ಪುಟ:ವಿದ್ಯಾರ್ಥಿ ಕರಭೂಷಣ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ವಿದ್ಯಾರ್ಥಿ ಕರಭೂಷಣ ಆದುದರಿಂದ, ದೊಡ್ಡ ಕ್ಷೇಶಗಳು ಕೂಡ, ಅಭ್ಯಾಸಮಹಿಮೆಯಿಂದ ಕ್ಷೇಶ ವಾಗಿ ತೋರುವುದಿಲ್ಲ; ಅಸಾಧಾರಣವಾದ ಕೆಲಸಗಳೆಲ್ಲ ಕ್ಷೇಶದಿಂದ ಸಾಧ್ಯವಾಗುವುವು. ಆದುದರಿಂದ, ವಿದ್ಯಾರ್ಧಿದಶೆಯಲ್ಲಿ ಕ್ಷೇಶಸಾಧ್ಯ ವಾದ ಕೆಲಸಗಳನ್ನು ಅಭ್ಯಾಸಮಾಡಿ ಅದರ ಫಲವನ್ನು ಹೊಂದುವು ದಕ್ಕೆ ಪ್ರಯತ್ನ ಮಾಡುವುದು ಸಲ್ವರಿಗೂ ಕರ್ತವ್ಯವು, ಈ ಕರ್ತವ್ಯವನ್ನು ಯಾರು ಸರಿಯಾಗಿ ನಿರ್ವಹಿಸುವರೋ, ಅವರು ಒಳ್ಳೆಯ ದಶೆಗೆ ಒರುವರು. ಅಭ್ಯಾಸಗಳಲ್ಲಿ ಒಳ್ಳೆಯ ಅಭ್ಯಾಸಗಳು ಹೇಗೋ-ಹಾಗೆ ದುರಭ್ಯಾ ಸಗಳೂ ಇರುತ್ತವೆ. ದುರಭ್ಯಾಸಗಳನ್ನು ಮಾಡುವುದರಲ್ಲಿ ವಿಶೇಷ ಕ್ಷೇಶ ವುಂಟಾಗುವುದಿಲ್ಲ. ದುರಭ್ಯಾಸಗಳು ರೂಢಮೂಲವಾದರೆ, ಅವುಗಳನ್ನು ಬಿಡುವುದು ಬಹಳ ಕಷ್ಟ, ಅನೇಕರಿಗೆ ಇದು ಅಸಾಧ್ಯವಾಗುವುದು. ಬಾಲ್ಯದಲ್ಲಿ ಸ್ತ್ರೀ ಪುರುಷರಿಗೆ ದುರಭ್ಯಾಸಕ್ಕೆ ಅವಕಾಶವಿಲ್ಲದಂತೆ ಏರ್ಪಾ ಡುಗಳನ್ನು ಮಾಡಬೇಕು, ಈ ವಿಷಯದಲ್ಲಿ ಉದಾಸೀನರಾದರೆ, ಅವರು ಕೆಟ್ಟ ಕೆಲಸಗಳನ್ನು ಕಲಿತುಕೊಂಡು ಶೀಘ್ರದಲ್ಲಿಯೇ ಅವು ಗಳಿಗನುರೂಪ ವಾದ ದುಷ್ಪಲವನ್ನು ಹೊಂದುವ ಅವಸ್ಥೆಗೆ ಒರುವರು. ದೂರದೃಷ್ಟಿ ಯುಳ್ಳ ತಾಯಿತಂದೆಗಳೂ, ಗುರುಗಳೂ, ಇಂಧ ದುಷ್ಪರಿಣಾಮವನ್ನು ತಪ್ಪಿಸುವುದಕ್ಕೆ ಬಾಲ್ಯದಲ್ಲಿಯೇ ಪ್ರಯತ್ನ ಮಾಡಬೇಕು, ಹಾಗೆ ಮಾಡದಿ ದ್ದರೆ, ಬಾಲಕರು ಸ್ವಾಧೀನಕ್ಕೆ ಬರುವುದಿಲ್ಲ, ಅಂಧ ಮಕ್ಕಳನ್ನು ಪಡೆ ಯುವುದರಿಂದ ತಾಯಿತಂದೆಗಳಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಅಂತಹ ಮಕ್ಕಳೂ ಕೂಡ ಕೃಧಾರ್ಧರಾಗುವುದಿಲ್ಲ, ಪ್ರಾಯಕವಾಗಿ ಅವರು ದಾರಿದ್ರಕ್ಕೂ, ದಾರಿದ್ರದಿಂದಲೂ ಅವಿವೇಕದಿಂದಲೂ