ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ? ೧೬೧ wwwx ೧

ಕಾರಣಗಳೆಂಬುದಾಗಿಯೂ, ದುಸ್ಸಂಕಲ್ಪಗಳೂ ಅಸತ್ಯವಾದ ಮಾತೂ ದುಷ್ಕಮ್ಮಗಳೂ ಇಹಪರಗಳ ನಾಶಕ್ಕೆ ಮುಖ್ಯ ಕಾರಣಗಳೆಂಬುದಾಗಿಯೂ, ಧರ್ಮಮಾರ್ಗಾವಲಂಬಿಗಳು ಆದಿಭಾಗದಲ್ಲಿ ಕ್ಷೇಶಕ್ಕೆ ಗುರಿಯಾದಾಗ್ಯೂ ಪರಿಣಾಮದಲ್ಲಿ ತಮ್ಮ ಮನೋವಾಕ್ಕರ್ಮಗಳಿಗೆ ಅನುರೂಪವಾದ ಫಲ ಗಳನ್ನು ಹೊಂದುವರೆಂಬುದಾಗಿಯೂ, ಶ್ರೀರಾಮನಿಗೆ ಅವನ ಸಂಕಲ್ಪಗ ಳಿಗೂ ಸವಿಾಚೀನವಾದ ಮಾತುಗಳಿಗೂ ಸತ್ರಗಳಿಗೂ ತಕ್ಕಂತೆ ಸತ್ಪಲ ಗಳೂ-ದುರ್ಮಗ್ರಪ್ರವರ್ತಕನಾದ ರಾವಣನಿಗೆ ಅವನ ದುಸ್ಸಂಕಲ್ಪ ದಿಂದಲೂ ದುಷ್ಟವಾದ ಮಾತುಗಳಿಂದಲೂ ದುಷ್ಕರ್ಮಗಳಿಂದಲೂ ಅನ ರ್ಧಗಳೂ ಉಂಟಾದುವೆಂಬುದಾಗಿಯೂ, ಜಗದೀಶ್ವರನು ದುಷ್ಟನಿಗ್ರಹ ವನ್ನೂ ವಿಷಪಪ9೨ ನೆಯನ್ನೂ ಮಾಡುವುದರಲ್ಲಿ ಒದ್ಧ ಕಂಕಣನಾಗಿ ಅನಾನ ಸರೋಕರನಾಗಿ ಕೆಲಸಮಾಡುತ್ತಾನೆಂಬುದಾಗಿಯೂ, ಈ ರಾಮಾಯಣದ ದೃಷ್ಟಾಂತದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ಸದ್ಧ ಧಗಳನ್ನು ಅವಕಾಶವಾದಾಗಲೆಲ್ಲ ಶ್ರವಣ ಮಾಡುವುದರಿಂದಲೂ, ಮನನ ಮಾಡುವುದರಿಂದ, ನಿದಿಧ್ಯಾಸನಮಾಡುವುದರಿಂದ, ಮನುಷ್ಯರೂ ಕೂಡ ದೇವತೆಗಳಾಗಿ ನುಣಮಿಸುವರು. ಮಹಾಕಾವ್ಯಗಳ ಪಾರಾಯ ಣದಿಂದ, ಇಂಧ ಅತ್ಯತ್ತಮವಾದ ಲಾಭವು ಲಭ್ಯವಾಗುವುದು ಅದರಿಂ ದಲೇ, ವ್ಯಾಸಂಗದ ರಹಸ್ಯವನ್ನು ತಿಳಿದವರು, ಅತ್ಯುತ್ತಮವಾದ ಗ್ರಂಧ ಗಳನ್ನು ಕ೦ರಸ್ಸವಾಗುವವರೆಗೂ ವ್ಯಾಸಂಗಮಾಡುತ್ತ ಅದರ ರಹಸ್ಯ ಗಳನ್ನು ಶೋಧಿಸುತ್ತ ಬರಬೇಕೆಂದು ಉಪದೇಶಮಾಡುವರು, ಈ ವುಪದೇ ಶವು ಸರ್ವರಿಗೂ ಆದರಣೀಯವಾದುದು, 2]