ಪುಟ:ವೇಣೀಸಂಹಾರ ನಾಟಕಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ತ್ರಿಪುರ ಸಂಹಾರವನ್ನು ಮಾಡಿ, ಪ್ರಪಂಚವನ್ನು ಕಾಪಾಡಿದ ಈಶ್ವರನು ನಮ್ಮೆಲ್ಲರನ್ನೂ ರಕ್ಷಿಸಲಿ. ಆ ತ್ರಿಪುರ ಸಂಹಾರಕ್ಕೋಸ್ಕರ ಉದ್ಯುಕ್ತ ನಾದ ಈಶ್ವರನನ್ನು ಆ ಸಮಯದಲ್ಲಿ “ ನನ್ನ ಪತಿಯು ತ್ರಿಪುರವನ್ನು ಸುಡು ವನು, ಅವನಿಗೆ ವಲ್ಲಭೆಯಾದ ನಾನೇ ಧನ್ಯಳು ” ಎಂದು ಪ್ರೀತಿಯಿಂದ ಪಾಶ್ವತಿಯು ನೋಡುತ್ತಿದ್ದಳು. ರಾಕ್ಷಸ ಸ್ತ್ರೀಯರುಗಳು ಭಯದಿಂದ ನೋಡುತ್ತಿದ್ದರು. ಶಾಂತಾಂತಃಕರಣರಾದ ಋಷಿಗಳು ಕರುಣೆಯಿಂದ ನೋಡುತ್ತಿದ್ದರು. ವಿಷ್ಣು ವು ಮಂದಹಾಸದಿಂದ ನೋಡುತ್ತಿದ್ದನು, ರಾಕ್ಷಸರುಗಳು ಗರ್ವದಿಂದ ನೋಡುತ್ತಿದ್ದರು. ದೇವತೆಗಳು ರಾಕ್ಷ ಸರ ನಾಶದಿಂದ ಲೋಕವೆಲ್ಲವೂ ಭಯದಿಂದ ಮುಕ್ತವಾಯಿತೆಂದು ಸಂತೋಷದಿಂದ ನೋಡುತ್ತಿದ್ದರು. ಹೀಗೆ ನಾನಾ ವಿಧವಾದ ಭಾವಗ ಳಿಂದ ನೋಡಲ್ಪಟ್ಟ ಈಶ್ವರನು ಎಲ್ಲರನ್ನೂ ಕಾಪಾಡಲಿ. ರಜಸ್ತಮೋಗುಣಗಳನ್ನ ಇದು ಶುದ್ಧ ಸತ್ವ ಪ್ರಧಾನವಾಗಿ ಭಾರತವೆಂಬ ಅಮೃತವನ್ನು ನಿರ್ಮಿಸಿದ ವ್ಯಾಸ ಮಹಾಋಷಿಗಳನ್ನು ನಮಸ್ಕರಿಸಿ, ಸಭಾ ಸದರಲ್ಲಿ ವಿಜ್ಞಾಪಿಸುವೆನು. ಎಲೈ ಸಭಾಸದರೆ, ನಿಮ್ಮ ಗಳಲ್ಲಿ ಕಾವ್ಯಬಂಧ ರೂಪವಾದ ಪುಷ್ಪಾಂಜಲಿಯನ್ನೆರಡುವೆನು. - ಭಮರಗಳು ಪುಷ್ಪಗಳಲ್ಲಿ ಮಕರಂದಗಳನ್ನು ಮಾತ್ರ ಪರಿಗ್ರಹಿಸು ವಂತೆ ಈ ಕಾವ್ಯಬಂಧದಲ್ಲಿ ಅತ್ಯಲ್ಪವಾಗಿ ಕಾಣುವ ಗುಣಗಳನ್ನು ಮಾತ್ರ ಪರಿಗ್ರಹಿಸಬೇಕು. ಕವಿಸಿಂಹನಾದ ಭಟ್ಟ ನಾರಾಯಣನಿಂದ ನಿರ್ಮಿಸ - ಲ್ಪಟ್ಟ ವೇಣೀಸಂಹಾರವೆಂಬ ನಾಟಕವನ್ನು ಅಭಿನಯಿಸುವುದಕ್ಕೆ ಉದ್ಯು ಕ್ಯರಾಗಿದ್ದೇವೆ. ಆದಕಾರಣ ಕವಿಯ ಪರಿಶ್ರಮದಿಂದಲಾಗಲಿ, ಹೊಸ ದಾದ ನಾಟಕವನ್ನು ನೋಡುವ ಕುತೂಹಲದಿಂದಲಾಗಲಿ, ಔದಾರ್ಯ ಗುಣವುಳ್ಳ ಕಥಾನಾಯಕನ ಗೌರವದಿಂದಲಾಗಲೀ, ನೀವು ಈ ನಾಟಕವನ್ನ ನೋಡುವುದರಲ್ಲಿ ಸಾವಧಾನರಾಗಬೇಕೆಂದು ಪ್ರಾರ್ಥಿಸುತ್ತೇನೆ. (ತೆರೆಯಲ್ಲಿ) ಎ ವಿದ್ವಾಂಸನೆ, ಜಾಗ್ರತೆ ಮಾಡು ! ಚಗ್ರತೆ ಮಾಡು !! ವಿದು ರನ ಅಪ್ಪಣೆಯಂದ ಇವರುಗಳೆಲ್ಲರೂ ಹೀಗೆ ಹೇಳುವರು –