ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೯ ಪರಿಚ್ಛೇದ ೨ ಸ್ವಲ್ಪ ಮಾರಿ ಉಡುಗೆಗಳನ್ನು ಹಾಕಿಕೊಳ್ಳಬೇಕೆಂಬುದಾಗಿಯ, ತಮ್ಮ ಆಯತಿಗೆ ಸ್ವಲ್ಪ ಕಡಮೆಯಾಗಿ ಜೀವನವನ್ನು ಮಾಡಬೇಕೆಂಬುದಾಗಿಯೂ, ಲೋಕವ್ಯವಹಾರಜ್ಞರಲ್ಲಿ ಶಿರೋಮಣಿಗಳಾದ ಲಾರ್ಡ್ ಛಸ್ಟರ್‌ ಪ್ಲೇ ರವರು ಹೇಳುತ್ತಾರೆ, ಇದು ನಿಜವಾದ ಮಾತು, ಯಾರ ವೇಷವೂ ಭಾಷೆಯ ಹೃದಯಂಗಮವಾಗಿರುವವೋ, ಅವರು- ಕೂಡಿದಮಟ್ಟಿಗೂ ಇಷ್ಟಾರ್ಧಸಿದ್ದಿ ಯನ್ನು ಹೊಂದುವರು ಈ ವಿಷಯದಲ್ಲಿ ಉದಾಸೀನ ರಾದವರು, ಪ್ರಾಯಕವಾಗಿ ಭಗ್ನ ಮನೋರಧರಾಗುವರು, ಕಾರವಾಸಿ ಗಳೆಲ್ಲ ರೂ ಈ ವಿಷಯಕ್ಕೆ ಸಂಪೂರ್ಣವಾದ ಗಮನವನ್ನು ಕೊಡಬೇಕು. ಉಡುಗೆಯ ವಿಷಯದಲ್ಲಿ ಹೇಗೆ ಗಮನವನ್ನು ಕೊಡಬೇಕೋ, ಹಾಗೆಯೇ ಮನೆಗಳ ವಿಷಯದಲ್ಲಿಯೂ ಸಂಪೂರ್ಣವಾದ ಗಮನವನ್ನು ಕೊಡಬೇಕು, ಮನೆಗಳ, ಅರಮನೆಗಳಾಗಿರಬೇಕೆಂದು ಅಭಿಪ್ರಾಯವಲ್ಲ. ಕೂಡಿದಮಟ್ಟಿಗೂ ವಿಶಾಲವಾಗಿಯ, ಬೆಳಕುಗಾಳಿಗಳಿಗೆ ಅವಕಲಶ ವಳ್ಳುವಾಗಿಯೂ, ಆಯಾ ಜನಗಳ ಅಂತಸ್ತಿಗೆ ಅನುರೂಪವಾದು ವಾಗಿಯ, ನಿರ್ಮಲವಾಗಿರತಕ್ಕ ಕುರ್ಚಿ ಮೇಜು ಜಮಖಾನ ಮೊದಲಾ ದುವುಗಳುಳ್ಳುವಾಗಿಯ, ನೋಡುವುದಕ್ಕೆ ಲಕ್ಷಣವಾಗಿಯ, ಪರಿಚಿತ ರಾದ ದೊಡ್ಡ ಮನುಷ್ಯರು ಒಂದೆಗೂ ಅವರನ್ನು ಕೂರಿಸಿಕೊಂಡು ಮಾತನಾಡುವುದಕ್ಕೆ ಅನುಕೂಲವಾಗಿಯೂ ಇರಬೇಕು, ಹುಲ್ಲು ಮನೆ ಗಳನ್ನು ಕೂಡ ಈ ರೀತಿಯಲ್ಲಿಟ್ಟು ಕೊಳ್ಳುವುದು ಸಾಧ್ಯವಾಗಿರುವುದು. ಸ್ವಂತವಾಗಿ ಮನೆಯುಳ್ಳವರು, ಅದು ಲಕ್ಷಣವಾಗಿರುವಂತೆ ಮಾಡಿಕೊಳ್ಳ ಬಹುದು, ಸ್ವಂತ ಮನೆಗಳಿಲ್ಲದವರು, ಅನುಕೂಲವಾಗಿಯ ಲಕ್ಷ್ಮಣ