ಪುಟ:ವಿದ್ಯಾರ್ಥಿ ಕರಭೂಷಣ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೪೧ Mmmmmmmmmmmmmmmmmmmmmmmmm ಮಾಡಿಕೊಂಡು, ವ್ಯಾಸಂಗಮಾಡಿದರೆ, ಅಂಧವರು ತಮ್ಮ ವ್ಯಾಸಂಗದ ಫಲವನ್ನು ಹೊಂದುವರು. ಹಾಗಲ್ಲದೆ ವಿಚಾರಶೂನ್ಯತೆಯಿಂದ ವ್ಯಾಸಂಗ ಮಾಡತಕ್ಕವರು, ಉದ್ದಿಷ್ಟ ಫಲವನ್ನು ಹೊಂದದಿರುವುದು ಮಾತ್ರವಲ್ಲದೆ, ಅನರ್ಧಕ್ಕೂ ಗುರಿಯಾಗುವುದುಂಟು ವಿದ್ಯಾರ್ಥಿಗಳು ಯಾವ ವ್ಯಾಸಂ ಗಕ್ಕೆ ಉಪಕ್ರಮಮಾಡಿದಾಗ್ಯೂ, ಅದರ ಪರಿಣಾಮಫಲವನ್ನು ಪ್ರಧಮತಃ ಪರಾಲೋಚಿಸಬೇಕು, ಅದರಿಂದ ಒಳ್ಳೆಯ ಫಲವುಂಟಾಗುವುದೆಂದು ಗೊತ್ತಾದರೆ ಆ ವ್ಯಾಸಂಗವನ್ನು ಹಿಡಿಯಬೇಕೇ ಹೊರತು, ಹಾಗಿಲ್ಲದಿದ್ದರೆ ಹಿಡಿಯಕೂಡದು, ಬಹುಜನ ವಿದ್ಯಾರ್ಥಿಗಳಿಗೂ, ಅವರಿಗೆ ಹಿತೋಪದೇಶ ಮಾಡತಕ್ಕವರಿಗೂ, ಈರೀತಿಯಾದ ವಿಚಾರದಲ್ಲಿ ಆಸಕ್ತಿಯಿರುವುದಿಲ್ಲ. ಇದರಿಂದ ಲಾಭನಿವಾರಣೆಯೊಂದು ಮಾತ್ರವೇ ಅಲ್ಲದೆ, ಅನರ್ಧಪ್ರಾ ಪ್ರಿಯ ಆಗುವುದು, ಇದಕ್ಕೊಂದುದಾಹರಣೆಯನ್ನು ಹೇಳುವುದು ಆವ ಶ್ಯಕವಾಗಿರುವುದು. ವಿಚಾರಪರನಾದ ಒಬ್ಬ ಫಕೀರನು, ಒಂದು ಲಕ್ಷ ರೂಪಾಯಿ ಕೊಟ್ಟರೆ ಒಂದು ಹಿತೋಪದೇಶವನ್ನು ಮಾಡುತ್ತೇನೆಂದು ಗಟ್ಟಿಯಾಗಿ ಕೂಗುತ, ಒಂದು ರಾಜಧಾನಿಯ ಬೀದಿಗಳಲ್ಲಿ ಹೋಗುತ್ತಿದ್ದನು. ಈ ಮಾತು, ಅಲ್ಲಿನ ಪ್ರಭುವಿಗೆ ತಿಳಿಯಿತು. ಅವನು, ಆ ಫಕೀರನನ್ನು ಕರೆಯಿಸಿ, ಅವ ನಿಗೆ ಒಂದುಲಕ್ಷ ರೂಪಾಯಿಗಳನ್ನು ಕೊಟ್ಟು, 66 ನೀನು ಹೇಳುವ ಹಿತೋ ಕ್ರಿಯಾವುದು ?” ಎಂದು ಕೇಳಿದನು. ಅದಕ್ಕೆ ಆ ಫಕೀರನು, “ನೀನು ಯಾವ ಕೆಲಸವನ್ನು ಸಕ್ರಮಿಸಬೇಕಾದರೂ, ಆ ಕೆಲಸದ ಪರಿಣಾಮಫಲ ವನ್ನು ಪರಾಲೋಚಿಸದೆ ಮಾಡಬೇಡ ” ಎಂದು ಹೇಳಿದನು. ದೊರೆಯು