ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೧. ಪರಿಚ್ಛೇದ ೪ ಇದರ ಜತೆಗೆ ಸಾವಧಾನವಾಗಿ ವರಾಲೋಚಿಸಿ ಕೆಲಸಮಾಡುವುದೂ ತಿಳಿದುಕೊಳ್ಳಲ್ಪಟ್ಟರೆ, ಈ ಮೇಲೆ ಹೇಳಿದ ಗುಣಾತಿಶಯಗಳೆಲ್ಲ ಸಾರ್ಧಕ ವಾಗುವುವು. ಓದುವುದನ್ನು ಅಭ್ಯಾಸಮಾಡತಕ್ಕವರು, ನಿಧಾನವಾಗಿ ಓದಿ ಅರ್ಧವನ್ನು ಗ್ರಹಿಸಿಕೊಳ್ಳಬೇಕು, ಓದಿದ ವಿಷಯಗಳನ್ನು ಚೆನ್ನಾಗಿ ಪರಾಲೋಚಿಸಿ, ಯುಕ್ತಿಯುಕ್ತವಾಗಿ ಸಂಭಾಷಣಮಾಡುವುದನ್ನು ತಿಳಿದು ಕೊಳ್ಳಬೇಕು, ಹಾಗೆ ತಿಳಿದುಕೊಂಡುದುದನ್ನು, ಸಂದೇಹಕ್ಕೆ ಆಸ್ಪದ ಬಾರದಂತೆ ಇತರರಿಗೆ ತಿಳಿಯಿಸುವುದಕ್ಕೋಸ್ಕರ, ಬರೆಯುವುದನ್ನೂ ಅಭ್ಯಾಸಮಾಡಿಕೊಳ್ಳಬೇಕು ಈ ಮೂರು ಅಭ್ಯಾಸಗಳನ್ನೂ ಚೆನ್ನಾಗಿ ಮಾಡಿದವರು, ನಿಜವಾಗಿ ಪರಿಪೂರ್ಣರು, ಅವರು ಪ್ರಾಯಕವಾಗಿ ಲೋಕವ್ಯವಹಾರಜ್ಞರಲ್ಲಿ ಅಗ್ರಗಣ್ಯರಾಗುವರು ಅಚ್ಚಿನ ಕಾರ್ಖಾನೆಗಳು ಸ್ಥಾಪಿಸಲ್ಪಡುವುದಕ್ಕೆ ಮುಂಚೆ, ಪುಸ್ತುಕ ಗಳು ಬಹಳ ಕೊಂಚವಾಗಿದ್ದುವು. ಅವುಗಳೆಲ್ಲ ಕೈಯಲ್ಲಿ ಬರೆಯಲ್ಪಟ್ಟು ವುಗಳಾಗಿದ್ದುವು, ಸ್ವಯಂ ಬರೆಯುವುದಕ್ಕೆ ಯಾರಿಗೆ ಶಕ್ತಿಯಿರುತಿ ದ್ವಿತೋ, ಅವರಲ್ಲಿ ಒಳ್ಳೆಯ ಪ್ರಸ್ತಕಗಳಿರುತಿದ್ದುವು, ಸಿಸಿರೊ ಮತ್ತು ಕ್ವಿಂಟಲಿರ್ಯ ಎಂಬವರ ಗ್ರಂಧಗಳ ಒಂದು ಪ್ರತಿಯನ್ನು ಬರೆದುಕೊಂಡು ಬರುವುದಕ್ಕೋಸ್ಕರ, ಫ್ರೆಂಚ್ ಗವರ್ನಮೆಂಟಿನವರು, ಲೇಖಕರನ್ನು ತಯಾರುಮಾಡಿ, ರಾಯಭಾರಿಗಳ ಜತೆಯಲ್ಲಿ ರೋಮ ಪಟ್ಟಣಕ್ಕೆ ಕಳುಹಿಸಿದರು. ಒಂಬ್ರ ಸಂಸ್ಥಾನದ ಮರಾಧಿಪತಿಯಾದ ಆಲ್ಬರ್ಟಿನ ಭಂಡಾರದಲ್ಲಿ, ಕೈ ಬರಹದ ಪುಸ್ತಕಗಳು ನೂರೈವತ್ತರವರೆಗೆ ಇದ್ದುವು. ಯೂರೋಪ್ ಖಂಡದಲ್ಲಿ ಇದು ಅತ್ಯಂತ ದೊಡ್ಡ ಭಂಡಾರ ದೆಂದು ಗಣಿಸ ಟ ರ