ಪುಟ:ವಿದ್ಯಾರ್ಥಿ ಕರಭೂಷಣ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೧೧ ದ್ದರೂ ಕಾಲವನ್ನು ಚೆನ್ನಾಗಿ ವಿನಿಯೋಗಿಸಿಕೊಂಡರೆ-ಅದರಿಂದ ತುಂಬ ಪ್ರಯೋಜನವನ್ನು ಹೊಂದಬಹುದೆಂಬುದಾಗಿಯೂ ಇವರಿಗೆ ಇದ್ದ ನಂಬು ಗೆಯೇ, ಜೈಲಿನಲ್ಲಿಯೂ ಕೂಡ ಇಂಧ ಅಸಾಧಾರಣವಾದ ಕೆಲಸವನ್ನು ಮಾಡುವ ಶಕ್ತಿಯನ್ನು ಇವರಿಗೆ ಊ೦ಟುಮಾಡಿತು. ಭೂಗರ್ಭದಲ್ಲಿ ಚಿನ್ನ ವೇ ಮೊದಲಾದ ಬೆಲೆಯುಳ್ಳ ಲೋಹಗಳೂ ರತ್ನಗಳೂ ಹೇಗೆ ಸಿಕ್ಕು ಇವೆಯೋ, ಹಾಗೆಯೇ ಗ್ರಂಧಗಳಲ್ಲಿ ಬಹಳ ಬೆಲೆಯಾಗತಕ್ಕ ಅಭಿಪ್ರಾಯ ಗಳಿರುತ್ತವೆ. ಆಳವಾಗಿ ಅಗೆದು, ಅಮೂಲ್ಯವಾದ ಲೋಹಗಳನ್ನೂ ರತ್ನ ಗಳನ್ನೂ ತೆಗೆಯುವರು. ಗ್ರಂಧಗಳನ್ನೂ ಕೂಡ ಅದೇ ರೀತಿಯಲ್ಲಿ ಶೋಧಿ ಸಿದ ಹೊರತು, ರತ್ನ ಪ್ರಾಯವಾದ ತತ್ವಗಳು ದೊರೆಯುವುದಿಲ್ಲ. ವಿದ್ಯಾ ಏಹೀನರಾದ ಜನಗಳಿಗೂ, ಸತ್ವತಂತ್ರ ಸ್ವತಂತ್ರರಾದ ವಿದ್ವಾಂಸರಿಗೂ ಬಹಳ ವ್ಯತ್ಯಾಸವಿರುವುದು, ಈ ವ್ಯತ್ಯಾಸಕ್ಕೆ ಕಾರಣವೇನು ? ಸಕಲ ವಿದ್ಯಾವಿಶಾರದರಾದವರು, ತಮ್ಮ ಬುದ್ದಿಯನ್ನು ಸುಶಿಕ್ಷೆಯಿಂದ ತಿದ್ದಿ ಕೊಂಡಿರುವರು. ಈ ಶಿಕ್ಷೆಯ ಮಹಿಮೆಯಿ೦ದ, ಮೇಧಾವಿಗಳು ಹಿಡಿದ ಕೆಲಸವನ್ನು ಅತ್ಯಂತ ಲಕ್ಷಣವಾಗಿ ಮಾಡುವ ಶಕ್ತಿಯನ್ನು ಹೊಂದುವರು ವ್ಯಾಸಂಗಮಾಡದೆ ಯದಾಚಾತರಾಗಿರತಕ್ಕವರು, ಪಶುಗಳಿಗೂ ಮನುಷ್ಯ ರಿಗೂ ಸಾಮಾನ್ಯವಾದ ಪಶುಧರ್ಮಗಳಲ್ಲಿ ಮಾತ್ರ ಸಮರ್ಥರಾಗಿರುವರು. ಬುದ್ಧಿ ಒಲವು ದೇಹದ ಬಲಕ್ಕಿಂತ ಬಹಳ ಹೆಚ್ಚಾದುದು, ಬುದ್ಧಿ ಬಲವು ಳ್ಳವರು, ಬುದ್ಧಿ ಒಲವಿಲ್ಲದವರಿಗಿಂತಲೂ ಅತ್ಯಂತ ಉತ್ತಮವಾದ ಸ್ಥಿತಿ ಯಲ್ಲಿರುವರು , ಇದಲ್ಲದೆ, ಬುದ್ಧಿ ಹೀನರನ್ನು ಆಳುವ ಶಕ್ತಿಯೂ ಕೂಡ ಇವರಿಗುಂಟಾಗುವುದು. ಆನೆಯು ಬೇಕಾದಷ್ಟು ದೇಹಬಲವುಳ್ಳುದು ;