ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ರಭೂಷಣ ಪರಿಚ್ಛೇದ ೩. ಜರನೀ ದೇಶದ ವಿದ್ಯಾರ್ಥಿಗಳು, ಇತರ ಎಲ್ಲಾ ದೇಶದ ವಿದ್ಯಾರ್ಥಿ ಗಳಿಗಿಂತ ವ್ಯಾಸಂಗಮಾಡುವುದರಲ್ಲಿ ಹೆಚ್ಚು ಶ್ರದ್ಧೆಯುಳ್ಳವರು. ಅದರಿಂ' ದಲೇ, ಆ ದೇಶದ ಪಂಡಿತರೂ ಸಕಲಶಾಸ್ತ್ರವಿಶಾರದರಾಗಿರುತ್ತಾರೆ. ಜರನೀ ದೇಶವು ಯೋಚನೆಗೆ ಪಿತೃಸ್ಥಾನವೆಂದು ಕರೆಯಲ್ಪಡುವುದಕ್ಕೆ, ಇದೇ ಮುಖ್ಯ ಕಾರಣವು, ಆ ದೇಶದ ವಿದ್ಯಾರ್ಥಿಗಳು, ವೇದಜಡರಂತೆ ಪಾರಗ ಳನ್ನು ಗಟ್ಟಿ ಮಾಡುವುದರಲ್ಲಿ ಮಾತ್ರ ತೃಪ್ತರಾಗುವುದಿಲ್ಲ, ಓದಿದ ಗ್ರಂಧ ಗಳು ಸಂಪೂರ್ಣವಾಗಿ ಸ್ವಾಧೀನವಾಗುವಂತೆ ಮಾಡಿ ಕೊಳ್ಳುವುದರಲ್ಲಿ ಇವರು ನಿಪುಣರು, ಶ್ರವಣ ಮನನ ನಿದಿಧ್ಯಾಸನಗಳು ಇವರ ಆಚರಣೆಯ ಲ್ಲಿರುವುವು, ನಮ್ಮ ಹಿರಿಯರು ವ್ಯಾಸಂಗಮಾಡುವುದರಲ್ಲಿ ಯಾವ ಚಿಂತ ನೆಯ ಪದ್ಧತಿಯನ್ನಿಟ್ಟು ಕೊಂಡಿದ್ದರೋ, ಅದು ಈಗ ಜರ್ನ್ಮ ವಿದ್ಯಾರ್ಥಿ ಗಳಲ್ಲಿರುವುದು, ವಿದ್ಯಾರ್ಥಿಗಳು ಹೊಸ ಪಾಠಗಳನ್ನು ಮೊದಲೇ ಓದಿ ಯಾವ ಭಾಗಗಳು ಗೊತ್ತಾಗುವುದಿಲ್ಲವೋ ಅದನ್ನು ಗೊತ್ತು ಮಾಡಿ ಕೆ ಳ್ಳಬೇಕು, ಪಾಠ ನಡೆಯುವಾಗ್ಗೆ ತಿಳಿಯದ ವಿಷಯಗಳಲ್ಲಿ ಪ್ರಶ್ನೆಗಳನ್ನು ಹಾಕಬೇಕು. ಸಂದೇಹ ನಿವೃತ್ತಿಯಾದ ಹೊರತು ಮುಂದಕ್ಕೆ ಹೊರಡ ಬಾರದು, ಈ ರೀತಿಯಲ್ಲಿ ವ್ಯಾಸಂಗಮಾಡಲ್ಪಟ್ಟ ವಿಷಯಗಳು ಕರತಲಾ ಮಲಕವಾಗಿ ಪರಿಣಮಿಸುವವರೆಗೂ ಚಿಂತನೆ ಮಾಡಬೇಕು, ನಮ್ಮ ಪೌರಿಕರು ಹೀಗೆ ಮಾಡುತ್ತಿದ್ದರು. ನಮ್ಮ ಆಧುನಿಕ ವಿದ್ಯಾರ್ಥಿಗಳಲ್ಲಿ ಈ ಚಿಂತನೆಯ ಪದ್ಧತಿಗಳೇ ವಿರಳವಾಗುತ್ತಲಿವೆ. ಇದು ತುಂಬ ಶೋಚನೀ