ಸತಿಯಿರದೆ ಪ್ರಜ್ಞೆಯಿಂದ ಶೂನ್ಯನಾಗಿ ಅಸೂಯಪರ ನಾಗಿ ಧರ್ಮಿಷ್ಟನದೆ ದುಷ್ಟ ವಾಕ್ಕುಗಳುಂಟಾಗಿ ಕೊಧಿಯಾದ ವನನ್ನು ದುಷ್ಟರು ಜಾಗ್ರತಿಯಾಗಿ ಅನುಸರಿಸುವರು,