ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬ ನಾರದನೀತಿ. ನಾರದ ನೀತಿ. ಸರ್ವ ಬಂಧು ಸಮೇತನಾಗಿ ಧರ್ಮರಾಜನು, ಮಯಾಸುರ ನಿಂದ ನಿರ್ಮಿಸಲ್ಪಟ್ಟಂಥ ಸಭೆಯಲ್ಲಿ ಕುಳಿತಾಗೈ ನಾರದ ಋಷಿ ಯು ವೀಣಾಪಾಣಿಯಾಗಿ ಭಗವಂತನ ಗುಣಾನುವಾದಗಳ ಗಾಯ ನವನ್ನು ಮಾಡುತ್ತ, ಒಮ್ಮಿಂದೊಮ್ಮೆ ಧರ್ಮರಾಜನ ಸಭೆಗೆ ಬಂದ ನು. ಕೂಡತಿ ರಾಜನು ಅರ್ವಸಾದಗಳಿಂದ ನಾರದನ ಪೂಜೆ ಯನ್ನು ಮಾಡಿ ನವ ತನದಿಂದ ಕೈಗಳನ್ನು ಜೋಡಿಸಿಕೊಂಡು ನಿಂತು ಕುಶಲ ಪ್ರಶ್ನೆಗಳನ್ನು ಮಾಡಿ ಸುಮ್ಮನೆ ನಿಂತುಕೊಂಡನು, ಈ ರೀ ತಿಯಾಗಿ ರಾಜನು ಮಾಡಿದ ಪೂಜೆಯನ್ನು ಆದರಪೂರ್ವಕ ಗ್ರಹಣ ಮಾಡಿ ಪರಮ ಸಂತೋಷಿತನಾಗಿ ಅರಸನ ಕಲ್ಯಾಣಾರ್ಥ ಉದ್ದು ಕನಾಗಿ ನಾರದರು ಮಾತನಾಡುತ್ತಾನೆ. ಎಲೈ ಧರ್ಮರಾಜನೇ, ನೀನು ಧರ್ಮ ಋಷಿಯಾಗಿದ್ದಲ್ಲದೆ ನಿನ್ನ ಪ್ರಜೆಗಳು ಸಹ ಧರ್ಮಶೀಲರಿರುತ್ತಾರೆ. ಆದರೆ ನಿನ್ನ ಹೆಸರಿ ನಂತೆ ನನ್ನ ಧರ್ಮವಾದರೂ ಇರುತ್ತದಷ್ಟೆ? ನಿನಗೆ ರಾಜ್ಯಾದಿಕ ಐಶ್ಚರ್ಯವು ಪ್ರಾಪ್ತವಾದನಂತರ ನಿನ್ನ ಮನಸ್ಸು ದರ್ಮಮಾರ್ಗದ ವಿಷಯದಲ್ಲಿ ಪ್ರವರ್ತವಾಗಿರುವದಷ್ಟೇ? ಈ ಯಾವತ್ತು ರಾಷ್ಟ್ರ ದಲ್ಲಿ ನಾನೇ ಆರಸನೆಂಬುವ ದುಷ್ಟ ಅಭಿಮಾನವು ನಿನ್ನಲ್ಲಿ ಇಲ್ಲವಷ್ಟೇ ? ಯಾವ ಧರ್ಮವು ಪೂರ್ವಜರಿಂದ ನಡೆದು ಬಂದಿರುವ ಅದರಂತೆಯೇ ಅ೦ಖಡಿತವಾಗಿ ನಡಿಸಿರುತ್ತಿಯಷ್ಟೆ? ಶಾಸ್ತ್ರಬೋಧಿತ ಕರ್ಮಕ್ಕೆ ಅನುಸರಿಸಿ ನಡಿಯದೆ ಇರುವದ ರಿಂದ ಯಾವ ದೋಷ ಬರುವದೋ ಅಂಥಾದ್ದರಿಂದ ದೂರಿರುವಿ ಯಷ್ಟೇ?