ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ವಿರುದ್ಧ ವಾಕ್ಯಗಳನ್ನು ಹೇಳದೆ ದಾನಶೀಲನಾಗಿ ಆಡಿದ ಮಾತು ತಪ್ಪದೆ ಯುಕ್ತವಾದ ಮಾತುಗಳಾಡುತ್ತ ಇರುವದು ಸಮ ಹೈ ಜನರನ್ನೂ ಸ್ವಾಧೀನವಾಗುವ ಹಾಗೆ ಮಾಡುವದು, ಧೈರ್ಯವೂ, ಬಾಹ್ಯಾಂತರ ಇಂದ್ರಿಯ ನಿಗ್ರಹವೂ, ಸುಚಿತೃವೂ, ದಯ, ಅನಿಷ್ಟುರವಾಕ್ಕು, ಮಿತ್ರದ್ರೋಹ ಮಾಡದೆ ಹೋಗುವದೂ, ಇವು ಏಳು ಸಂಪತ್ತನ್ನು ವೃದ್ಧಿಮಾಡಿಸುವಂಥವು. Wತ್ಯ ಪರಿಯಂತರವೂ ಸೇವಕರಿಗೆ ದ್ರವ್ಯವನ್ನು ಯಥಾಯೋ ಗ್ಯವಾಗಿ ಕೊಡದೆ ದುಷ್ಟ ಮನಸ್ಕನಾಗಿ ಕೃತಮ್ಮನಾಗಿ ಲಜ್ಜೆಯಿಲ್ಲ ದ ನರಾಧಮನು ವರ್ಜಿಸತಕ್ಕವನು. ಯಾವನು ದೋಷ ಸಹಿತವಾಗಿ ಈ ದೋಷ ರಹಿತವಾದ ಕೀಯ ಜನವನ್ನು ಯಾವ ಪುರುಷನು ಕೋಪವುಂಟಾಗುವ ಹಾಗೆ ಮಾಡುವನೋ ಅವನು ಸರ್ಪದ ಸಂಗಡ ಯುಕ್ತವಾದ ಮನೆಯಲ್ಲಿ ರಾತ್ರಿವೇಳೆಯಲ್ಲಿ ಪುರುಷನು ಹ್ಯಾಗೆ ಸುಖದಿಂದ ನಿದ್ರೆ ಹೋಗ ನೋ ಹಾಗೆ ಸುಖವಾಗಿರನು, ಯಾರನ್ನು ತಾನು ದೂಷಿಸಿದ ಹಾಗಾದರ ತನ್ನ ಯೋಗಕ್ಷೇ ಮಕ್ಕೆ ದೋಷಗಳುಂಟಾಗುವವೋ ಅಂಥವರನ್ನು ದೇವತೆಗಳೋಪಾದಿ ಯಲ್ಲಿ ಉಪಚರಿಸತಕ್ಕದ್ದು, ಯಾರು ನಿರಂತರದಲ್ಲಿ ಸ್ತ್ರೀಯರಲ್ಲಿ ಯ ಮತ್ತರಲ್ಲಿಯ ಪತಿತರಲ್ಲಿಯ ಆವೂದ್ಯರಲ್ಲಿಯ ಆಸಕ್ತಿ ಯುಳ್ಳವರೋ ಅವರು ಪ್ರಾಣ ಸಂಶಯ ಹೊಂದುವರು. ಯಾವ ಪ್ರದೇಶದಲ್ಲಿ ಪ್ರಾಬಲ್ಯವೊ ವಂಚಕರ ಆಧಿಕ್ಯವೊ ಚಾಲನೇ ಶಿಕ್ಷಿತನೂ ಆ ಪ್ರದೇಶದಲ್ಲಿರುವವರು ಅಸಾ ಧೀನರಾಗಿ ಗರಿಷಾಣಕೃತವಾದ ನಾವೆಗಳು ನದಿಯಲ್ಲಿ ಮುಣಗುವ ಹಾಗೆ ಮು ಆಗಿಹೋಗುವರು