ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ୦୮ ಳ್ಳುವುದುಂಟು. ಈ ಶಕ್ತಿಯು ಅದ್ಭುತವಾದುದಲ್ಲ; ಇದು ಎಲ್ಲರಿಗೂ ಸಾಧ್ಯವು. ಆವೃತ್ತಿಯನ್ನು ಹಾಕುವುದೇ ಈ ಶಕ್ತಿಯ ರಹಸ್ಯ. ಓದುವ ಗ್ರಂಧಗಳನ್ನು ಎರಡು ಮೂರು ತಿಂಗಳವರೆಗೂ ಪ್ರತಿದಿವಸವೂ ಆವೃತ್ತಿ ಮಾಡಬೇಕು, ಮೂರು ತಿಂಗಳಾದಮೇಲೆ, ಚೆನ್ನಾಗಿ ಹೃದ್ಧ ತವಾದುದನ್ನು ಬಿಡುತ ಹೊಸದಾಗಿ ಓದಿದುದನ್ನು ಆವೃತ್ತಿಹಾಕುತ ಬರಬೇಕು, ಪ್ರತಿ ದಿವಸವೂ, ಹಳೆಯ ಪಾರಗಳ ಆವೃತ್ತಿಗಾಗಿ ಕಾಲುಘಂಟೆಯನ್ನಾದರೂ ವಿನಿಯೋಗಿಸಬೇಕು, ರಜಾದ ದಿವಸಗಳಲ್ಲಿ, ಹಳೆಯ ಪಾರಗಳನ್ನೆಲ್ಲ ಪುನರಾವೃತ್ತಿ ಮಾಡಬೇಕು. - ಈ ರೀತಿಯಲ್ಲಿ ತಪ್ಪದೆ ಪುನರಾವೃತ್ತಿ ಮಾಡುತ್ತ ಒಂದರೆ, ಏಕಸಂಧಿಗ್ರಾಹಿಯಾಗುವುದೇನೂ ಅಸಾಧ್ಯವಲ್ಲ. ಈ ವ್ಯಾಸಂಗದ ಮಹಿಮೆಯಿಂದ, ಮಹಾಕವಿಗಳಾಗಿಯೂ ಅದ್ವಿತೀಯ ಪಂಡಿತರಾಗಿಯ ಆಗುವುದು ಕೂಡ ವಾಗಿ ರಜಾದ ದಿವಸಗಳಲ್ಲಿ ಹಳೆಯ ಪಾಠಗಳ ವ್ಯಾಸಂಗಕ್ಕೋಸ್ಕರ ಕಾಲವನ್ನು ವಿನಿಯೋಗಿಸುವುದು ಯಾರಿಗೆ ತಿಳಿದಿರುವುದಿಲ್ಲ ವೋ, ಅವರೇ ಪ್ರಾಯಕವಾಗಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿರತಕ್ಕವರು, ಈ ರಹಸ್ಯ ವನ್ನು ತಿಳಿದವರು, ಎಂದಿಗೂ ಹೀನಸ್ಥಿತಿಯಲ್ಲಿರುವುದಿಲ್ಲ; ಇವರೆಲ್ಲರೂ ಪಂಡಿತಶ್ರೇಷ್ಪರಾಗಿ ಪರಿಣಮಿಸುವರು ; ಇವರೆಲ್ಲರೂ ತಮ್ಮ ಇಷ್ಟಾರ್ಥ ಪ್ರಾಪ್ತಿಯನ್ನು ಹೊಂದುವರು. ಈ ಎಲ್ಲಾ ದೇಶಗಳಲ್ಲಿಯೂ ಅನೇಕ ಮಹಾಕವಿಗಳು ಲೋಕೋತ್ತರ ವಾದ ಗ್ರಂಧಗಳನ್ನು ಬರೆದಿರುವರು. ಅವರ ಯಶಸ್ಸಿನಿಂದಲೇ ಅವರ ಗ್ರಂಥ ಗಳ ಮಹಿಮೆಯು ದಿಗಂತವಿಶ್ರಾಂತವಾಗಿರುವುದು, ಅವರ ಗ್ರಂಥಗಳು, ಯಕ