ಪುಟ:ವೇಣೀಸಂಹಾರ ನಾಟಕಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿಸಂಹಾರ ನಾಟಕ 12 , ಭೀಮ :--- ನೀನೇನು ಹೇಳಿದೆ? ಚೇಟಿ :ಎಲೌ ಭಾನುಮತಿಯೇ, ನಿಮ್ಮ ಕೇಶಗಳು ಬಿಚ್ಚಿ ಹೋಗದೇ ಇರುವಾಗ - ನಮ್ಮ ದೇವಿಯು ಏಕೆ ಕಟ್ಟುವಳು ? ಎಂದು ಹೇಳಿದೆನು. ಭೀಮ :- (ಬಹುಸಂತೋಷದಿಂದ) ಬುದ್ಧಿಮತಿಕೇ, ನಮ್ಮ ವರಿಜನರು ಆಡುವುದಕ್ಕೆ ಯೋಗ್ಯವಾದ ಮಾತನ್ನೇ ಆಡಿದೆ. (ಎಂದು ತನ್ನ ಆಭರಣವನ್ನು ಬುದ್ಧಿಮತಿಕೆಗೆ ಕೊಡುವನು.) ಪಾಂಚಾಲರಾಜಪುತ್ರಿಯೇ, ಬಹು ಶೀಘ್ರವಾಗಿಯೇ ಈ ಕೈಗಳಿಂದ ಪ್ರಚಂಡವಾದ ಗದೆಯನ್ನು ತಿರುಗಿಸುತ್ತ ದುರ್ಯೋಧನನ ತೊಡೆಗಳನ್ನು ಪುಡಿಪುಡಿ ಮಾಡಿ, ಘಟ್ಟಿಯಾದ ರಕ್ತದಿಂದ ಕೆಂಪಾದ ಕೈಯುಳ್ಳವನಾಗಿ, ಈ ಭೀಮನು ನಿನ್ನ ಕೆಶಪಾಶಗಳನ್ನು ಕಟ್ಟುವನು, ದ್ರೌಪದಿ:-ನಾಥ, ನೀನು ಕೋಪಗೊಂಡರೆ ಯಾವುದು ತಾನೆ ಅಸಾಧ್ಯವು ? ನಿನ್ನ ಈ ವ್ಯವಸಾಯವನ್ನು ನಿನ್ನ ಅಣ್ಣತಮ್ಮಂದಿರು ಸಮ್ಮತಿಸಬೇಕು, ಸಹದೇವ :-ಇದು ನಮಗೆ ಸಮ್ಮತವೆ. (ತೆರೆಯಲ್ಲಿ ಕಲಕಲಧ್ವನಿಯಾಗುವುದು. ಎಲ್ಲರೂ ಆಶ್ಚರ್ಯದಿಂದ ಕಿವಿಗೊಟ್ಟು ಕೇಳುವರು.) ಭೀಮ :- (ಸಂತೋಷದಿಂದ) ಸಮುದ್ರವನ್ನು ಕಡೆಯುವಾಗ ಸಮುದ್ರದ ನೀರುಗಳೆಲ್ಲವೂ ಮಂದರ ಗುಹೆಗಳಿಗೆ ಪ್ರವೇಶಿಸಿ ಧ್ವನಿಮಾಡುವಂತೆ ಗಂಭೀರವಾಗಿಯೂ, ಪ್ರಳಯಕಾಲದ ಗುಡುಗಿನಂತೆ ಘೋರವಾಗಿಯೂ, ಕೌರವ ರುಗಳ ಮರಣಕ್ಕೆ ಉತ್ಪಾತ ಸೂಚಕವಾದ ಸಿಡಿಲಿನಂತೆಯೂ, ನನ್ನ ಸಿಂಹ ನಾದದಂತೆಯೂ, ಧ್ವನಿಮಾಡುವ ದುಂದುಭಿಯನ್ನು ಯಾರು ಹೊಡೆಯುವರು ? (ಸಡಗರದಿಂದ ಕಂಚುಕಿಯು ಪ್ರವೇಶಿಸುವನು.) ಕಂಡುಕಿ :ಕುಮಾರನೆ, ಪಾಂಡವರಲ್ಲಿ ಪಕ್ಷಪಾತದಿಂದ ಕುಪಿತನಾದ ಕುರು ರಾಜನು ಭಗವಂತನಾದ ವಾಸುದೇವನನ್ನು ಕಟ್ಟುವುದಕ್ಕಾ ರಂಭಿಸಿದನು. (ಎಲ್ಲರೂ ಆಶ್ಚರ್ಯಪಡುವರು.)