ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೩೩ ಪರೀಕ್ಷಿಸಬೇಕೆಂದು, ಒಂದು ಸಣ್ಣ ಸೂಜೆಯನ್ನು ಆ ತಂತಿಯ ಬಳಿಯ ಲ್ಲಿಟ್ಟನು. ಅದು ಆ ಗಡಿಯಾರದ ಒಂದು ಭಾಗಕ್ಕೆ ಆಕರ್ಷಿಸಲ್ಪಟ್ಟಿತು. ಅದನ್ನು ಪರೀಕ್ಷಿಸಿ ನೋಡಲು, ಅಲ್ಲಿ ಅಯಸ್ಕಾಂತವಿದ್ದಿತು. ಅದನ್ನು ತೆಗೆದುಹಾಕಲು, ಗಡಿಯಾರವು ಕ್ರೈಸ್ತವಾಗಿ ನಡೆಯುವುದಕ್ಕು ಸಕ್ರಮ ವಾಯಿತು, ಬೇಜಾರು ಪಡದೆ ಈ ಗಡಿಯಾರವು ಸರಿಯಾಗಿ ನಡೆಯ ದಿರುವುದಕ್ಕೆ ಕಾರಣವೇನಿರಬಹುದೆಂದು ಅವನು ಪರಾಲೋಚಿಸದಿದ್ದಿ ದೃರೆ, ಅವನಿಗೆ ಈ ವಿಷಯವು ಗೊತ್ತಾಗುತ್ತಿದ್ದಿತೆ ? ಎಂದಿಗೂ ಗೊತ್ತಾಗು ತಿರಲಿಲ್ಲ. ನ್ಯೂರ್ಟ ಎಂಬ ಇಂಗ್ಲೀಷ್‌ಗಣಿತಶಾಸ್ತ್ರವಿಶಾರದನು, ಸೂರ್ ಚಂದ್ರ ಮೊದಲಾದ ಗ್ರಹಗಳು ಹೇಗೆ ನಿರಾಧಾರಗಳಾಗಿ ಆಕಾಶಮಾರ್ಗದಲ್ಲಿ ಸಂಚರಿಸುವುವೋ ಅದನ್ನು ನೋಡಿ, ಈ ಸಂಚಾರಕ್ಕೆ ಕಾರಣಗಳನ್ನು ಅನೇಕ ವರುಷ ಸರಾಲೋಚಿಸಿದನು. ಭೂಪ್ರದಕ್ಷಿಣ ಮಾಡಿದವರು, ಈ ಭೂಮಿಯು ಸೂರಚಂದ್ರಾದಿಗಳಂತೆ ಆಕಾಶದಲ್ಲಿರುವುದೆಂಬುದಾಗಿಯೂ ಇದಕ್ಕೆ ಆಧಾರವೇನೂ ಇಲ್ಲವೆಂಬುದಾಗಿಯೂ ಹೇಳಿದ ವಿಷಯವು ಈತನಿಗೆ ಗೊತ್ತಾಯಿತು. ಆಮೇಲೆ, ಹೀಗಿರುವುದಕ್ಕೆ ಕಾರಣವೇನೆಂಬು ದಾಗಿ ಪರಾಲೋಚಿಸಿದನು. ಬಳಿಕ, ನಿರಾಧಾರವಾದ ಪದಾರ್ಧಗಳೆ ಲ್ಲವೂ ಸಕಲಪ್ರದೇಶಗಳಲ್ಲಿಯೂ ಆಕಾಶದಿಂದ ಭೂಮಿಗೆ ಬೀಳುತಿರುವು ದನ್ನು ನೋಡಿ, ಇದಕ್ಕೆ ಕಾರಣವೇನೆಂದು ವಿಚಾರಮಾಡುತ್ತಿದ್ದನು. ಇಂಧ ವಿಚಾರಗಳನ್ನು ಅನೇಕರು ಮಾಡಿ ಇದು ತಿಳಿಯತಕ್ಕುದಲ್ಲವೆಂದು ಬಿಟ್ಟು ಬಿಡುವುದುಂಟು. ಆದರೆ, ಇವನು ಬೇಸರಪಡದೆ, ವಿರಾಮ ಕಾಲ