ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ೮. ಸ ಧರ್ಮದಿಂದ ಅರ್ಥಸಂಪಾದನೆ, ಅರ್ಥದಿಂದ ಧರ್ಮಸಂಪಾ .ಧನೆ ಈ ರೀತಿಯಾಗಿ ನಿರಂತರ ನಡೆಯುತ್ತಿರುವಾಗ್ಗೆ ನಾರಾಯಣನ * ಮನೋಭಾವದಿಂದ ಭಕ್ತಿಯನಿಟ್ಟಿರುವಿಯಷ್ಟೇ? ಅಧರ್ಮೋತ್ಪಾಧಕ ( ಅಧರ್ಮವನ್ನುಂಟು ಮಾಡುವ ) ಅಲ್ಯ ದಂಥ ಯಾವ ಕಾರ್ಯವಿರುವದೋ ಅದನ್ನು ಸ್ವೀಕಾರ ಮಾಡಿರು ತ್ರಿಯಷ್ಟೇ? | ಮೊದಲಿನ ಚಂಚಲವಾದ ಇಂದ್ರಿಯಗಳು ಕಾಮ ಸಂಯೋಗ ದಿಂದ ನಿನ್ನನ್ನು ಭ್ರಮಿಷ್ಯನಾಗಿ ಮಾಡಿಲ್ಲವಷ್ಟೇ? ನಿತ್ಯ ಮತ್ತು ನೈಮಿತ್ತಿಕ ಈ ಎರಡು ಕರ್ಮಗಳು ಅವಶ್ಯ ವಾಗಿ ಮಾಡಲಿಕ್ಕೆ ಬೇಕೆಂಬುವದನ್ನು ನೀನು ತಿಳಿದಿರುವಿಯಷ್ಟೇ? ಕರ್ಮನಿಷೇಧಿಗಳ ಸಂಗಡ ವರ್ಮ ಮಾಡುವದು ಮತ್ತು ಫಲ ದ ಇಚ್ಛೆಯನ್ನು ಮೂಡದಿರುವದು ಇವು ನಿನ್ನ ಧ್ಯಾನದಲ್ಲಿರುತ್ತವಷ್ಟೇ? ಯತ್ನದಿಂದ ಅಥವಾ ಯತ್ನವಿಲ್ಲದೇ ಆಗಲಿ ಅಥವಾ ಸಹದ ವಾಗಿ ದೈವಯೋಗದಿಂದ ಪ್ರಾಪ್ತವಾದ ಯಾವತ್ತು ಸಂಪತ್ತಿಯ ಎಥಾ ವಿಭಾಗದಿಂದ ಎಲ್ಲರಕೂಡ ಉಪಭೋಗ ಮೂಡುತ್ತಿಯಷ್ಟೇ? ಅದ್ರಷ್ಟ ( ದೈವ ) ಪ್ರತಿಕೂಲ ಅಥವಾ ಅನಕೂಲವಾಗಿ ಕಟ್ಟಿ, ಕಡೆಗೆ ಧರ್ಮವು ನಿಷ್ಪಲವೆಂದು ಭಾಸವಾಗಿ, ಆ ಧರ್ಮದ ವಿಷಯದ ನಿನ್ನ ಬುದ್ಧಿಯು ಚಂಚಲತ್ಮವನ್ನು ಹೊಂದುವದರಿಂದ ನೀನೇನಾದ ರೂ ಧರ್ಮಚರಣದಿಂದ ನಡಿಯುವದಕ್ಕೆ ತಪ್ಪುವದಿಲ್ಲವಷ್ಟೆ? ರಾತ್ರಂದಿವಸ ( ಕಾಲಮನದಿಂದ ಅರವತ್ತು ಘಳಿಗೆಗಳ ಕಾಲ ವು ) ಹರಣ ಮೂಡುತ್ತಿರುವಾಗ್ಗೆ, ಪ್ರತಿಕ್ಷಣಕ್ಕೂ ಎಷ್ಟೆಷ್ಟು ಪಾಪ ಪುಣ್ಯಗಳನ್ನು ಮೂಡಿದೆನೆಂಬುವದನ್ನು ನಿನ್ನ ಮನಸ್ಸಿನಲ್ಲಿ ವಿಚಾರ ಮಾಡುತ್ತಿಯಷ್ಟೇ?