ಪುಟ:ವೀರಭದ್ರ ವಿಜಯಂ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

162 ವೀರಭದ್ರವಿಜಯಂ ಎಲ್ಲಿ ನೋಡಿದೊಡಲ್ಲಿಯಾತನ ಬಿಲ್ಲಲಂಕೃತಿ ಮತ್ತದ ಲ್ಲೆಲ್ಲಿ ನೋಡಿದೊಡಲ್ಲಿಯಾತನ ವಾರಣಂಗಳ ಬೃಂಹಿತಂ | ಎಲ್ಲಿ ನೋಡಿದೊಡಯಾತನ ವಾರುವಂಗಳ ಹೇಪಿತಂ ನಿಲ್ಲದಾವರಿಸಿತ್ತು ಲೋಕವನೆಲ್ಲವಂ ಸರಿಯಾಣ್ಮನಾ || ಎಲ್ಲಿ ನೋಡಿದೊಡಲ್ಲಿಯಾತನ ಬಾಣಭೀಂಕೃತಿ ಮತ್ತದ ಲ್ಲೆಲ್ಲಿ ನೋಡಿದೊಡಲ್ಲಿಯಾತನ ತೇರ ಚೀತ್ತಿ ಸಂತತಂ | ಎಲ್ಲಿ ನೋಡಿದೊಡಲ್ಲಿಯಾತನ ಸೇನೆಯಬ್ಬರದುಬ್ಬರಂ ಮಲ್ಲಸಿಳೆಯೆಲ್ಲಮಂ ರಣರಂಗದಲ್ಲಿ ಮುರಾರಿಯಾ | ವು ಆಗಳ್, ಎಳೆದೇರನಡರ್ದು ಮಿಗೆ ಮು ಪೊಳಲಂ ದಹಿಸಿ ಪೋಪಭವನೆಂಬಿನೆಗಂ | ಪೊಳೆವ ಮಣಿರಧಮನಡರ್ದಾ ಗಳ ತಳರ್ದಂ ವೀರಭದ್ರನಭಿನವರುದ್ರಂ || ಹಿಂದೆ ಪಶುಪತಿಗೆ ಸಾರಧಿ ಯೆಂದೆನಿಸಿದ ಬಿದಿಗೆ ತಾನೆ ಸಾರಧಿಯಾಗೇ | ಇಂದಂ ವೀರಂಗಾಗಣ ವೃಂದಂ ಜಯಜಯಯೆನುತ್ತೆ ಮಿಗೆ ಪೊಗಳಿನೆಗಂ || 1 ಹಗಲೊಭೆಯಿಾತನ ಸಿರಿ ಮಗುಡವನೋಲೈಸೆ 2 ಕುಂದೆನೆನುತುಂ ಸಾರ್ದಾ || ಮೃಗಧರಬಿಂಬವೊ ತಾನನೆ ನಗಪಿದ ನವಮೌಕ್ತಿಕಾತಪತ್ರಂ ಮೆರೆಗುಂ | ಬಿಡದೆ ಢಾಳಿಪ ಚಾಮರಂಗಳ ಮಧ್ಯದೊಳ್ಳಿಗೆ ರಂಜಿತಾ ಮೃಡಕುಮಾರನ ವೀರಭದ್ರನ ಚಾರುವಕ್ಕಮದೊಪ್ಪುಗುಂ | ಸಡಗರಂಬಡೆದಾಡುತೊಪ್ಪುವ ರಾಜಹಂಸಯುಗಂಗಳಾ ನಡುವೆ ಕಣಿ ವಿರಾಜಿಸಿರ್ಪ ನವೀನಕಂಜದೆಂಬಿನಂ || ನೆಗದ ವೃಷಧ್ವಜಂಗ ಆಗನಾಂಗಣದಲ್ಲಿ ತೋರ್ಪ ಸುರಗಂಗೆಯ ವೀ | 1 ಪೊಗಲೊಳೋಭೆ, 2 ಕುಂದದೆನುತುಂ