ಪುಟ:ವಿದ್ಯಾರ್ಥಿ ಕರಭೂಷಣ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ವಿದ್ಯಾರ್ಥಿ ಕರಭೂಷಣ ದಿಸಿ, ದಿರ್ವಾಗಿರಿಗೆ ತರಲ್ಪಟ್ಟರೆ ತನ್ನ ಕೆಲಸವನ್ನು ಚೆನ್ನಾಗಿ ಮಾಡಿ ಧರ್ಮದಿಂದ ರಾಜ್ಯಭಾರಮಾಡುವನೆಂಬ ಪ್ರತ್ಯಯ ಹುಟ್ಟುವಂತೆ ಕರೆ ಗಳನ್ನು ಮಾಡಿರುವನೆಂದು ಗೊತ್ತಾಗುವುದು, ಅಂಧ ಕರಗಳೇ, ಅವನ ದಿರ್ವಾಗಿರಿಗೆ ಮುಖ್ಯ ಕಾರಣಗಳಾಗುವುವು. ಆದುದರಿಂದ, ಜನ್ಮಾಂತರ ವೆಂದರೆ ಭೂತಕಾಲದಲ್ಲಿ ನಾವು ಮಾಡಿದ ಕಾವ್ಯಗಳ ಪರಿಪಾಕವೆಂದು ಭಾವಿಸಬೇಕಾಗುತ್ತದೆ. ಸಮಸ್ತ ಕಾಠ್ಯಗಳಿಗೂ, ಈ ರೀತಿಯಲ್ಲಿ ಕಾರಣ ಗಳಿದ್ದೇ ಇರುವುವು. ಇವುಗಳನ್ನು ಪರಿಶೀಲಿಸಿ ಪೂರ್ವಾಪರಗಳನ್ನು ತಿಳಿದುಕೊಂಡವನು, ವಿವೇಕಿಯೆಂದು ಭಾವಿಸಲ್ಪಡುವನು, ಸಕಲ ವಿದ್ಯೆ ಗಳಿಗೂ, ಇಂಧ ಪೂರ್ವಾಪರಜ್ಞಾನವೇ ಮುಖ್ಯ ವಿಷಯವು. ಇಂಧ ಜ್ಞಾನವು ಲಭ್ಯವಾಗಬೇಕಾದರೆ, ದುರಭಿಮಾನವಿಲ್ಲದೆ ಸಕಲ ವೇದ ಶಾಸ್ತ್ರ ಪುರಾಣೇತಿಹಾಸಗಳನ್ನೂ ವ್ಯಾಸಂಗಮಾಡಬೇಕು. ವ್ಯಾಸಂಗಮಾಡು ವುದರಲ್ಲಿ ವಿಚಾರಸರನಾಗಿಯೂ ಇರಬೇಕು. « ಕೋಣ ಈಯಿತೆಂದರೆ ಕೊಟ್ಟಿಗೆಯಲ್ಲಿ ಕಟ್ಟು' ಎಂದು ಹೇಳತಕ್ಕವರಂತೆ, ಶಬ್ದ ಪ್ರಮಾಣದಲ್ಲಿ ಮಾತ್ರ ಶರಣನಾಗಿರಕೂಡದು, ದೇವರು ಬುದ್ದಿಯನ್ನು ಕೊಟ್ಟಿರುವುದು ವಿಚಾರಕ್ಕೊಸ್ಕರವೆಂಬುದಾಗಿ ತಿಳಿದುಕೊಂಡು, ಅವಿಚಾರಪೂರ್ವಕ ವಾಗಿ ದೊಡ್ಡ ವಿಷಯಗಳನ್ನು ನಂಬಿ ನಡೆಯಬಾರದು, ಶ್ರದ್ಧೆಯಿಂದ ವ್ಯಾಸಂಗಮಾಡುತ ವಿಚಾರದಿಂದ ತಪ್ಪು ಅರ್ಧಗಳನ್ನು ತಿಳಿದು ಕೊಳ್ಳುತ ಆರ್ಬಿಸಲ್ಪಟ್ಟ ಯುಕ್ತಾಯುಕ್ತಜ್ಞಾನವನ್ನು ಅನುಷ್ಟಾನಕ್ಕೆ ತಂದು ಕೊ ಳ್ಳುವುದರಲ್ಲಿ ನಿರತನಾಗಿರತಕ್ಕವನು, ತಾನು ಸುಖವಾಗಿ ಬದುಕುವುದಲ್ಲದೆ, ತನ್ನ ಕುಟುಂಬವನ್ನೂ ತನ್ನ ದೇಶವನ್ನೂ ಒಳ್ಳೆಯ ಸ್ಥಿತಿಗೆ ತರುವುದಕ್ಕೂ