ಪುಟ:ವೇಣೀಸಂಹಾರ ನಾಟಕಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಚಾರ ನಾಟಕ ಭಂಗಬರುವುದೆಂಬ ಭಯದಿಂದ ಪ್ರಯತ್ನ ಪಟ್ಟು ಕಡಮೆ ಮಾಡಿಕೊಂಡಿದ್ದಿ ದ್ದಲ್ಲದೆ, ವಂಶಕ್ಕೆ ಶಾಂತಿಯನ್ನ ಸೇಕ್ಷಿಸಿ, ಸೈರಣೆಯುಳ್ಳ ಧರ್ಮರಾಯನು ಕೊನೆಗೆ ಮರೆತುಬಿಡುವುದಕ್ಕೂ ಕೂಡ ಅಪೇಕ್ಷಿಸಿಕೊಂಡಿದ್ದ, ದೂತದಲ್ಲಿ ಹುಟ್ಟಿದ ದೌಪದಿ ಕೆಶಾಂಬರಾಕರ್ಷಣಗಳಿಂದ ಬೆಳೆದ ಧರ್ಮರಾಯನ ಕ್ರೋಧಾಗ್ನಿಯು ಕುರುವನದಲ್ಲಿ ದೊಡ್ಡದಾಗಿ ಹಬ್ಬುತ್ತಲಿದೆ. ಛಿ' ನು :--ಕೆಳಿ ಸಂತೋಷದಿಂದಲೂ, ಕೊಪದಿಂದಲೂ) ಹಬ್ಬಲಿ ! ಹಬ್ಬಲಿ ! ಈಗ ಆರೈನ ಕ್ರೋಧವು ಅಪ್ರತಿಹತವಾಗಿರುವುದು. - (ತೆರೆಯಲ್ಲಿ ಪುನಃ ಕಲಕಲವಾಗುವುದು.) ದೌಪದಿ :-ನಾಧನೆ', ಪ್ರಳಯಕಾಲದ ಮೆಘದ ಗುಡುಗಿನಂತೆ ಈಗ ರಣರುಂ ದುಭಿಯು ಅಡಿಗಡಿಗೂ, ಏಕೆ ಹೊಡೆಯಲ್ಪಡುತ್ತದೆ ? ಭೀಮ :-ಬೇರೆ ಏನು ? ಒಂದು ಯಜ್ಞವು ಪ್ರಾರಂಭವಾಗುವುದು. ಪವಿ:-ಯಾವ ಯಜ್ಞ ? ಭೀಮು:-ರಣಯಜ್ಞವು. ಇದರಲ್ಲಿ ನಾವು ನಾಲ್ಕು ಜನಗಳು ಋತ್ವಿಕ್ಕು ಗಳು. ಭಗವಂತನಾದ ಕೃಷ್ಣನೆ: ಕರ್ಮೊಪದೇಶಕನು. ಧರ್ಮರಾಯನೇ ದೀಕ್ಷಿ ತನು. ಅವನ ಪತ್ನಿಯಾದ ನೀನು ವ್ರತವನ್ನು ಗ್ರಹಿಸಿರುವಿ. ಕೌರವರೇ ದತುಗಳು. ಪತ್ನಿಯ ಅವಮಾನದಿಂದುಂಟಾದ ಕೈಶದ ಉಪಶಾಂತಿಯೆ? ಸು. ರಾಜರುಗಳನ್ನು ಕರೆಯುವುದಕ್ಕೋಸ್ಕರ ದುಂದುಭಿ ವಾದ್ಯವು ಧ್ವನಿಮಾಡುತ್ತಲಿದೆ. ಸುದೆವ :-ಆರನೇ, ಗುರುಜನರ ಅಪ್ಪಣೆಯನ್ನು ತೆಗೆದುಕೊಂಡು, ನಮ್ಮ ಸರಾ ಕ್ರಮಕ್ಕೆ ತಕ್ಕಂತೆ ಕೆಲಸ ಮಾಡುವುದಕ್ಕೋಸ್ಕರ ಈಗ ನಾವು ಹೋಗೋಣ ಭೀಮು :-ಆರನ ಅಪ್ಪಣೆಯಂತೆ ನಡೆಯಲು ಸಿದ್ಧನಾಗಿಯೇ ಇರುವೆನು. (ಎದ್ದು) ದೇವಿಯೆ?, ಕುರುಕುಲ ಕ್ಷಯಕ್ಕೋಸ್ಕರ ಇನ್ನು ಹೋಗೋಣ. ದೌಪದಿ :-(ಬಾಷ್ಪವನ್ನು ಬಿಗಿಹಿಡಿದು ) ನಾಥನೇ, ರಾಕ್ಷಸರೊಂದಿಗೆ ಯುದ್ಧ ಮಾಡುವುದಕ್ಕೆ ಹೊರಟ ನಾರಾಯಣನಿಗೆ ಆದ ಮಂಗಳವು ನಿನಗೆ ಆಗಲಿ,