ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ಲೆ ವಿದುರನೀತಿ, ಅಕಾಲದಲ್ಲಿ ಯೋಗ್ಯವಾದ ವಾಕ್ಕುಗಳನ್ನು ಬೃಹಸ್ಪತಿಯಾದರೂ ಹೇಳಿದರೂ ಮೂರ್ಖ ಭಾವವನ್ನು, ಅವಮಾನವನ್ನು ಹೊಂದವನು. ದಾನದಿಂದಲೂ, ಪ್ರಯೋಕ್ತಿಯಿಂದಲೂ, ಮಂತದಿಂದಲೂ, ಮೂಲಮಂತ್ರ ಪುನಶ್ಚರಣೆಯಿಂದಲೂ, ಪ್ರಿಯರಾಗುವವರು ಕೃತ್ರಿಮ ಪ್ರಿಯರು, ಸ್ವಾಭಾವಿಕವಾಗಿ ಪ್ರಿಯರಾಗುವವರೇ ನಿಜವಾದ ಪ್ರಿಯರು. ದ್ವೇಷಿಯಾದವನೂ ಸತ್ತುರುಷನೂ ಬುದ್ದಿಶಾಲಿಯೂ ಪಂಡಿತ ನೂ ಆಗುವಂಥವನಲ್ಲ, ಅದು ಹ್ಯಾಗಂರ ಪ್ರಿಯನ ವಿಷಯವಾಗಿ ಮಾಡಲ್ಪಡುವ ಶುಭ ಕಾರ್ಯಗಳು ದೇಸಿ ವಿಷಯಕವಾಗಿ ಪಾಪ ಸಂಪಾದಕಗಳಾಗುವವು. ದುರ್ಯೋಧನನು ಹುಟ್ಟುತ್ತಲೇ ಇವನ ತ್ಯಾಗದಿಂದ ಸುತ್ರಶತ ಕಕ್ಕೆ ವೃದ್ಧಿಯ, ಇವನನ್ನು ತ್ಯಾಗಮಾಡದೆ ಹೋಗುವದರಿಂದ ಸು ತ ಶತಕಕ್ಕೆ ನಾಶವು ಆದಕಾರಣ ಇವನನ್ನು ತ್ಯಾಗಮಾಡೆಂದು ಆ ಕಾಲದಲ್ಲಿ ನನ್ನಿಂದ ಹೇಳಲ್ಪಟ್ಟಿದೆ. ತನಗೆ ಆಗುವ ಯಾವ ವ್ಯದ್ಧಿ ಭಯಂಕರ ವಾದದ್ದೋ ಆ ವೃದ್ಧಿ ಯು ಬಹು ಮಾನ ಮಾಡತಕ್ಕದಲ್ಲ, ಯಾವ ಕೈಯ ತನಗೆ ವ್ಯ ದಿವುಂಟುಮಾಡುತ್ತದೊ ಆ ಕ್ಷಯವು ಬಹುಮಾನ ಮಾಡತಕ್ಕದ್ದು, ಆದಕಾರಣ ಆ ವ್ಯದ್ಧಿಕ್ಷಯಗಳು ಎರಡನ್ನು ಉತ್ನಮವಾಗಿ ಕ್ಷಯ ವೃದ್ಧಿಗಳಾಗಿ ತಿಳಿಯತಕ್ಕದ್ದು, ಗುಣವೃದ್ಧರು ಕೆಲವರು, ಧನವೃದ್ಧರು ಕೆಲವರುಂಟು, ಗುಣ ಗಳಿಂದ ರಹಿತವಾದ ಧನ ವೃದ್ದರನ್ನು ವಿಸರ್ಜಿಸು. * * `ಅತ್ಯಂತ ಗುಣ ಸಂಪನ್ನ ನಾಗಿ ವಿನಯಯುಕ್ತನಾದ ಪುರುಷ ನು ಒಂದಾನೊಂದು ಕಾಲದಲಾದರೂ ಭೂತಗಳ ವಿಷಯವಾಗಿ ಸೂಕ್ಷ್ಮವಾಗಿದ್ದಾದರೂ ನಾಶವನ್ನು ಅಪೇಕ್ಕಿಸನು. ಆws•