ಪುಟ:ವೇಣೀಬಂಧನ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- - - - - - - - - ವೇಣೀಬಂಧನ ಕಾರಣ ಇನ್ನು ಮುಂದೆ ಪ್ರಜೆಗಳ ಸಂಹಾರವು ನಿಲ್ಲಲಿ; ರಾಜಕುಲಗಳು ಸ್ವಸ್ಥತೆಯನ್ನು ಹೊಂದಲಿ, ” ಆಗ ಧರ್ಮರಾಜನು ದೇವಿ, ಆಕಾಶದಲ್ಲಿ ತಿರುಗಾಡುವ ನಿಟ್ಟಿ, ಸುರ, ಕಿನ್ನರರು ನಿನ್ನ ವೇಳೇಬಂಧನ ಮಹೋತ್ಸವವನ್ನು ಹೊಗಳುತ್ತಿರುವರು ನೋಡು ಎಂದು ಅಂದನು. ತರುವಾಯ ಧರ್ಮರಾಜನಿಗೆ ರಾಜ್ಯಾಭಿಷೇಕ ವನ್ನು ಮಾಡುವದಕ್ಕಾಗಿ ಶ್ರೀವ್ಯಾಸ ವಾಲ್ಮೀಕಿ ಮೊದಲಾದ ಮಹರ್ಮ್ಮಿಗಳ ನೆರೆದರು. ಯಾದವ ಮತ್ ಮಾಗಧ ಇತ್ಯಾದಿ ಕುಲದ ರಾಜಕುಮಾರರು ಹೆಗಲ ಮೇಲೆ ತೀರ್ಥೋದಕಗಳಿಂದ ತುಂಬಿದ ಸುವರ್ಣ ಕಲಶವನ್ನು ತಕೊಂಡು ಬಂದರು. ಅವರು ಯಥಾವಿಧಿಯಾಗಿ ಧರ್ಮರಾಯನಿಗೆ ನಂಗೆ ಲಾಭಿಷೇಕವನ್ನು ಮಾಡಿದರು. ಈ ಎರಡು ಮಹೋತ್ಸವಗಳನ್ನು ಕಂಡು ಎಲ್ಲರಿಗೂ ಬಹಳ ಆನಂದವಾಯಿತು. ಆ ಕಾಲಕ್ಕೆ ಶ್ರೀಕೃಷ್ಣನು ಧರ್ಮರಾಜನ ನ್ನು ಕುರಿತು, ರಾಜಾ ನಿನಗೆ ಮತ್ತೇನು ಇಚ್ಚೆ ಅದೆ ಹೇಳು. ಅನ್ನಲು, ಪುಂಡರೀ ಕಾಕ್ಷಾ ನೀನು ಪ್ರಸನ್ನನಾಗಿರಲು ಯಾವ ವಸ್ತುವೂ ದುರ್ಲಭವಿಲ್ಲ. ಹೇ ಭಗ ವಂಶಾ, ವಾಸುದೇವ, ನೀನು ಯಾವಾಗಲೂ ನಮ್ಮ ಬೆನ್ನಮೇಲೆ ಇರುವೆ ಯಾದ ಕಾರಣ ನಮಗೆ ಯಾತರ ಕೊರತೆಯಾಗುವದು ? ಜಗತ್ತಿನ ಉತ್ಪತ್ತಿ ಸ್ಥಿತಿಲಯಗಳಿಗೆ ಕಾರಣೀಭೂತನಾದ ನೀನು ಜಗದಾತ್ಮನಾಗಿ ಸಗುಣರೂ ಪದಿಂದ ಈ ವಿಶ್ವದಲ್ಲಿ ಅವತಾರವನ್ನು ತಾಳಿ ಭಕ್ತರ ಸಂರಕ್ಷಣವನ್ನು ಮಾಡುತ್ತಿರುವೆ. ನಿನ್ನ ಚಿಂತನ ಮಾತ್ರದಿಂದಲೇ ತ್ರಿವಿಧ ತಾಪಗಳಿಂದ ಮುಕ್ತಿಯಾಗುವದು. ಆದರೆ ಸಾಕ್ಷಾತ್ ದರ್ಶನವಾದ ಮೇಲೆ ದುಃಖಗಳ ಮಾತೇಕೆ ? ಎಂಥ ದೊಡ್ಡ ದೊಡ್ಡ ಸಂಕಟಗಳು ಒದಗಿದಾಗೊ ಸಕಲ ಶತ್ರುಗಳನ್ನು ಸಂಹರಿಸಿ, ನಮ್ಮ ಸಂರಕ್ಷಣವನ್ನು ಮಾಡಿದೆ ಮತ್ತು ಪಾಂಚಾಲಿಯನ್ನು ದುಃಖಸಾಗರದಿಂದೆ ವಾಟಸಿದೆ. ಇದಕ್ಕೂ ಹೆಚ್ಚಿಗೆ ನಿನ್ನ ಬಳಿಗೆ ನಾನೇನು ಬೇಡತಕ್ಕದ್ದದೆ.