ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ವಿದ್ಯಾರ್ಥಿ ಕರಭೂಷಣ ಪಡೆಯಬೇಕೆನ್ನುವವರೂ, ಮಹಾಕವಿಪ್ರಣೀತವಾದ ಗ್ರಂಧಗಳನ್ನು ಬರೆ ಯುವುದುತ್ತಮವು, ಇದರಿಂದ, ಬರೆಯುವ ಶಕ್ತಿಯ ಅತ್ಯುತ್ತಮ ಸ್ಥಿತಿಗೆ ಬರುವುದಲ್ಲದೆ, ಜ್ಞಾನವೂ ಹೆಚ್ಚುವುದು, ನಿತ್ಯವೂ ಐದಾರು ಗಂಟೆಗಳಿಗೆ ಕಡಮೆಯಿಲ್ಲದೆ ಬರೆಯತಕ್ಕವರ ಬೆರಳಿನ ಶಕ್ತಿಯನ್ನು ನೋಡಿದರೆ, ಆಶ್ಚರವಾಗುವುದು, ಯಂತ್ರಗಳಲ್ಲಿ ಚಕ್ರಗಳು ತಿರುಗುವಂತೆ, ಇವರ ಕೈಯಲ್ಲಿ ಸೇನವು ತಿರುಗುತ್ತಿರುವುದು, ಚಾಗರೂಕತೆಯಿಂದ ಬರೆಯ ತಕ್ಕವರ ಅಕ್ಷರಗಳು, ವೇಗಕ್ಕನುರೂಪವಾಗಿ ಮುಕ್ತಾಫಲಗಳಂತೆ ಪಣ ವಿಸುವುವು. ಆದುದುಂದ, ಪಾಂಡಿತ್ಯದ ಜತೆಗೆ ಲೇಖನಶಕ್ತಿಯನ್ನೂ ಸಂಪಾದಿಸಿಕೊಳ್ಳುವ ಪ್ರಯತ್ನವು ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಮಾಡಲ್ಪಡಬೇಕು. ಅಸಾಧಾರಣವಾದ ಪಾಂಡಿತ್ಯದ ಆರ್ಜನೆಗೆ, ಏಕಾಗ್ರ ತೆಯಿಂದ ಓದುವುದು ಹೇಗೆ ಆವಶ್ಯಕವೋ, ಹಾಗೆ ಬರೆ ಯಾವುದೂ ಕೂಡ ಅತ್ಯಂತ ಆವಶ್ಯಕವು. ಮನಸ್ಸು ಆದ್ಯಂತಗಳಲ್ಲಿದೆ ಉಗ್ರಾಣವೆಂದು ಹೇಳಲ್ಪಡಬಹುದು. ವ್ಯಾಸಂಗಮಾಡುವುದುಂದ, ನಾನಾ ವಿಧವಾದ ಪದಾರ್ಧಗಳನ್ನು ಬೇಕಾ ದಷ್ಟು ಈ ವುಗ್ರಾಣದಲ್ಲಿ ಸೇಸಿಡಬಹುದು ಬೇಕಾದಾಗ ಬೇಕಾದ ಪದಾರ್ಧವನ್ನು ಉಪಯೋಗಿಸಿಕೊಳ್ಳ ಬಹುದು. ಜ್ಞಾನವು ಅನೇಕಮುಖ ವಾಗಿರುವುದು, ನಾವು ವ್ಯಾಸಂಗಮಾಡತಕ್ಕ ಗ್ರಂಧಗಳು, ನಮ್ಮ ವ್ಯಾಸಂಗ ಕ್ಯನುಸಾರವಾಗಿ, ನಮ್ಮ ಮನಸ್ಸೆಂಬ ಉಗ್ರಾಣದಲ್ಲಿ ವಿಷಯಗಳನ್ನು ಶೇಖರಿಸಿ ರಾಶಿಹಾಕುತ್ತವೆ. ಬೇಕಾದಾಗ ಅವುಗಳು ಉಪಯೋಗಕ್ಕೆ ಬರುತ್ತವೆ ಆದರೆ, ಅವುಗಳು ಉಪಯೋಗಕ್ಕೆ ಬರುವಂತೆ ಮಾಡಿಕೊಳ್ಳ