ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಚೇದ ೪ ೧೭೩ ಗಳಾಗಿದ್ದರು. ಈಗ ಸಾವಿರಾರು ಪುಸ್ತಕಗಳುಳ್ಳ ಭಂಡಾರಗಳು ಎಷ್ಟೊ ಜನಗಳ ವಶದಲ್ಲಿರುತ್ತವೆ, ಹೋಮರಿನ ಹಾಗೆ ಕವಿತ್ವವನ್ನು ಮಾಡತಕ್ಕೆ ವನೂ, ಮ್ಯೂಸಿಡೈಡೀಸ್ ಎಂಬವನ ಹಾಗೆ ಚರಿತ್ರೆಯನ್ನು ಬರೆಯತಕ್ಕ ವನೂ, ನಮ್ಮಲ್ಲಿ ಒಬ್ಬನೂ ಸಿಕ್ಕುವುದಿಲ್ಲ, ಅರಿಸ್ಟೋಟಲ್ ಮತ್ತು ಪ್ಲೇಟೋ ಎಂಬವರ ಲೇಖನಿಯ ಶಕ್ತಿಯುಳ್ಳವರಾಗಲಿ, ಡಿಮಾಸ್ತನೀಸನ ವಾಚಾಲತ್ವವುಳ್ಳವರಾಗಲಿ, ಎಲ್ಲಾದರೂ ದೊರೆಯುವರೇ ? ಚಿತ್ರ ಶಿಲ್ಪ ಮೊದಲಾದ ವಿದ್ಯೆಗಳಲ್ಲಿಯೂ ಕೂಡ, ಈಶ್ವದವರು ನಮಗಿಂತಲೂ ಹೆಚ್ಚಾದ ಶಕ್ತಿಯುಳ್ಳವರಾಗಿದ್ದರು. ಹೀಗಿರುವುದು, ಪಾಶ್ಚಾತ್ಯರಲ್ಲಿ ಮಾತ್ರವೇ ಅಲ್ಲ, ಆದಿಕವಿಯಾದ ವಾಲ್ಮೀಕಿಯಂತೆ ನವರಸಭರಿತವಾದ ಗ್ರಂಧವನ್ನು ಬರೆದಿರತಕ್ಕವರು, ನಮ್ಮ ಆಧುನಿಕ ಕವಿಗಳಲ್ಲಿ ಯಾರಿರು ತಾರೆ ? ಶ್ರೀಮಹಾವಿಷ್ಣುವಿಗೆ ಸಮಾನನೆಂದು ಗಣಿಸಲ್ಪಟ್ಟ ವ್ಯಾಸನಂತೆ, ಅದ್ಭುತವಾದ ಗ್ರಂಧಗಳನ್ನು ಯಾರು ಬರೆದಿರುತ್ತಾರೆ ? ಕಾಳಿದಾಸ ಭವಭೂತಿ ದಂಡಿ ಮೊದಲಾದವರಂತೆ, ಲೋಕೋತ್ತರವಾದ ಗ್ರಂಧಗಳನ್ನು ಬರೆದಿರಕ್ಕವರು ಈಗಣ ಕವಿಗಳಲ್ಲಿ ಅಪೂರ್ವವಲ್ಲವೆ ? ಪಾಣಿನಿ ಗದಾಧರ ನತಂಜಲಿ ನಾಗೋಜಿರೀಕ್ಷಿತ ಮೊದಲಾದವರಂತೆ, ಮಲಗ್ರಂಧಗಳನ್ನೂ ಭಾಷ್ಯಗಳನ್ನೂ ಬರೆಯತಕ್ಕವರು ನಮ್ಮಲ್ಲಿರುತ್ತಾರೆಯೇ ? ವೇದಗಳನ್ನೂ ವೇದಾಂತಗಳನ್ನೂ ದರ್ಶನಗಳನ್ನೂ ಸ್ಮೃತಿಗಳನ್ನೂ ಪುರಾಣಗಳನ್ನೂ ಇತಿಹಾಸಗಳನ್ನೂ ಒರೆದು ಅದ್ವಿತೀಯ ಪಾಂಡಿತ್ಯವನ್ನು ತೋರಿಸಿರತಕ್ಕ ಪಂಡಿತೋತ್ತಿವರು, ನಮ್ಮ ಪೌಲ್ವಿಕರಲ್ಲಿ ವಿಶೇಷವಾಗಿರುತಿದ್ದರು, ಈಗ ಹಾಗೆ ಕೆಲಸಮಾಡತಕ್ಕವರು ಅತ್ಯಂತವಿರಳರಾಗಿರುತ್ತಾರೆ. ಶ್ರೀಶಂಕರಾ